ದಾವಣಗೆರೆ ಡಿ.6 ಪ್ರಸಕ್ತ ಸಾಲಿನಲ್ಲಿ ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್, ಸಫಾಯಿ ಕರ್ಮಚಾರಿ ಕುಟುಂಬದ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಲ್ಯಾಪ್‍ಟಾಪ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ಮಕ್ಕಳಿಗೆ 3 ಹಾಗೂ ಸಫಾಯಿ ಕರ್ಮಚಾರಿ ಮಕ್ಕಳಿಗೆ 2 ಲ್ಯಾಪ್‍ಟಾಪ್ ವಿತರಿಸಲು ಅವಕಾಶವಿರುತ್ತದೆ. ಬಿ.ಕಾಂ, ಬಿ.ಎಸ್ಸಿ, ಎಂ.ಕಾಂ, ಎಂ.ಎಸ್ಸಿ, ಬಿ.ಇ, ಎಂ.ಟೆಕ್ ವಿದ್ಯಾಭ್ಯಾಸ ಮಾಡುತ್ತಿರಬೇಕು. ಅರ್ಜಿದಾರರು ಜಿಲ್ಲಾ ವ್ಯವಸ್ಥಾಪಕರು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ, ನಂ.337/16ಎ-16, ಗಣೇಶ್ ಲೇಔಟ್ 1ನೇಕ್ರಾಸ್ ಪಿ.ಬಿ.ರಸ್ತೆ ದಾವಣಗೆರೆಯಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಸಲ್ಲಿಸಬೇಕು ಎಂದು ನಿಗಮದ ವ್ಯವಸ್ಥಾಪಕರು ತಿಳಿಸಿದ್ದಾರೆ.

ಡಾ; ಬಿ.ಆರ್.ಅಂಬೇಡ್ಕರ್ ರವರ 68ನೇ ಮಹಾ ಪರಿನಿರ್ವಾಣ ದಿನಾಚರಣೆ
ಶೋಷಿತ, ದಮನಿತ ವರ್ಗಗಳಿಗೆ ಧ್ವನಿಯಾದವರು ಬಾಬಾ ಸಾಹೇಬ್ ಅಂಬೇಡ್ಕರ್ ರವರು
ದಾವಣಗೆರೆ, ಡಿ.06 (ಕರ್ನಾಟಕ ವಾರ್ತೆ) : ಜ್ಞಾನವಂತರು, ಸಮಾಜ ಸುಧಾರಕರು, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರು ನಿರಂತರ ಅಧ್ಯಯನದಿಂದ ತಮ್ಮ ಜ್ಞಾನದ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡರು. ತಮ್ಮ ಜ್ಞಾನ, ಶಿಕ್ಷಣ ಅಸ್ತ್ರದಿಂದ ಶೋಷಿತ, ದಮನಿತ ವರ್ಗಗಳಿಗೆ ಧ್ವನಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.
ಶುಕ್ರವಾರ(ಡಿ.6) ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲಾಡಳಿತ ಕಚೇರಿಯಲ್ಲಿ ಆಯೋಜಿಸಲಾದ ಡಾ; ಬಿ.ಆರ್.ಅಂಬೇಡ್ಕರ್ ರವರ 68 ನೇ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಅಂಬೇಡ್ಕರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಬಾಬಾ ಸಾಹೇಬರ ಮೂಲಮಂತ್ರಗಳಾದ ಶಿಕ್ಷಣ, ಸಂಘಟನೆ, ಹೋರಾಟ ಎಂಬ ಧ್ಯೇಯ ವಾಕ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿರುವ ಶೋಷಿತರು, ತುಳಿತಕ್ಕೊಳಪಟ್ಟ ವರ್ಗಗಳಿಗೆ ನ್ಯಾಯ ಕೊಡಬೇಕಾಗಿದೆ ಎಂದರು.
ಪರಿನಿರ್ವಾಣ ಎಂಬುವುದು ಬೌದ್ದಧರ್ಮದ ಮುಖ್ಯ ತತ್ವ ಹಾಗೂ ಗುರಿಗಳಲ್ಲಿ ಒಂದಾಗಿದೆ. ಸಂಸ್ಕøತದಲ್ಲಿ ಪರಿನಿರ್ವಾಣಕ್ಕೆ ಸಾವಿನ ನಂತರ ನಿರ್ವಾಣ ಎಂದರ್ಥ ಇದು ದೇಹವು ಸತ್ತ ನಂತರ ನಿರ್ವಾಣದ ಸಾಧನೆಯನ್ನು ಸೂಚಿಸುತ್ತದೆ. ಬೌದ್ದಧರ್ಮದ ಪ್ರಕಾರ ನಮ್ಮ ಜೀವನದ ಕರ್ಮವನ್ನು ದೇಹದ ಮರಣದ ನಂತರ ಆತ್ಮದ ಮೂಲಕ ಮುಂದಿನ ಜನ್ಮಕ್ಕೆ ಸಾಗಿಸಲಾಗಿತ್ತದೆ. ಅಂಬೇಡ್ಕರರು ಅಪಾರ ಜ್ಞಾನ ಹೊಂದಿದ್ದರಿಂದಲೇ ಅವರು ಪ್ರಪಂಚ ಗುರುತಿಸುವಂತಹ ವ್ಯಕ್ತಿಯಾಗಿದ್ದರು, ಅದರಿಂದಾಗಿ ಇಡೀ ಪ್ರಪಂಚ ಅವರನ್ನು ಗೌರವಿಸುತ್ತಿದೆ. ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ನಾವುಗಳು ಪ್ರತಿ ಹೆಜ್ಜೆಯಲ್ಲಿಯೂ ಪಾಲಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ವಿದ್ಯಾರ್ಥಿಭವನದ ಬಳಿಯ ಅಂಬೇಡ್ಕರ್ ವೃತ್ತದಲ್ಲಿನ ಡಾ; ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹೆಗ್ಗೆರೆ ರಂಗಪ್ಪ ಮತ್ತು ನೀರ್ಥಡಿ ಸಂಗಡಿಗರಿಂದ ಅಂಬೇಡ್ಕರ್ ಕುರಿತು ಗಾಯನ ಪ್ರಸ್ತುತ ಪಡಿಸಿದರು. ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಸಿಇಓ ಸುರೇಶ್.ಬಿ.ಇಟ್ನಾಳ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ, ಡಿಡಿಪಿಐ ಕೊಟ್ರೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ರವಿಚಂದ್ರ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರಾದ ರವಿನಾರಾಯಣ, ನಂದಿಗಾವಿ ಶ್ರೀನಿವಾಸ್, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿಗಳು, ಅಂಬೇಡ್ಕರ್ ಅಭಿಮಾನಿಗಳು ಉಪಸ್ಥಿತರಿದ್ದರು.
ಕನ್ಸ್‍ಲ್ಟೆಂಟ್ ಇಂಜಿನಿಯರ್‍ಗಳ ಸಭೆ
ದಾವಣಗೆರೆ, ಡಿ.06 (ಕರ್ನಾಟಕ ವಾರ್ತೆ) : ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ ಅರ್ಜಿಗಳನ್ನು ಅಪ್‍ಲೋಡ್ ಮಾಡುವಲ್ಲಿ ಇರುವ ತೊಡಕುಗಳನ್ನು ಸಮಸ್ಯೆಗಳ ಬಗ್ಗೆ ಚರ್ಚಿಸಲು ಡಿಸೆಂಬರ್ 9 ರಂದು ಸಂಜೆ 4 ಗಂಟೆಗೆ ಕನ್ಸ್‍ಲ್ಟೆಂಟ್ ಇಂಜಿನಿಯರ್‍ಗಳ ಸಭೆಯನ್ನು ಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.
ನಿಕ್ಷಯ್ ವಾಹನಕ್ಕೆ ಚಾಲನೆ
ದಾವಣಗೆರೆ, ಡಿ.06 (ಕರ್ನಾಟಕ ವಾರ್ತೆ) : 100 ದಿನಗಳ ಕ್ಷಯಪ್ರಕರಣಗಳನ್ನು ಪತ್ತೆ ಹಚ್ಚುವ ಅಭಿಯಾನವನ್ನು ಡಿಸೆಂಬರ್ 7 ರಿಂದ 2025 ರ ಮಾರ್ಚ್ 17 ರವರೆಗೆ ದೇಶಾದ್ಯಂತ ಚಾಲನೆ ನೀಡುತ್ತಿದ್ದು ಡಿ.7 ರಂದು ಮಧ್ಯಾಹ್ನ 3 ಗಂಟೆಗೆ ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ತಮ್ಮ ದಾವಣಗೆರೆ ಗೃಹಕಚೇರಿ ಬಳಿ ನಿಕ್ಷಯ್ ವಾಹನಕ್ಕೆ ಚಾಲನೆ ನೀಡುವರು ಎಂದು ಜಿಲ್ಲಾ ಕ್ಷಯ ನಿವಾರಣಾಧಿಕಾರಿಗಳು ತಿಳಿಸಿದ್ದಾರೆ.
=====
ಆಪ್ ತಂತ್ರಾಂಶದ ಮಾದರಿ ನೊಂದಣಿ ಸಮೀಕ್ಷೆ ವ್ಯವಸ್ಥೆಗೆ ತರಬೇತಿ
ದಾವಣಗೆರೆ,ಡಿಸೆಂಬರ್.06(ಕರ್ನಾಟಕ ವಾರ್ತೆ) ಕೇಂದ್ರ ಸರ್ಕಾರದ ಜನಗಣತಿ ಇಲಾಖೆಯಿಂದ ಆಪ್ ಮೂಲಕ ಜನನ ಮತ್ತು ಮರಣ ಅಂಕಿಅಂಶಗಳನ್ನು ಸಂಗ್ರಹಿಸಲು ಅಂಶಕಾಲಿಕೆ ಗಣತಿದಾರರಿಗೆ ಮಾದರಿ ನೊಂದಣಿ ಕುರಿತಂತೆ ತರಬೇತಿಯನ್ನು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿತ್ತು.
ತರಬೇತಿ ಕಾರ್ಯಗಾರವನ್ನು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿಯವರು ಉದ್ಘಾಟಿಸಿ ಆಪ್ ಮೂಲಕ ಮಾದರಿ ನೊಂದಣಿ ಪದ್ದತಿಯ ಅವಶ್ಯಕತೆ ಮತ್ತು ಇದರ ಗುಣಮಟ್ಟದ ಕಾರ್ಯದ ಬಗ್ಗೆ ವಿವರಿಸಿದರು. ಕೇಂದ್ರ ಸರ್ಕಾರವು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಅಂಶಕಾಲಿಕ ನೊಂದಣಿದಾರರನ್ನಾಗಿ ಮಾಡಿದ್ದು ಇವರ ಮೂಲಕ ನೇರವಾಗಿ ಜನನ ಮತ್ತು ಮರಣದ ಅಂಕಿಅಂಶಗಳನ್ನು ಸಂಗ್ರಹಿಸುತ್ತದೆ. ಇದಕ್ಕಾಗಿ ಆಪ್ ಮೂಲಕ ಅವರು ಜನನ ಹಾಗೂ ಮರಣದ ಮಾಹಿತಿಯನ್ನು ಸಂಗ್ರಹಿಸಿ ಆಪ್ ಮೂಲಕ ಅಪ್‍ಲೋಡ್ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ.
ಕೇಂದ್ರ ಜನಗಣತಿ ಇಲಾಖೆಯಿಂದ ದೈನಂದಿನ ಜನನ ಮತ್ತು ಮರಣ ಪ್ರಮಾಣವನ್ನು ಈ ನೊಂದಣಿ ಪದ್ದತಿಯ ಮೂಲಕ ಮಾಹಿತಿ ಸಂಗ್ರಹಿಸುತ್ತಿದೆ. ಇದರ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲು ಈ ತರಬೇತಿಯನ್ನು ಆಯೋಜಿಸಲಾಗಿದೆ. ಚಿತ್ರದುರ್ಗ, ಚಿಕ್ಕಮಗಳೂರು, ಹಾವೇರಿ, ದಾವಣಗೆರೆ, ಬಳ್ಳಾರಿ ಜಿಲ್ಲೆಯ ಗಣತಿದಾರರಿಗೆ ತರಬೇತಿ ಆಯೋಜಿಸಲಾಗಿದೆ ಎಂದರು.
ಜನನ ಮತ್ತು ಮರಣದ ಅಂಕಿಅಂಶಗಳನ್ನು ನಿಖರವಾಗಿ ಸಂಗ್ರಹಿಸುವುದರಿಂದ ಸರ್ಕಾರದ ಯೋಜನೆಗಳಿಗೆ ಇದು ಬಹಳ ಉಪಯುಕ್ತವಾಗಿರುವುದರಿಂದ ನಿಖರವಾಗಿ ಮಾಹಿತಿ ಸಂಗ್ರಹಿಸುವ ಕೆಲಸವನ್ನು ಗಣತಿದಾರರು ಮಾಡಬೇಕಾಗಿದೆ ಎಂದರು.
ಈ ಕಾರ್ಯಗಾರದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜನಗಣತಿ ಇಲಾಖೆ ಸಾಂಖ್ಯಿಕ ಅಧಿಕಾರಿ ಕೇಶವಮೂರ್ತಿ, ಸಹಾಯಕ ನಿರ್ದೇಶಕರಾದ ಮ್ಯಾಥೀವ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ನೀಲಾ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ರೈತ ಭವನದ ಶಂಕುಸ್ಥಾಪನಾ ಸಮಾರಂಭ
ದಾವಣಗೆರೆ ಡಿ.6 (ಕರ್ನಾಟಕ ವಾರ್ತೆ)- ದಾವಣಗೆರೆ ರೈತ ಹುತಾತ್ಮರ ಸ್ಮರಣಾರ್ಥ ಸಮಿತಿ(ರಿ) ಹಾಗೂ ದಾವಣಗೆರೆ ಜಿಲ್ಲೆಯ ರೈತಪರ ಸಂಘನೆಗಳ ಆಶ್ರಯದಲ್ಲಿ ಡಿ.7 ರಂದು ಸಂಜೆ 5 ಗಂಟೆಗೆ ರೈತ ಹುತಾತ್ಮತ ಸಮಾಧಿ, ಹುಳಪಿನಕಟ್ಟೆ ಕ್ರಾಸ್, ಪಾರ್ಕ್ ಪಕ್ಕ, ರಾಷ್ಟ್ರೀಯ ಹೆದ್ದಾರಿ-48, ಆನಗೋಡು ಹತ್ತಿರ, ದಾವಣಗೆರೆ ಇಲ್ಲಿ ರೈತ ಭವನದ ಶಂಕುಸ್ಥಾಪನಾ ಸಮಾರಂಭವನ್ನು ಆಯೋಜಿಸಲಾಗಿದೆ.
ಸಾಣೇಹಳ್ಳಿಯ ಶಾಖಾಮಠದ ಶ್ರೀತರಳಬಾಳು ಜಗದ್ಗುರುಗಳಾದ ಡಾ.ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಯವರು ದಿವ್ಯ ಸಾನಿಧ್ಯ ವಹಿಸುವರು. ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಶಂಕುಸ್ಥಾಪನೆಯನ್ನು ನೆರೆವೇರಿಸುವರು. ರೈತ ಹುತಾತ್ಮತ ಸ್ಮರಣಾರ್ಥ ಸಮಿತಿಯ ಗೌರವಾಧ್ಯಕ್ಷರಾದ ಹೆಚ್ ನಂಜುಂಡಪ್ಪ ಗೌರವಾಧ್ಯಕ್ಷರಾಗಿರುವರು. ರೈತ ಹುತಾತ್ಮರ ಸ್ಮರಣಾರ್ಥ ಸಮಿತಿಯ ಅಧ್ಯಕ್ಷರಾದ ಎನ್.ಜಿ.ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಗಣಿ, ಭೂವಿಜ್ಞಾನ ಮತ್ತು ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಮಾಯಕೊಂಡ ಶಾಸಕರಾದ ಕೆ.ಎಸ್ ಬಸವಂತಪ್ಪ ಪಾಲ್ಗೊಳ್ಳುವರು. ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ.ಇಟ್ನಾಳ್, ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್, ತಹಶೀಲ್ದಾರ್ ಡಾ.ಎಂ.ವಿ ಅಶ್ವಥ್, ಎ.ಪಿ.ಎಂ.ಸಿಯ ಕಾರ್ಯದರ್ಶಿ ಹೆಚ್.ಸಿ.ಎಂ ರಾಣಿ ಹಾಗೂ ಇನ್ನಿತರರು ಭಾಗವಹಿಸುವರು.
======
About The Author
Discover more from JANADHWANI NEWS
Subscribe to get the latest posts sent to your email.