ಚಳ್ಳಕೆರೆ ಜ.8. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯ ಎಷ್ಟು ಮುಖ್ಯವೋ, ಪಠ್ಯೇತರ ಚಟುವಟಿಕೆಗಳು ಅಷ್ಟೇ ಅವಶ್ಯ ಎನ್ನುವ ಅಭಿಪ್ರಾಯ ಶಿಕ್ಷ ಣತಜ್ಞರದ್ದು. ಆದರೆ, ಇಲ್ಲಿನ ಸರಕಾರಿ ಶಾಲೆಗೆ ಮಕ್ಕಳು ಬಂದರೂ, ಆಟವಾಡಿ ನಲಿಯಲು ಮೈದಾನದಲ್ಲಿ ಜಾಗವಿಲ್ಲದಂತಾಗಿದೆ.





ಹೌದು ಇದು ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಲಕ್ಷ್ಮಿಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದವನ್ನು ಒಕ್ಕಲು ಕಣವನ್ನಾಗಿ ಮಾಡಿಕೊಂಎಉ ರೈತರು ಬೆಳೆದ ಮೆಕ್ಕೆಜೋಳ.ತೊಗರಿ ಸೇರಿದಂತೆ ವಿವಿಧ ದವಸ ಧಾನ್ಯಗಳನ್ನುಗನ್ನು ಒಣಗಿ ಹಾಕುವುದರಿಂದ ವಿದ್ಯಾರ್ಥಿಗಳು ಶಾಲೆಗೆ ಬರುಲು ಜಾಗದ ಕೊರತೆ ಜತೆಗೆ ಆಟವಾಡಲು ಸಹ ಜಾಗವಿಲ್ಲಂದಾಗಿದೆ.
ಶಾಲಾ ಆವರಣದಲ್ಲೇ ಶುದ್ದ ಕುಡಿಯುವ ನೀರಿನ ಘಟಕ ವಿರುವುದರಿಂದ ತ್ಯಾಜ್ಯ ನೀರೂ ಸಹ ಶಾಲಾ ಮೈದಾನದಲ್ಲಿ ಹರಿಯುತ್ತಿದ್ದು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ದವಸಧಾನ್ಯಗಳನ್ನು ಒಣಗಲು ಹಾಕುವುದರಿಂದ ತ್ಯಾಜ್ಯದಿಂದ ಕೂಡಿದ್ದು ಕಲುಷಿತ ಪರಿಸರ ನಿರ್ಮಾಣವಾಗಿದ್ದು ಕೂಡಲೇ ಶಾಲಾ ಆವರಣದಲ್ಲಿ ದವಸ ಧಸನ್ಯಗಳನ್ನು ಒಗಸುವುದನ್ನು ತಪ್ಪಿಸುವ ಜತೆಗೆ ಕೊಳಚೆ ನೀರು ಮೈದಸನದಲ್ಲಿ ಹರಿಯದಂತೆ ಮಾಡಿ ಸುಂದರ ಪರಿಸರವನ್ನು ನಿರ್ಮಾಣ ಮಾಡುವರೇ ಕಾದು ನೋಡ ಬೇಕಿದೆ.
About The Author
Discover more from JANADHWANI NEWS
Subscribe to get the latest posts sent to your email.