ಪರಶುರಾಂಪುರ.
ಸಮೀಪದ ನಾಗಗೊಂಡನಹಳ್ಳಿ ಗ್ರಾಮದ ಬಳಿಯ ವೇದಾವತಿ ದಡದಲ್ಲಿ ಇರುವ ಶ್ರೀ ಚೆಲುಮೆರುದ್ರಸ್ವಾಮಿ ಮಠದ ಆವರಣದಲ್ಲಿ ಶುಕ್ರವಾರ ಶ್ರದ್ದಾ ಭಕ್ತಿಯಿಂದ ಭಕ್ತರು ಸಮ್ಮುಖದಲ್ಲಿ ವಿಜೃಂಭಣೆಯಿಂದ ಸ್ವಾಮಿಯ ರಥೋತ್ಸವ ಜರುಗಿತು.
ರಥವನ್ನ ವಿವಿಧ ಬಗೆಯ ಹೂವು,ಪಟ ಸೇರಿದಂತೆ ಬಾಳೆ,ಎಳನೀರು ಗೊಂಚಲುಗಳಿಂದ ಅಲಂಕರಿಸಲಾಗಿತ್ತು.ವಿವಿಧ ಪೂಜಾ ಕೈಂಕರ್ಯಗಳ ಜತೆಗೆ ಉತ್ಸವ ಮೂರ್ತಿಯನ್ನ ಜನಪದ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ರಥದಲ್ಲಿ ಪ್ರತಿಷ್ಠಾಪಿಸಿದ ಬಳಿಕ ಪೂಜೆ ಸಲ್ಲಿಸಿದರು.
ಈ ವೇಳೆಯಲ್ಲಿ ಭಕ್ತಾದಿಗಳು ಹೂ-ಹಣ್ಣು ಸಮಪಿ೯ಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.ರಥೋತ್ಸವಕ್ಕೂ ಮುನ್ನ ಮುಕ್ತಿ ಭಾವುಟ ಹರಾಜಿನಲ್ಲಿ ಹಾಲಗೊಂಡನಹಳ್ಳಿ ತಿಪ್ಪೇಸ್ವಾಮಿ ಅರವತ್ತೈದು ಸಾವಿರಕ್ಕೆ ಮುಕ್ತಿ ಭಾವುಟ ತಮ್ಮದಾಗಿಸಿಕೊಂಡರು.











ಶಾಸಕ ಟಿ.ರಘುಮೂತಿ೯ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು ಹಾಗೂ ಗ್ರಾಪಂ ಸದಸ್ಯರು, ದೇವಸ್ಥಾನದ ಕಮಿಟಿ ಸದಸ್ಯರು, ಹಿರಿಯರು,ಮುಖಂಡರು, ಕಾರ್ಯಕರ್ತರು ಗ್ರಾಮಸ್ಥರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಜಾಜೂರು,ಹರವಿಗೊಂಡನಹಳ್ಳಿ, ನಾಗಗೊಂಡನಹಳ್ಳಿ,ಹಾಲಗೊಂಡನಹಳ್ಳಿ ಸೇರಿದಂತೆ ರಾಜ್ಯ ಹಾಗೂ ನೆರೆ ಸೀಮಾಂಧ್ರ ಭಾಗದ ಭಕ್ತಾದಿಗಳು ಸೇರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.