December 14, 2025
Screenshot_20250108_172213.png

ಚಳ್ಳಕೆರೆ ಜ. 8

ಸರಕಾರಿ ಕಿರಿಯ ಪ್ರಾಥಮಿಕ‌ಶಾಲೆಯ ಶಿಕ್ಷಕರೊಬ್ಬರು ಸುಮಾರು ವರ್ಷಗಳಿಂದ ಗೈರಾಜರಿಯಾಗಿದ್ದಾರೆ ಎಂದು ಗ್ರಾಮಸ್ಥರು ಜನಧ್ವನಿ ಡಿಜಿಟಲ್ ಮೀಡಿಯಾ ಕಾರ್ಯಾಲಕ್ಕೆ ನೊಂದಣೆ ಅಂಚೆ ಮೂಲಕ ಪತ್ರವನ್ನು ಬರೆದಿದ್ದಾರೆ.

ಜನಧ್ವನಿ ಡಿಜಿಟಲ್ ಮೀಡಿಯಾಗೆ ಬೋರಪ್ಪನ ಗುಡಿ ಗ್ರಾಮಸ್ಥರು ಬರೆದಿರುವ ಪತ್ರ


ಗ್ರಾಮಸ್ಥರು ಬರೆದ ಪ್ರತ್ರದ ಸಾರಾಂಶದೊಂಗಿಗೆ ಮಾಹಿತಿ ಸಂಗ್ರಹಿಸಲು ಬೆನ್ನತ್ತಿದಾಗ ಜನಧ್ವನಿ ಡಿಜಿಟಲ್ ಮೀಡಿಯಾಗೆ ಮಾಹಿತಿ ಲಭ್ಯವಾಗಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಪಗಡಬಂಡೆ ಸಮೀಪದ ಬೋರಪ್ಪನ ಗುಡಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರಕಾಶ್ ಮತ್ತೂರು ಇವರು ಉತ್ತಮ ಶಿಕ್ಷಕರಾಗಿ ಶಾಲಾ ಆವರಣದಲ್ಲಿ ಗಿಡ ಮರ. ಪ್ರಾಣಿ ಪಕ್ಷಿಗಳನ್ನು‌ ಸಾಕಿ ಪರಿಸರ ಪ್ರೇಮಿಯಾಗಿದ್ದರು ಮಕ್ಕಳಿಗೆ ಉತ್ತಮ‌ಶಿಕ್ಷಣ ನೀಡುತ್ತಿದ್ದರು ಇವರು ಶಾಲೆಗೆ ಹಾಕಿದ ಪರಿಶ್ರಮಕ್ಕೆ ಶಾಲೆಗೆ ರಾಜ್ಯ ಮಟ್ಟದ ಪ್ರಶಸ್ತಿಯೂ ಸಹ ಮುಡಿಗೇರಿಸಿಕೊಂಡಿದ್ದು ಆದರೆ ಇವರು ಮಾಡಿ ಶ್ರಮಕ್ಕೆ ಬೇರಿ ಶಿಕ್ಷಕರು ಪ್ರಶಸ್ತಿ ಸ್ವೀಕರಿದರು.
ಸುಮಾರು 2016-17 ನೇಸಾಲಿನಿಂದ ಕೆಲವು ವೈಕ್ತಿಕ ಕಾರಣಗಳಿಂದ ಶಾಲೆಗೆ ಗೈರಾಗಿದ್ದಾರೆ. ವಿದ್ಯುತ್ ಪರಿವರ್ತಕವನ್ನು ಇಡಿದು ಆತ್ಮ ಹತ್ಯೆಗೂ ಯತ್ನಿಸಿ ಸಾವಿನಿಂದ ಗೆದ್ದು ಬಂದರೂ ಸಹ ಮತ್ತೆ ಶಾಲೆಗೆ ಬರಲಿಲ್ಲ ಎಂಬ ಮಾಹಿತಿಯನ್ನು ನೋಡಿದ ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
