ನಾಯಕನಹಟ್ಟಿ: ಸಮೀಪದ ಮಲ್ಲೂರಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಲ್ಲೂರಹಳ್ಳಿ ಗ್ರಾಮದ ಎಂ ಮಲ್ಲಯ್ಯ, ಉಪಾಧ್ಯಕ್ಷರಾಗಿ ಚೌಳಕೆರೆ ಪೀರ್ ಸಾಬ್ ಜಯಗಳಿಸಿದರು.
ಮಲ್ಲೂರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅವರಣದಲ್ಲಿ ಶನಿವಾರ ಸಂಘದ ಕಾರ್ಯನಿರ್ವಾಹಕ ಮಂಡಳಿಗೆ ಚುನಾವಣೆ ನಡೆಯಿತು. ಒಟ್ಟು 12 +1-13 ಸದಸ್ಯರಿರುವ ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪೂರ್ವ ನಿಗದಿಯಂತೆ ಬೆಳಿಗ್ಗೆ 10ಕ್ಕೆ
ಚುನಾವಣೆ ಆರಂಭವಾಯಿತು. ಅಧ್ಯಕ್ಷ ಸ್ಥಾನಕ್ಕೆ ಎಂ.ಮಲ್ಲಯ್ಯ ಮತ್ತು ಎಂ ಮಲ್ಲಿಕಾರ್ಜುನ್ ಉಪಾಧ್ಯಕ್ಷ ಸ್ಥಾನಕ್ಕೆ ಚೌಳಕೆರೆ ಪೀರ್ ಸಾಬ್, ಒಬ್ಬರೇ ನಾಮಪತ್ರ
ಸಲ್ಲಿಸಿದರು.
ನಂತರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಎಂ ಮಲ್ಲಿಕಾರ್ಜುನ 5 ಮತಗಳನ್ನು ಪಡೆದು ಪರಾಭವಗೊಂಡರು ಎಂ. ಮಲ್ಲಯ್ಯ 8 ಮತಗಳನ್ನು ಪಡೆದು ಜಯಗಳಿಸಿದರು.
ಇದೆ ವೇಳೆ ನೂತನ ಅಧ್ಯಕ್ಷ ಎಂ ಮಲ್ಲಯ್ಯ ಮಾತನಾಡಿದರು ಮಲ್ಲೂರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಡೀ ತಾಲೂಕಿಗೆ ಮಾದರಿಯಾಗುವಂತೆ ಮಲ್ಲೂರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ
ರಿಟರ್ನಿಂಗ್ ಆಫೀಸರ್ ಆರ್.
ಸದಾಶಿವಯ್ಯ ಕಾರ್ಯ ನಿರ್ವಹಿಸಿದರು. ಸದಸ್ಯರಾದ.
ಎನ್ ಚನ್ನಪ್ಪ, ಭೈಯಣ್ಣ, ಮಲ್ಲಯ್ಯ ,ಟಿ ಎಲ್ ನಿಂಗಪ್ಪ,
ಹುಚ್ಚಯ್ಯ ಎನ್ ಚಂದ್ರು, ಎಂ ಮಲ್ಲಿಕಾರ್ಜುನ್,
ಪೀರ್ ಸಾಬ್, ಎಂ ಆಂಜನೇಯರೆಡ್ಡಿ, ಲಕ್ಷ್ಮಿ, ಗಂಗಮ್ಮ, ಐ. ತಿಪ್ಪಾರೆಡ್ಡಿ, ಸೇರಿದಂತೆ ಮಲ್ಲೂರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳು ಹಾಗೂ ಕಾರ್ಯದರ್ಶಿ ಪಿ. ಚಿನ್ನಯ್ಯ, ಕಂಪ್ಯೂಟರ್ ಆಪರೇಟರ್ ಪ್ರಶಾಂತ್, ನಾಯಕನಹಟ್ಟಿ ಪೊಲೀಸ್ ಠಾಣೆಯ ಸಿಬ್ಬಂದಿ ರಾಜು, ಹೋಂ ಗಾರ್ಡ್ ಮಹಾಂತೇಶ್, ಸೇರಿದಂತೆ ಸಮಸ್ತ ಮಲ್ಲೂರಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.