ಚಳ್ಳಕೆರೆ:
೧೨ನೇ ಶತಮಾನದಲ್ಲಿ ಬಸವಣ್ಣನವರು ಪ್ರತಿಪಾದಿಸಿರುವಂತೆ ಲಿಂಗ ತಾರತಮ್ಯ ಇಲ್ಲದೆ ಸಮಾಜದಲ್ಲಿ ಹೆಣ್ಣು-ಗಂಡನ್ನು ಸಮಾನವಾಗಿ ಕಾಣುವ ಜಾಗೃತಿ ಬೆಳೆಯಬೇಕಿದೆ ಎಂದು ಬನಶ್ರೀ ವೃದ್ದಾಶ್ರಮದ ಸಂಸ್ಥಾಪಕಿ ಎಸ್. ಹಾಗೂ ನಿವೃತ ಶಿಕ್ಷಕಿ ಮಂಜುಳಮ್ಮ ಹೇಳಿದರು.
ಚಳ್ಳಕೆರೆ ನಗರದ ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಹೆಣ್ಣು ಅಡುಗೆ ಮನೆಗೆ ಸೀಮಿತವಲ್ಲ. ಪ್ರತಿ ದಿನದ ಬಜೆಟ್ ಲೆಕ್ಕಾಚಾರದಂತೆ ಕುಟುಂಬ ನಿರ್ವಹಣೆ ಜಾಣ್ಮೆ ಇರುವ ಮಹಿಳೆ ಪ್ರತಿ ವರ್ಗದಲ್ಲೂ ಸಾಧನೆ ಮಾಡಬೇಕಿದೆ. ಇದಕ್ಕೆ ಸ್ವಯಂಕೃತ ಆಸಕ್ತಿ ಮತ್ತು ಸಾಧಕ ಮಹಿಳೆಯರ ಆದರ್ಶ ಇರಿಸಿಕೊಳ್ಳಬೇಕು. ಕುಟುಂಬದ ಸಮಸ್ಯೆಯಿಂದ ಚಿಕ್ಕ ವಯಸ್ಸಿನಲ್ಲೆ ನನಗೆ ಮದುವೆ ಮಾಡಲಾಯಿತು. ಹಿರಿಯರ ಅನುಮತಿ ಪಡೆದು ಶಿಕ್ಷಣದಲ್ಲಿ ಸಾಧನೆ ಮಾಡಲಾಯಿತು. ಮಗಳ ಜತೆಗೆ ಎಸ್ಸೆಸ್ಸೆಲ್ಸಿ ಪಾಸಾಗಿ, ಟಿಸಿಎಚ್ ಮಾಡಿಕೊಂಡು ೩೦ ವರ್ಷ ಸರ್ಕಾರಿ ಶಿಕ್ಷಕಿಯಾಗಿ ಸೇವೆ ಮಾಡಿದ್ದೇನೆ. ವೃತ್ತಿ ಜತೆಗೆ ಎಂಎ, ಎಲ್‌ಎಲ್‌ಬಿ ಪೂರೈಸಿಕೊಂಡು ತುಮಕೂರು ವಿವಿಯಲ್ಲಿ ಪ್ರಸ್ತುತ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದೇನೆ. ನಿವೃತ್ತಿ ಬಳಿಕ ಬಂದ ೩೦ ಲಕ್ಷ ಹಣವನ್ನು ವೃದ್ದಾಶ್ರಮ ಸ್ಥಾಪನೆಗೆ ತೊಡಗಿಸಿಕೊಂಡು ಸುಮಾರು ೩೦ ಜನ ವಯೋವೃದ್ದರನ್ನು ಹಾರೈಕೆ ಮಾಡುತ್ತಿದ್ದೇನೆ. ಯಾವ ಸಂದರ್ಭದಲ್ಲೂ ಮಹಿಳೆ ಅಬಲೆ ಎನ್ನುವ ಸ್ಥಿತಿ ತಲುಪಬಾರದು. ಸದಾ ಸಮಾಜಮುಖಿಯಾಗಿ ಮತ್ತು ಸಮಾಜಕ್ಕೆ ಮಾದರಿಯಾಗಿ ಬದುಕು ರೂಪಿಸಿಕೊಳ್ಳುವ ಚಿಂತನೆಯಲ್ಲಿ ಜಾಗೃತಿರಾಗಿರಬೇಕು ಎಂದು ಕಿವಿಮಾತು ಹೇಳಿದರು.
ಕವಿ ಹಾಗೂ ಹಿರಿಯ ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಹಿಳೆಯು ಪ್ರತಿಯೊಬ್ಬ ಸಾಧಕರ ಹಿಂದೆ ಬೆನ್ನೆಲುಬಾಗಿ ನಿಂತಿರುತ್ತಾಳೆ.. ಸುಮಾರು ವರ್ಷಗಳ ಕಾಲ ನಮ್ಮ ದೇಶವನ್ನು ಆಳಿದಂತಹ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಬಗ್ಗೆ ನಾವು ಜ್ಞಾಪಿಸಿಕೊಳ್ಳಬೇಕಾಗುತ್ತದೆ. ಅವರು ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದರು ಉಕ್ಕಿನ ಮಹಿಳೆ ಎಂದು ಕರೆಸಿಕೊಂಡು ರಾಜಕೀಯ ರಂಗದಲ್ಲೂ ಹೆಣ್ಣು ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟರು. ಅಷ್ಟೇ ಅಲ್ಲದೆ ಎಷ್ಟೇ ಬಂಗಾರ ಇದ್ದರು ಶಿಕ್ಷಣದ ಮುಂದೆ ಎಲ್ಲವೂ ಶೂನ್ಯ ಎಂದರು…
ಮುಖ್ಯ ಶಿಕ್ಷಕ ಎ. ವೀರಣ್ಣ ಮಾತನಾಡಿ, ಪ್ರಸ್ತುತ ಸ್ಪರ್ಧಾ ಸಮಾಜದಲ್ಲಿ ಮಹಿಳೆಯರ ಸಾಧನೆ ದಾಖಲೆ ಇವೆ. ಇತಿಹಾಸ ಹೋರಾಟದಲ್ಲೂ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ, ಅಬ್ಬಕ್ಕ ರಾಣಿ ಇತರೆ ಮಹಿಳೆಯರ ಬದುಕಿನ ಅನುಕರಣೆ ರೂಢಿಸಿಕೊಳ್ಳಬೇಕು. ಸರ್ಕಾರ ಯೋಜನೆ ಮತ್ತು ಸಮಾಜದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಇರುವ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಶಿಕ್ಷಣದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳುವ ಮೂಲಕ ಕುಟುಂಬ ಮತ್ತು ಸಮಾಜಕ್ಕೆ ಕೀರ್ತಿ ತರುವ ಮಾರ್ಗದಲ್ಲಿ ಬೆಳೆಯಬೇಕು ಎಂದು ಹೇಳಿದರು.
ವಕೀಲರಾದ ಆರ್ ಪೆನ್ನಯ್ಯ ಮಾತನಾಡಿ. ಪ್ರತಿಯೊಬ್ಬರಿಗೂ ಸಮಾನತೆ ತರುವ ನಿಟ್ಟಿನಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರು ಸತತ ಪ್ರಯತ್ನ ಸಂವಿಧಾನ ರಚನೆ ಮಾಡಿದರು ಸಂವಿಧಾನದಿಂದ ಇವತ್ತು ನಮಗೆಲ್ಲ ಸಮಾನತೆ ಸಿಕ್ಕಿದೆ ಮಹಿಳೆಯ ರಕ್ಷಣೆ ಗೋಸ್ಕರ ಹಲವಾರು ಕಾನೂನುಗಳು ಎಂದರು.
ಸಂದರ್ಭದಲ್ಲಿ ಶಿಕ್ಷಕರಾದ ಬಿ ರಾಜಕುಮಾರ ಎಸ್ ಪ್ರಾಣೇಶ್ ಪ್ರದೀಪ್ ಮಾತನಾಡಿದರು.




ಈ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕಿ ಜಿ.ಎಲ್.ಉಮಾ.ವೇಣಿ,ಪೂರ್ಣಿಮಾ,ಸುಜಾತ,ಗೀತ,ಸಪೂರ,ರೂಪ, ಗಂಗೂಬಾಯಿ ಹಿರೇಮಠ, ನಾಗರತ್ನ ಶಿವಣ್ಣ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಇದ್ದರು…
About The Author
Discover more from JANADHWANI NEWS
Subscribe to get the latest posts sent to your email.