ಪ್ರೌಢಶಾಲ ಶಿಕ್ಷಕ ಪಾಲಯ್ಯ ಎಂಬುವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿದ್ದ ಮೇರಿಗೆ ಶಾಲೆಗೆ ಭೇಡಿ ಬೀಡಿ ತನಿಖೆ ಮಾಡಿದಾಗ ಗೈರು ಆಗಿರುವುದು ಬೆಳಕಿಗೆ ಬಂದಿದ್ದು ಮೂರು ಬಾರಿ ಕಾರಣ ಕೇಳಿ‌ನೋಟಿಸ್ ಜಾರಿ ಮಾಡಿದ್ದರೂಸಹ ಉತ್ತರ ನೀಡಿಲ್ಲ ಮತ್ತೊಂದು ನೋಟಿಸ್ ಕೊಡಲು ತಯಾರಿ ಮಾಡಿಕೊಳ್ಳಕಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕ್ಷೇತ್ರಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಜನಧ್ವನಿಯೊಂದಿಗೆ ಮಾತನಾಡಿ ಗ್ರಾಮಸ್ಥರು ಈ ಮಾಹಿತಿ ಹಕ್ಕಿನಡಿಯಲ್ಲಿ ಅರ್ಜಿ‌ದಲ್ಲಿಸುದ್ದರು ಆದರೆ ಶಿಕ್ಷಕರ ವೈಯುಕ್ತಿಕ ಮಾಹಿತಿ ನೀಡಲು ಬರುವುದಿಲ್ಲ ಎಂದು ಹಿಂಬರಹ ನೀಡಲಾಗಿದೆ.
ನಾನು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಾಗ ಶಿಕ್ಷಕ ಶಾಲೆಗೆ ಬರುತ್ತಿರಲಿಲ್ಲ ಆದರೆ ಗ್ರಾಮಸ್ಥರು ಜನಧ್ವನಿ ಡಿಜಿಟಲ್ ಮೀಡಿಯಾಗೆ ಪತ್ರ ಬರೆದಂತೆ ಶಿಕ್ಷಕ ಗೈರು ಹಾಜರಿಯಾಗಿರುವ ವೇತನ ಪಾವತಿಸಿಲ್ಲ ಗೈರಾಗಿರುವ ಬಗ್ಗೆ ಸರಕಾರಕ್ಕೆ ವರದಿ ನೀಡಲಾಗಿದೆ.
ಶಿಕ್ಷಕ ಗೈರು ಹಾಜರಿಯಾದಾಗ ಕಚೇರಿಯಿಂದಲೇ ಶಿಕ್ಷಕನ ಸ್ವಗ್ರಾಮ ಹಾವೇರಿಗೆ ಹೋಗಿ ಮನ ಪರಿವರ್ತನೆ ಮಾಡಿದರೂ ಸಹ ಶಾಲೆಗೆ ಬರಲಿಲ್ಲ ಈಗ ಸರಕಾರದಿಂದ “ಸರಕಾರಿ ಕಿರಿಯ ಪ್ರಾಥಮಿಕ‌ಶಾಲೆ ಬೋರಪ್ಪನ ಗುಡಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೆಯಡಚಿ ರೆಟ್ಟಿಹಳ್ಳಿ ಹಾವೇರಿಜಿಲ್ಲೆಗೆ “”

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಿಂದ ನಿಯೋಜನೆ ಪಡೆದು ಹೋಗಿದ್ದಾರೆ.
ಶಾಲೆಯ ಮಕ್ಕಳಿಗೆ ಶಿಕ್ಷಣದ ಕೊರತೆಯಾಗದಂತೆ ಶಿಕ್ಷಕ ಗೈರಾಜರಿಯಿಂದ ಇಲ್ಲಿಯವರೆಗೆ ಅತಿಥಿ ಶಿಕ್ಷಕನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಬೋರಪ್ಪನಗುಡಿ ಸರಕಾರಿ ಕಿರಿಯ ಪ್ರಾಥಮಿಕ‌ಶಾಲೆಯ ಒಂದು‌ನೋಟ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading