March 17, 2026
IMG-20260108-WA0096.jpg

ಚಳ್ಳಕೆರೆ:
ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಇಡೀ ದಕ್ಷಿಣ ಭಾರತದಲ್ಲಿಯೇ ಅತ್ಯಂತ ಕಠಿಣವಾದ ವ್ರತವನ್ನು ಆಚರಿಸುತ್ತಿದ್ದಾರೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್. ರಘುಮೂರ್ತಿ ಅವರು ಹೇಳಿದರು.
ತಾಲೂಕಿನ ನಾಯಕನಹಟ್ಟಿ ಸನೀಪದ ಗುಂತಕೊಲಮ್ಮನಹಳ್ಳಿ ಗ್ರಾಮದ ಕಾವಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಾಯಕನಹಟ್ಟಿ ಹೋಬಳಿ ಯುವಕರಿಂದ ಹಮ್ಮಿಕೊಳ್ಳಲಾಗಿದ್ದ ಇರುಮುಡಿ ಪೂಜೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತದ ಸನಾತನ ಸಂಸ್ಕೃತಿಯಲ್ಲಿ ಧರ್ಮ, ಭಕ್ತಿ, ಶ್ರದ್ಧೆ ಮತ್ತು ತ್ಯಾಗಕ್ಕೆ ಮತ್ತೊಂದು ಹೆಸರೇ ಮಣಿಕಂಠ ಅಯ್ಯಪ್ಪ ಎಂದು ತಿಳಿಸಿದ ಅವರು, 20ನೇ ಶತಮಾನದಲ್ಲಿ ಅಯ್ಯಪ್ಪ ಸ್ವಾಮಿಯ ಆರಾಧನೆ ಅತ್ಯುನ್ನತ ಮಟ್ಟಕ್ಕೆ ತಲುಪಿದ್ದು, ಅದರೊಂದಿಗೆ ಭಕ್ತಾದಿಗಳ ಸಂಖ್ಯೆಯೂ ಸಾಗರೋಪಾದಿಯಲ್ಲಿ ಹೆಚ್ಚಾಗಿದೆ ಎಂದು ಹೇಳಿದರು.
ನಿರಂತರ ಕಠಿಣ ವ್ರತದ ಮೂಲಕ ಭಕ್ತಾದಿಗಳು ಇರುಮುಡಿ ಹೊತ್ತು ಅಯ್ಯಪ್ಪ ಸ್ವಾಮಿಗೆ ಭಕ್ತಿಯನ್ನು ಸಮರ್ಪಿಸುತ್ತಾರೆ. ಈ ಕಠಿಣ ವ್ರತ, ನಂಬಿಕೆ ಹಾಗೂ ಭಕ್ತಿ-ಶ್ರದ್ಧೆಗೆ ಭಗವಂತನು ಒಲಿಯುತ್ತಾನೆ ಎಂಬ ದೃಢ ನಂಬಿಕೆ ಇದೆ ಎಂದು ಹೇಳಿದರು.
ಇರುಮುಡಿ ಪೂಜೆಯ ಮೂಲಕ ಮಣಿಕಂಠ ಸ್ವಾಮಿಯ ಕೃಪೆ ಚಳ್ಳಕೆರೆ ತಾಲೂಕಿನ ಎಲ್ಲಾ ಸಾರ್ವಜನಿಕರ ಮೇಲೂ ಇರಲಿ. ಸಕಲ ಐಶ್ವರ್ಯ, ನೆಮ್ಮದಿ ಹಾಗೂ ಸಾಮಾಜಿಕ ಸೌಹಾರ್ದತೆ ಉಂಟಾಗಲಿ ಎಂದು ಅವರು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ರೇಖ ಲಗೆರೆ ಹಾಗೂ ಕೊಲಮ್ಮನಹಳ್ಳಿ ಗ್ರಾಮದ ಗ್ರಾಮಸ್ಥರು ಸೇರಿದಂತೆ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading