March 15, 2026
Screenshot_20241107_181955.png

ಚಳ್ಳಕೆರೆ ನ.7.  17 ಹಾಸ್ಟೆಲ್‌ಗಳಿಗೆ 7ಜನ ವಾರ್ಡನ್‌
10 ಬಿಸಿಎಂ ವಿದ್ಯಾರ್ಥಿನಿಲಯಗಳಲ್ಲಿ ಇಲ್ಲ ನಿಲಯ ಪಾಲಕರು.
ಹೌದು ಇದು ಚಳ್ಳಕೆರೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳು ಸೇರಿ 17 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಿದ್ದು 7 ಜನ ವಾರ್ಡನ್ ಗಳಿದ್ದು

ಎಂ.ವೀರಭದ್ರಪ್ಪ ಬಾಲಕರ ವಿದ್ಯಾರ್ಥಿನಿಲಯಚಳ್ಳಕೆರೆ.ಮೀರಸಾಬಿಹಳ್ಳಿ.ಸಿದ್ದಾಪುರ.ನನ್ನಿವಾಳ .ಪಗಡಲಬಂಡೆಒಟ್ಟು 5 .
ಸಿ.ಚಂದ್ರನಾಯ್ಕ್ ಬಾಲಕರ ವಿದ್ಯಾರ್ಥಿನಿಲಯ ನಗರ 3.
ಉಷಾ ಚೌಹಣ್ ಚಳ್ಳಕೆರೆ.ಟಿ.ಎನ್.ಕೋಟೆ 2.
ಬಂಗಾರಮ್ಮ ಚಿಳ್ಳಕೆರೆ ನಗರ 2.
ಟಿ.ಸುಮಿತ್ರ ಚಳ್ಳಕೆರೆ ನಗರ 2.
ಹುಸೇನ್ ಸಾಬ್ ನಾಯಕನಹಟ್ಟಿ .ತಿಪ್ಪಯ್ಯನಕೋಟೆ 2.
ದೀವ್ಯಶ್ರೀ 1.
ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ 17 ವಿದ್ಯಾರ್ಥಿ ನಿಲಯಗಳಲ್ಲಿ 10ರಲ್ಲಿ ನಿಲಯ ಪಾಲಕರು ಇಲ್ಲ. 17 ಹಾಸ್ಟೆಲ್‌ಗಳ ವಿದ್ಯಾರ್ಥಿಗಳನ್ನು 7 ನಿಲಯಪಾಲಕರು ನೋಡಿಕೊಳ್ಳಬೇಕಿದೆ.
10 ಹಾಸ್ಟೆಲ್‌ಗಳಿಗೆ ನಿಲಯ ಪಾಲಕರಿಲ್ಲದೆಕೇವಲ 7 ಜನರು ಮಾತ್ರ ನೋಡಿಕೊಳ್ಳಬೇಕಿರುವುದರಿಂದ ಅವುಗಳನ್ನು ಹಂಚಿಕೆ ಮಾಡಿಕೊಂಡಿದ್ದಾರೆ.ಒಬ್ಬರಿಗೆ ಐದು ಮತ್ತೊಬ್ಬರಿಗೆ ಮೂರು.ಹೀಗೆ ಎರಡು ಹೆಚ್ಚುವರಿ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಐದು ಹಾಸ್ಟೆಲ್‌ಗಳನ್ನು ನೋಡಿಕೊಳ್ಳುವ ವಾರ್ಡನ್ ಪಾಡಂತೂ ಹೇಳತೀರದಾಗಿದೆ. ಕನಿಷ್ಠ ಒಂದು ದಿನವೂ ಹಾಸ್ಟೆಲ್‌ನಲ್ಲಿದ್ದು ಮಕ್ಕಳ ಸಮಸ್ಯೆ ಆಲಿಸಲು ಸಾಧ್ಯವಾಗದಷ್ಟು ಒತ್ತಡ ಅವರ ಮೇಲಿದೆ.

ನಿಲಯ ಪಾಲಕರು ಕೇವಲ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಊಟ ಮತ್ತು ವಸತಿ ವ್ಯವಸ್ಥೆ ಮಾಡುವುದು ಮಾತ್ರವಲ್ಲ. ಮಕ್ಕಳಿಗೆ ಪೋಷಕರಂತೆ ಎಲ್ಲ ರೀತಿಯ ಸಮಸ್ಯೆಗಳನ್ನು ನೋಡಿಕೊಳ್ಳಬೇಕಿದೆ. ವಾರ್ಡನ್‌ಗಳ ಕೊರತೆ ಇರುವುದರಿಂದ ಜವಾಬ್ದಾರಿ ವಹಿಸಿಕೊಂಡಿರುವ ಹಾಸ್ಟೆಲ್‌ಗಳಿಗೆ ಸುತ್ತಾಡುತ್ತಲೇ ಇರುತ್ತಾರೆ. ಪೋಷಕರ ರೀತಿಯಲ್ಲಿ ನೋಡಿಕೊಳ್ಳಬೇಕಾದ ನಿಲಯಪಾಲಕರು ನಮಗೆ ದಿನ ಪೂರ್ತಿ ಸಿಗುವಂತಾಗಲಿ ಎಂಬುದು ಬಿಸಿಎಂ ಹಾಸ್ಟೆಲ್‌ನ ವಿದ್ಯಾರ್ಥಿಗಳ ಬಯಕೆಯಾಗಿದೆ.
ನಿಲಯ ಪಾಲಕರು .ಅಡುಗೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯದಲ್ಲಿದ್ದು ಬಯೋಮೆಟ್ರಿಕ್ ಹಾಜರಾತಿ ಹಾಕಬೇಕು ಹಾಗೂ ವಿದ್ಯಾರ್ಥಿನಿಯಗಳಲ್ಲಿಚಲನ ವಲನಗಳನ್ನು ಅಹಿತಕರ ಘಟನೆಯಾಗದಂತೆ ಸಿ.ಸಿ ಕ್ಯಾಮರ ಅಳವಡಿಸ ಬೇಕೆಂಬ ನಿಯಮವಿದ್ದರೂ ಸಹ ಯಾವೊಂದು ವಿದ್ಯಾರ್ಥಿನಿಕಯದಲ್ಲಿ ಸಿ.ಸಿ.ಕ್ಯಾಮರ ಮತ್ತು ಬಯೋಮೆಟ್ರಿಕ್ ಹಾಜರಾತಿ ಯಂತ್ರಗಳು ಕಣ್ಮರೆಯಾಗಿವೆ.
ಇನ್ನು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ರಮೇಶ್ ಇವರಿಗೆ ಚಳ್ಳಕೆರೆ ತಾಲೂಕಿನ ಜತೆಗೆ ಮೊಳಕಾಲ್ಮೂರು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾಗಿಹೆಚ್ಚುವರಿ ನೀಡಿರುವುದು ಸಹ ಒತ್ತಡಗಳ ನಡುವೆ ಕರ್ತವ್ಯ ನಿರ್ವಹಿಸುತ್ತಿರುವುದು ಅನಿವಾರ್ಯವಾಗಿದೆ.

.

ತಾಲ್ಲೂಕಿನ 10 ಹಾಸ್ಟೆಲ್‌ಗಳಲ್ಲಿ ಪೂರ್ಣ ಪ್ರಮಾಣದ ವಾರ್ಡನ್‌ಗಳು ಇಲ್ಲ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು   ಆದಷ್ಟು ಬೇಗ ನಿಲಯ ಪಾಲಕರನ್ನು ನೇಮಕ ಮಾಡುವರೇ ಕಾದು ನೋಡ ಬೇಕಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading