ಎತ್ತಿನ ಗಾಡಿ ಓಟದ ಸ್ಪರ್ಧೆ ಗ್ರಾಮೀಣ ಪ್ರದೇಶದ ಸಾಂಸ್ಕೃತಿಕ ನೆಲಗಟ್ಟಿಗೆ ಹೊಸ ಸ್ಪರ್ಶ ನೀಡಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಏನ್ ರಘುಮೂರ್ತಿ ಹೇಳಿದ
ಅವರು ಇಂದು ಹಿರೇಹಳ್ಳಿ ಗ್ರಾಮದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಹಿರೇಹಳ್ಳಿ ಗ್ರಾಮದ ಯುವಕರು ಆಯೋಜಿಸಿದ್ದ ಜೋಡಿ ಎತ್ತಿನ ಗಾಡಿಯ ಬರದೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕರುನಾಡಿನಲ್ಲಿ ಇಂದಿಗೂ ಕೂಡ ಜಾನಪದ ಸೊಗಡಿನ ಇಂತಹ ಸ್ಪರ್ಧೆಗಳು ಬಹುತೇಕ ಪ್ರದೇಶದಲ್ಲಿವೆ ಈ ಸ್ಪರ್ಧೆಗಳು ಆ ಪ್ರದೇಶಗಳ ಸಾಮರಸ್ಯ ಮತ್ತು ಭಾವನಾತ್ಮಕ ಸಂಬಂಧಗಳನ್ನು ಬಿಗಿಗೊಳಿಸುತ್ತವೆ ಇಲ್ಲಿನ ಯುವಕರಿಗೆ ಈ ಸ್ಪರ್ಧೆಗಳು ಹೇಳಿ ಮಾಡಿಸಿದಂತಿವೆ ಈ ಸ್ಪರ್ಧೆಯಿಂದ ಉತ್ತಮ ರಾಸುಗಳನ್ನು ಸಾಕಾಣಿಕೆ ಮಾಡಲು ರೈತರಿಗೆ ಪೈಪೋಟಿ ನೀಡಿದಂತಾಗಿ ಲಾಭದಾಯಕ ಸನ್ನಿವೇಶ ಸೃಷ್ಟಿಯಾಗುತ್ತದೆ ಹಾಗೂ ಈ ಸ್ಪರ್ಧೆಗಳು ಆರೋಗ್ಯಕರವಾಗಿರಬೇಕು ಸೋಲು ಗೆಲುವುಗಳನ್ನು ಸಮ ಚಿತ್ರದಿಂದ ನೋಡಬೇಕು ಜಾನುವಾರುಗಳನ್ನು ಯಾವುದೇ ಕಾರಣಕ್ಕೂ ಹಿಂಸಿಸಬಾರದು ಎಂದು ಕರೆ ನೀಡಿದರು ಇದೇ ಸಂದರ್ಭದಲ್ಲಿ ಜ್ಞಾನೇಶು ಮಂಜಣ್ಣ ಚಂದ್ರು ಮಹಾಂತೇಶ ಪಿ ನಾಗರಾಜು ಮಂಜಮ್ಮ ನಟರಾಜು, ಸ್ವಾಮಿ, ಶಂಕರ್ ಮೂರ್ತಿ, ಮದಕರಿ ವಿದ್ಯಾ ಸಂಸ್ಥೆಯ ಸಂದೀಪ್ ಮುಂತಾದವರು ಉಪಸ್ಥಿತರಿದ್ದರು









About The Author
Discover more from JANADHWANI NEWS
Subscribe to get the latest posts sent to your email.