March 22, 2026
Screenshot_20241207_200220.png

ಚಳ್ಳಕೆರೆ ಡಿ.7

ನಗರವಾಸಿಗಳು‌ ನಮಗೆ ಮನೆಯಿಲ್ಲ ಎಂದು ಅರ್ಜಿಗಕಳೊಂದಿಗೆ ಶಾಸಕರ ಕಚೇರಿಗೆ ಬರುತ್ತಾರೆ ಬಂದ ಮನೆಗಳ ನಿರ್ಮಾಣಕ್ಕೆ ಅಧಿಕಾರಿಗಳು ಇಚ್ಚಾಶಕ್ತಿ ತೋರುತ್ತಿಲ್ಲ ಎಂದು ಶಾಸಕ ಟಿ.ರಘುಮೂರ್ತಿ ಕಿಡಿಕಾರಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ನಗರ ಆಶ್ರಯ ಸಮಿತಿ ಸಭೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತ‌ನಾಡಿದರು.
ನಗರಸಭೆ ವ್ಯಾಪ್ತಿಗೆ ಯಾವ ವಸತಿ ಯೋಜನೆಯಡಿಯಲ್ಲಿ‌ಮನೆಗಳು ಮಂಜುರಾತಿಯಾಗಿರುವಯಾವ ಹಂತದಲ್ಲಿವೆ ಎಂದು ನಗರಸಭೆ ಅಧಿಕಾರಿಗಳನ್ನು ಶಾಸಕ ಟಿ.ರಘುಮೂರ್ತಿ ಕೇಳಿದರು.
ನಗರಸಭೆ ಅಧಿಕಾರಿ ಭೂತಣ್ಣ ಮಾಹಿತಿ ನೀಡಿ‌ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ‌70 ಮನೆಗಳು ಮಂಜುರಾತಿಯಲ್ಲಿ 30 ಮನೆಗಳನ್ನು ಫಲಾನುಭವಿಗಳು ಕಟ್ಟಿಕೊಳ್ಳು ಮುಂದೆ ಬಂದಿಲ್ಲ ಎಂದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವಸತಿ ಮನೆಗಳಿಗೆ ಬೇಡಿಕೆ ಇದ್ದು ಮನೆಗಳಿಗಾಗಿ ಅಲೆದಾಡುತ್ತಿದ್ದಾರೆ. ಮನೆಗಳು ಮಂಜುರಾತಿಯಾದರೂ ಮನೆಗಳ ನಿರ್ಮಾಣಕ್ಕೆ ಮುಂದಾಗದ ಫಲಾನುಭವಿಗಳಿಗೆ ಒಂದಲ್ಲ ಮೂರು ಬಾರಿ ಮನೆ ಕಟ್ಟಿಕೊಳ್ಳುವಂತೆ ನೋಟಿಸ್ ಜಾರಿ ಮಾಡಿ ಅವರ ಗಮನಕ್ಕೆ ತಂದು ಬೇರೆ ಫಲಾನು ಭವಿಗಳ‌ಆಯ್ಕೆ ಮಾಡಿ ಎಂದರು.
ಲಿಡ್ಕರ್. ವಾಜಪೇಯಿ ವಸತಿ‌ಮನೆಗಳ ಗುಣ ಮಟ್ಟ ಪರಿಶೀಲನೆ ಮಾಡಿ ಅವುಗಳನ್ನು ಸರಿಪಡಿಸಿ ಮುಂದಿನ ಸಭೆಗೆ ಸಂಪೂರ್ಣ ಮಾಹಿತಿಯೊಂದಿಗೆ ಇಂಜಿನಿಯರ್ ಸೇರಿದಮಂತೆ ವಸತಿ ಯೋಜನೆಯ ಅಧಿಕಾರಿಗಳು ಹಾಜರಿಯಾಗ ಬೇಕು.
ಅಭಿಶೇಖ್ ನಗರಕ್ಕೆ ಹೋಗುವ ರಸ್ತೆ ಒತ್ತುವರಿ ತೆರವುಗೊಳಿಸಿ ಸೇತುವೆ ಕಾಮಗಾರಿಗೆ ಚಾಲನೆ ನೀಡ ಬೇಕು ಯಾರ ಒತ್ತಡಕ್ಕೆ ಮಣಿಯದೆ ಒತ್ತುವರಿ ಸಮಸ್ಯೆಯನ್ನು ಕಂದಾಯ.ನಗರಸಭೆ ಹಾಗೂ ಪೋಲಿಸ್ ಇಕಾಖೆಯೊಂದಿಗೆ ತೆರವುಗೊಳಿಸಬೇಕು.
ಕರೆಕಲು ಕೆರೆ ಕೋಡಿ ನೀರು ಹರಿಯಲು ರಸ್ತೆಗೆ ಪೈಕಿ ವಾಹನ ಸಂಚಾರಕ್ಕೆ ರಸ್ತೆ ಸರಿಪಡಿಸುವಂತೆ ತಿಳಿಸಿದರು.
ಎಸ್ಸಿ ಎಸ್ಟಿ ಇಲಾಖೆ ಅನುದಾನ ವಸತಿ ಹಾಗೂ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಎರಡು ಇಲಾಖೆಯ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸ ಬೇಕು ಎಂದು ತಾಕೀತು ಮಾಡಿದರು.
ನಗರಸಭೆ ಅಧಿಕಾರಿಗಳು ಕಚೇರಿಯಲ್ಲಿ ಕೂತು ಇ-ಸ್ವತ್ ಖಾತೆಗೆ ಸಹಿ‌ಹಾಕುವುದೇ ಕೆಲಸವಲ್ಲ ಬಡವರ ವಸತಿ ಯೋಜನೆ ಪ್ರಗತಿ ಸಾಧಿಸುವಂತೆ ಸೂಚಿಸಿದರು.
ತಹಶೀಲ್ದಾರ್ ರೇಹಾನ್ ಪಾಷ.ಪೌರಾಯುಕ್ತ ಜಗ್ಗರೆಡ್ಡಿ.ಸಮಾಜ ಕಲ್ಯಾಣಾಧಿಕಾರಿ ದೇವ್ಕನಾಯ್ಕ.ಎಸ್ಟಿ ಅಧಿಕಾರಿ ಶಿವರಾಜ್
ಬಿಸಿಎಂ ಅಧಿಕಾರಿ ರಮೇಶ್. ನಗರ ಆಶ್ರಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading