ಚಳ್ಳಕೆರೆ ಮ.8
ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದ ರೈತರಿಗೆ ಕೃಷಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೊಳಿಸಿದ್ದು ಸರ್ಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ ಸದೃಢರಾಗುವಂತೆ ಶಾಸಕ ಟಿ.ರಘುಮೂರ್ತಿ ಕಿವಿ ಮಾತು ಹೇಳಿದರು. ನಗರದ ಶಾಸಕರ ಭವನದ ಆವರಣದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃಧಿ ಇಲಾಖೆ, ಶಾಸಕ ಅನುದಾನದ
SCP / TSP ಯೋಜನೆಯಡಿಯಲ್ಲಿ,2024-25 ನೇ ಸಾಲಿನ ನೀರಾವರಿ ಸೌಲಭ್ಯಕಲ್ಪಿಸಲು ರೈತರಿಗೆ ಮೋಟರ್ ಪಂಪ್ ಸಲಕರಣೆ ವಿತರಿಸಿ ಮಾತನಾಡಿದರು.
ಸಣ್ಣ ನೀರಾವರಿ ಇಲಾಖೆಯಿಂದ ಚೆಕ್ ಡ್ಯಾಂ ನಿರ್ಮಾಣ ಯೋಜನೆಯಿತ್ತು ಅದು ಯಾರೋ ಒಬ್ಬರಿಗೆ ಸಹಕಾರಿಯಾಗುತ್ತಿದ್ದು ಒಂದು ಚೆಕ್ ಡ್ಯಾಂ ನಿರ್ಮಾಣದ ಮೊತ್ತದಲ್ಲಿ ಸುಮಾರು ಮೂರು ಜನ ಅರ್ಹ ರೈತರಿಗೆ ಉಚಿತ ಕೊಳವೆಬಾವಿ ಹಾಕಿಸಿದರೆ ಜೀವನ ಪರಿಯಂತ ನೀರಾವರಿ ಸೌಲಭ್ಯ ಪಡೆದು ಆರ್ಥಿಕವಾಗಿ ಮುಂದೆ ಬರಲು ಸಾದ್ಯವಾಗುತ್ತದೆ.
ಇನ್ನೇನು ಕೆಲವೇ ವರ್ಷದಲ್ಲಿ ನಮ್ಮ ತಾಲ್ಲೂಕಿನ ಕೆರೆಗಳಿಗೆ ಅಪ್ಪರ್ ಭದ್ರಯೋಜನರಯಡಿ ನೀರು ಹರಿದು ಬರಲಿದೆ. ಅದರಿಂದ ಅಂತರ್ಜಲ ವೃದ್ಧಿಯಾಗಲಿದೆ. ಕೊಳವೆಬಾವಿಗಳಲ್ಲಿಯೂ ನೀರು ತುಂಬಲಿದ್ದು, ರೈತರಿಗೆ ವರದಾನವಾಗಲಿದೆ’ ಎಂದು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆ ಎಇಇ ಅಣ್ಣಪ್ಪ ಮಾತನಾಡಿ ಈ ಹಿಂದೆ ಸಮಾಜಕಲ್ಯಾಣ ಸಚಿವ ಆಂಜನೇಯ ಸಚಿವರ ಅವದಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಚೆಕ್ ಡ್ಯಾಂ ಬದಲಾಗಿ ರೈತರ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸುವ ಯೋಜನೆಯಿತ್ತು ಮತ್ತೆ ರದ್ದಾಗಿ ನಿಗಮ ಮಂಡಳಿಗಳಿಗೆ ನೀಡಲಾಯಿತು ಮತ್ತೆ ಈ ವರ್ಷದಿಂದ ಕೊಳವೆ ಬಾವಿ ಯೋಜನೆ ಸಣ್ಣ ನೀರಾವರಿ ಇಲಾಖೆಗೆ ನೀಡಿದ್ದು
ಮಾರುಕಟ್ಟೆಯಲ್ಲಿ ಸಾವಿರಾರು ರೂಪಾಯಿ ಸುರಿದು ಪಂಪ್, ಮೋಟಾರ್ ಮತ್ತು ಪೈಪ್‌ಗಳನ್ನು ಕೊಂಡುಕೊಳ್ಳಲಾಗದ ಬಡರೈತರನ್ನು ಗುರುತಿಸಿ ಸರ್ಕಾರ ಪ್ರತಿವರ್ಷ ಫಲಾನುಭವಿ ರೈತರಿಗೆ ಉಚಿತವಾಗಿ ಪಂಪ್, ಮೋಟಾರ್, ಪೈಪ್ ಮತ್ತು ಕೇಬಲ್‌ಗಳನ್ನು ಅರ್ಹ ಫಲಾನುಭವಿಗಳಿಗೆ ಉಚಿತ ಪಂಪ್‌ಸೆಟ್ ಹಾಗೂ ಪರಿಕರಗಳನ್ನು ನೀಡುತ್ತಿದೆ ಎಂದು ತಿಳಿಸಿದರು.
ಗ್ಯಾರೆಂಟಿ ಸಮಿತಿಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ.ಜೆ.ಇ ರವಿಕುಮಾರ್. ನಗರಸಭೆ ಸಧ್ಯರು.ಫಲಾನಿಭವಿಗಳು ಇತರರಿದ್ದರು













About The Author
Discover more from JANADHWANI NEWS
Subscribe to get the latest posts sent to your email.