January 29, 2026
Screenshot_20241207_153933.png

ಚಳ್ಳಕೆರೆ ಡಿ.7

ಸರ್ಕಾರಿ ಭೂಮಿಯಲ್ಲಿ ಹಲವು ದಶಕದ ಸಾಗುವಳಿ ಮಾಡಿಕೊಂಡಿರುವ ಕುಟುಂಬಗಳಿಗೆ ಜಮೀನು ಮಂಜೂರು ಮಾಡಿಕೊಡಲು ಕಂದಾಯ ಇಲಾಖೆ ಪರಿಚಯಿಸಿದ್ದ ‘ಬಗರ್ ಹುಕುಂ ತಂತ್ರಾಂಶ’ (ಆ್ಯಪ್) ಮಾಹಿತಿತನ್ನು ಹೆಚ್ಚು ಪ್ರಚಾರ ಮಾಡುವಂತೆ ವಂತೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬಗರ್ ಹುಕುಂ ಸಮಿತಿ ಸಭೆಯಲ್ಲಿ ಬಗರ್ ಹುಕುಂ ಯ್ಯಾಪ್ ಗೆ ಚಾಲನೆ‌ನೀಡಿ ಮಾತಮಾಡಿದರು. ರಾಜ್ಯದಲ್ಲೇ ಮೊದಲ ಬಾರಿಗೆ ಶಿರಸಿ ತಾಲ್ಲೂಕಿನಲ್ಲಿ‌ ರೈತರಿಗೆ ಹಕ್ಕುಪತ್ರ (ಡಿಜಿಟಲ್ ಸಾಗುವಳಿ ಚೀಟಿ) ನೀಡಿದ್ದು ಚಳ್ಳಕೆರೆ ಕ್ಷೇತ್ರದಲ್ಲಿ‌ಮುಂದಿನ ಸಭೆಯಲ್ಲಿ ಅರ್ಹ ರೈತರಿಗೆ ಹಕ್ಕು ಪತ್ರ ವಿತರಣೆ ವ್ಯವಸ್ಥೆ ಆಗ ಬೇಕು ಎಂದರು.

ತಾಲೂಕು ಕಚೇರಿಯ ತಾಂತ್ರಿಕ ಅಧಿಕಾರಿ‘ಬಗರ್ ಹುಕುಂ ತಂತ್ರಾಂಶ’ (ಆ್ಯಪ್‌) ಮೂಲಕ ಸಕ್ರಮಗೊಳಿಸುವ ಪ್ರಕ್ರಿಯೆ ಬಗ್ಗೆ ಶಾಸಕರಿಗೆ ಮಾಹಿತಿ ನೀಡುವ ಮೂಕಕ ಬಗರ್ ಹುಕುಂ ಸಮಿತಿ ಅಧ್ಯಕ್ಷರಾದ ಶಾಸಕ ಟಿ
ರಘುಮೂರ್ತಿಯವರವರ ಎಬ್ಬೆಟ್ಟಿನ ಗುರುತು ಪಡೆಯುವ ಮೂಲಕ ಬಗರ್ ಹುಕುಂ ಯ್ಯಾಪ್ ಸಾಗುವಳಿದಾರರ ಆಧಾರ್ ಕಾರ್ಡ್. ಪಹಣಿ.ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಿದಾಗ ಅದು ಗ್ರಾಮಲೆಕ್ಕಾಧಿಕಾರಿಯ ಲಾಗಿನ್ ಗೆ ಹೋಗುತ್ರದೆ ಬಂತೆ ಗ್ರಾಮಲೆಕ್ಕಾಧಿಕಾರಿ ಅರ್ಜಿದಾರ ರೈತರ ಜಮೀನಿಗೆ ಹೋಗಿ ಪರಿಶೀಲನೆ ನಂತರ ವೀಡಿಯೋ ಮಾಡಿ ವರದಿಯೊಂದಿಗೆ ಕಂದಾಯ ನಿರೀಕ್ಷಕರ ಲಾಗಿನ್ ಗೆ ಹೋಗುತ್ತದೆ.
ನಂತರ ತಹಶೀಲ್ದಾರ್ ಹಾಗೂ ಬಗರ್ ಹುಕುಂ ಸಮಿತಿಗೆ ಬರುತ್ತದೆ‌.
ರೈತರರು ಎಷ್ಟು ವರ್ಷದಿಂದ ಭೂಮಿ ಉಳುಮೆ ಮಾಡುತ್ತಾರೆ.ಇದು ಅರಣ್ಯ ಭೂಮಿಯೇ .ಗೊಇಮಾಳ ಎಂಬ ಮಾಹಿತಿ ನೀಡುತ್ತದೆ ಅರ್ಜಿ‌ಸಲ್ಲಿಸಿಪೋಡಿ ಸಹಿತ ಹಕ್ಕು ಪತ್ರ ಸಿಗಲಿದೆ ಇದರಿಂದ ಅರ್ಹರಿಗೆ ಮಾತ್ರ ಲಭ್ಯವಾಗಲಿದೆ ಎಂಬ‌ಮಾಹಿತಿ ತಿಳಿಸಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ ಪದೆ ಪದೇ ಬಗರ್ ಹುಕುಂ ಸಾಗುವಳಿ ಪಡೆಯುವವರಿಗೆ ಹಾಗೂ ಭೂಮಿ ಉಳ್ಳವರಿಗೆ ಕಡಿವಾಣ ಹಾಕಿದಂತಾಗುತ್ತದೆ.
ಬಗರ್ ಹುಕುಂ ಯ್ಯಾಪ್ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.

ತಹಶೀಲ್ದಾರ್ ರೇಹಸನ್ ಪಾಷ ಮಾತನಾಡಿ ರೈತರನ್ನು ಕಚೇರಿಗೆ ಅಲೆದಾಡಿಸದೆ, ಪ್ರತಿ ಹಂತದಲ್ಲೂ ಅಧಿಕಾರಿಗಳೇ ಅವರ ಮನೆ ಬಾಗಿಲಿಗೆ ತೆರಳಿ ದಾಖಲೆ ಸಂಗ್ರಹಿಸಿ, ತಂತ್ರಾಂಶದ ಮೂಲಕ ದಾಖಲೆಗಳನ್ನು ಕ್ರೋಡೀಕರಿಸಿ ಸಾಗುವಳಿ ಚೀಟಿ ನೀಡುತ್ತಿರುವುದು ಇದೇ ಮೊದಲು’
ನಮೂನೆ 57ರಡಿ ‘ಬಗರ್ ಹುಕುಂ ತಂತ್ರಾಂಶ’ದಲ್ಲಿ ಸಲ್ಲಿಕೆಯಾದ ಅರ್ಜಿಯನ್ನು ಗ್ರಾಮ ಆಡಳಿತಾಧಿಕಾರಿಗಳು ಖುದ್ದು ಸ್ಥಳ ಪರಿಶೀಲಿಸಿ ಜಿಯೋ ಫೆನ್ಸಿಂಗ್ ಮೂಲಕ ಗಡಿ ಗುರುತಿಸುವರು.ಕಂದಾಯ ನಿರೀಕ್ಷಕರಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ತಹಶೀಲ್ದಾರ್ ಮಟ್ಟದಲ್ಲಿ ಸಾಗುವಳಿಯ ಕುರಿತಾಗಿ ಎರಡು ಹಂತದಲ್ಲಿ ಪರಿಶೀಲನೆ ನಡೆಯಲಿದೆ ತಕರಾರು ಇಲ್ಲವೆಂದು ದೃಢಪಟ್ಟ ಬಳಿಕ ಶಾಸಕರ ಅಧ್ಯಕ್ಷತೆಯ ಬಗರ್ ಹುಕುಂ ಸಮಿತಿಯಲ್ಲಿ ರೈತರಿಗೆ ಜಮೀನು ಮಂಜೂರು ಮಾಡಲು ನಿರ್ಧರಿಸಲಾಗುವುದು’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಿತ್ರದುರ್ಗ ತಹಶೀಲ್ದಾರ್ ನಾಗವೇಣಿ.ಶಿರಸ್ತೆದಾರ್ ಸದಾಶಿವಪ್ಪ ಕಂದಾಯ ನಿರೀಕ್ಚಕರು. ಗ್ರಾಮಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading