March 18, 2026
FB_IMG_1733579143127.jpg


ಹಿರಿಯೂರು :
ನಗರಸಭೆಯಲ್ಲಿ ಇ-ಆಸ್ತಿ ಸೇವಾ ಹಾಗೂ ಆಂದೋಲನವನ್ನು ನಡೆಸಿ ಇಂದೇ ಬಂದ ಅರ್ಜಿಗಳನ್ನು ಸ್ಥಳದಲ್ಲಿ ವಿಲೇಮಾಡಿ ಇ-ಆಸ್ತಿ ಪತ್ರಗಳನ್ನು ನಗರದ ನಾಗರೀಕರಿಗೆ ವಿತರಿಸಲಾಯಿತು ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸಿಂರವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ನಗರದ ನಗರಸಭೆ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಇ-ಆಸ್ತಿ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷರಾದ ಶ್ರೀಮತಿ ಅಂಬಿಕಾ ಆರಾಧ್ಯ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ಕುಮಾರ್, ನಗರಸಭಾ ಸದಸ್ಯರಾದ ಬಿ.ಎನ್.ಪ್ರಕಾಶ್, ನಗರಸಭೆ ಕಚೇರಿ ವ್ಯವಸ್ಥಾಪಕರಾದ ಮಂಜುಳ, ನಗರಸಭೆ ಲೆಕ್ಕ ಅಧೀಕ್ಷಕರಾದ ಗೋವಿಂದರಾಜು, ಮುಖಂಡರಾದ ಅರುಣ್ ಕುಮಾರ್, ಮಹಾಬಲೇಶ್ವರಶೆಟ್ಟಿ, ಹಾಗೂ ನಗರಸಭೆ ನೌಕರರು, ಸಿಬ್ಬಂದಿವರ್ಗದವರು ಹಾಗೂ ನಗರದ ನಾಗರೀಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading