ಅಬ್ಬೇನಹಳ್ಳಿ ಗ್ರಾಮದ ಆಂಜನೇಯ ಬಡಾವಣೆಯ ಕುಡಿಯುವ ನೀರಿನ ಸ್ಥಾವರಕ್ಕೆ ಟಿ.ಸಿ. ಹಾಗೂ ಜಿನಗಿ ಹಳ್ಳದ ಹತ್ತಿರ ಕುಡಿಯುವ ನೀರಿನ ಸ್ಥಾವರಕ್ಕೆ ವಿದ್ಯುತ್ ಕಂಬಗಳನ್ನು ಅಳವಡಿಸುವಂತೆ ಬೆಸ್ಕಾಂ ಇಲಾಖೆಗೆ ಗ್ರಾಮ ಪಂಚಾಯಿತಿ ಸದಸ್ಯ
ಟಿ. ಶೇಖರಗೌಡ ಒತ್ತಾಯ.




ನಾಯಕನಹಟ್ಟಿ:: ಬೆಸ್ಕಾಂ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಶೀಘ್ರದಲ್ಲಿ ವಿದ್ಯುತ್ ಕಂಬಗಳ ಅಳವಡಿಸಬೇಕು ಎಂದು ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಟಿ. ಶೇಖರಗೌಡ ಒತ್ತಾಯಿಸಿದ್ದಾರೆ.
ಅವರು ಬುಧವಾರ ಹೋಬಳಿಯ ಅಬ್ಬೇನಹಳ್ಳಿ ಗ್ರಾಮದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು ಗ್ರಾಮದಲ್ಲಿ ಆಂಜನೇಯ ಬಡಾವಣೆಯ ಕುಡಿಯುವ ನೀರಿನ ಸ್ಥಾವರಕ್ಕೆ ಟಿ.ಸಿ. ಮತ್ತು ಜಿನಿಗಿ ಹಳ್ಳದ ಹತ್ತಿರ ಕುಡಿಯುವ ನೀರಿನ ಸ್ಥಾವರಕ್ಕೆ ವಿದ್ಯುತ್ ಕಂಬಗಳು ಅಳವಡಿಸಬೇಕು ಮತ್ತು ಗ್ರಾಮದಿಂದ ಕಾರ್ತಿಕೇನಹಟ್ಟಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಕುಡಿಯುವ ನೀರಿನ ಮೋಟಾರ್ ಪಂಪ್ ವೈರು ನೆಲದ ಮೇಲೆ ಇದೆ ಪ್ರತಿದಿನ ಈ ರಸ್ತೆಯಲ್ಲಿ ರೈತರು ಚಿಕ್ಕ ಚಿಕ್ಕ ಮಕ್ಕಳು ರಸ್ತೆಯಲ್ಲಿ ಸಂಚಾರ ಮಾಡುವುದರಿಂದ ತುಂಬಾ ತೊಂದರೆಯಾಗುತ್ತದೆ ಬೆಸ್ಕಾಂ ಇಲಾಖೆಗೆ ಸಾಕಷ್ಟು ಬಾರಿ ಗ್ರಾಮ ಪಂಚಾಯತಿ ವತಿಯಿಂದ ಅರ್ಜಿಯನ್ನು ನೀಡಿದ್ದೇವೆ ದಯವಿಟ್ಟು ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಶೀಘ್ರವೇ ವಿದ್ಯುತ್ ಕಂಬಗಳು ಮತ್ತು ಟಿ. ಸಿ. ಅಳವಡಿಸಬೇಕು ಎಂದು ಒತ್ತಾಯಿಸಿದರು
About The Author
Discover more from JANADHWANI NEWS
Subscribe to get the latest posts sent to your email.