January 30, 2026
1759838791057.jpg

ಚಿತ್ರದುರ್ಗಅ.07:
ವಾಲ್ಮೀಕಿ ರಾಮಾಯಣ ಜಗತ್ತಿನ ಸಾಮಾಜಿಕ ಪಠ್ಯ. ಈ ಪಠ್ಯದಲ್ಲಿರುವ ಎಲ್ಲ ಅಂಶಗಳನ್ನು ಪರಿಶೀಲಿಸಿ ಅವುಗಳನ್ನು ವೈಜ್ಞಾನಿಕ ಹಾಗೂ ವೈಚಾರಿಕ ಚಿಂತಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ಡಾ.ಬಿ.ಆರ್.ಅಂಬೇಡ್ಕರ್ ಜ್ಞಾನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ವಾಲ್ಮೀಕಿ ಜಯಂತಿಯಲ್ಲಿ ಅವರು ಮಾತನಾಡಿದರು.

ರಾಮಾಯಣ ಮಾನವ ಬದುಕಿನ ವಿಕಾಸದ ಚರಿತ್ರೆಯಾಗಿರುವುದರಿಂದ ಅದು ಮೌಖಿಕ ಮತ್ತು ಶಿಷ್ಟವಾಗಿ ಅದರ ವೇಗವು ಹೆಚ್ಚಿದೆ. ರಾಮನ ಬದಲಾಗಿ ವಾಲ್ಮೀಕಿಯ ವ್ಯಕ್ತಿತ್ವ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಐಕ್ಯೂಎಸಿ ಸಂಚಾಲಕಿ ಪ್ರೊ. ತಾರಿಣಿ ಶುಭದಾಯಿನಿ ಉಪನ್ಯಾಸ ನೀಡಿ, ಕವಿಗೆ ಕವಿಯಾಗಿದ್ದ ವಾಲ್ಮೀಕಿ. ಮಾನವೀಯತೆ, ಐಕ್ಯತೆ ಸಂಕೇತವಾಗಿದ್ದ ನಮಗೆ ವಾಲ್ಮೀಕಿ ಈಗ ಎಂಥವನಾಗಿರಬೇಕು ಎಂಬ ಪ್ರಶ್ನೆ ನಮ್ಮ ಮುಂದೆ ಇದೆ. ಸಾಂಸ್ಕೃತಿಕ ರಾಜಕಾರಣದ ಸಂಕಥನದ ಬೀಜ ರಾಮಾಯಣಲ್ಲಿ ಇವೆ. ಗ್ರೀಕ್ ಮಹಾಕವಿ ಸಹ ವಾಲ್ಮೀಕಿಯ ಹಾಗೆ ಇದ್ದ ಎಂಬ ಮೌಖಿಕ ಕಾವ್ಯಗಳು ಹೇಳುತ್ತವೆ. ಸಮುದಾಯದ ಚರಿತ್ರೆ ಮೌಖಿಕ ಕಾವ್ಯ ದೊರೆಯುತ್ತವೆ. ರಾಮಾಯಣಲ್ಲಿ ಹಲವು ಬುಡಕಟ್ಟಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಚರಿತ್ರೆಯ ಪರಂಪರೆ ಇದೆ. ಮನುಕುಲದ ಚರಿತ್ರೆ ಕುರಿತು ಗಂಭೀರವಾಗಿ ಚಿಂತನೆ ಮಾಡಿದವನು ವಾಲ್ಮೀಕಿ. ಹೀಗಾಗಿ ವಾಲ್ಮೀಕಿ ಬಗೆಗಿನ ಅವಾಜ್ಞೆಯ ಕಥೆಗಳನ್ನು ನಾವೆಲ್ಲರೂ ದೂರ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪರೀಕ್ಷಾ ನಿಯಂತ್ರಣ ಅಧಿಕಾರಿ ಪ್ರೊ. ಬಿ ಸುರೇಶ್ ಮಾತನಾಡಿ, ಸಂಸ್ಕೃತದ ಕವಿ ಪಾಣಿನಿಯ ಅಷ್ಟಾಧ್ಯಾಯಿ ಕೃತಿಯ ನಂತರ ವಾಲ್ಮೀಕಿ ಮಹಾಕಾವ್ಯ ರಚನೆಯಾಗಿದೆ. ಭಾರತದ ಆಚೆಗೂ ವಾಲ್ಮೀಕಿ ಕಾವ್ಯ ವಿಸ್ತರಿಸಿಕೊಂಡು, 300ಕ್ಕೂ ಹೆಚ್ಚು ಮುದ್ರಣಗೊಂಡಿದೆ ಎಂದು ಹೇಳಿದರು.
ಪ್ರಾಧ್ಯಾಪಕರ ಸಂಘದ ಕಾರ್ಯದರ್ಶಿ ಪ್ರೊ ಹನುಮಂತಪ್ಪ, ಮಾತನಾಡಿದರು. ಮೇಲ್ವಿಚಾರಕ ರಂಗಸಾಥ, ಕನ್ನಡ ಸಹಾಯಕ ಪ್ರಾಧ್ಯಾಪಕ ಪ್ರೊ ಮಂಜುನಾಥ, ಪ್ರಾಧ್ಯಾಪಕಿ ಪ್ರೊ ಸೌಮ್ಯ, ಪ್ರೊ ಸಲ್ಮಾ ಇದ್ದರು.
===========

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading