
ಚಳ್ಳಕೆರೆವಾ.7 ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ಉಚಿತ ಆರೋಗ್ಯ ಶಿಬಿರದ ಸದುಪಯೋಗಪಡೆದುಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷ ಆನಂದ್ ಕುಮಾರ್ ಕಿವಿಮಾತು ಹೇಳಿದರು .
ಚಳ್ಳಕೆರೆ ತಾಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮದಲ್ಲಿ ಸಿಡಿಲ ಸಂತ ಸ್ವಾಮಿ ವಿವೇಕಾನಂದ ಸಮಾಜ ಸೇವಾ ಸಂಸ್ಥೆ .
ಗ್ರಾಮ ಪಂಚಾಯತಿ.ಪ್ರಾರ್ಥಮಿಕ ಆರೋಗ್ಯ ಕೇಂದ್ರ ಚನ್ನಮ್ಮನಾಗತಿಹಳ್ಳಿ
ಎಸ್.ಎಸ್. ನಾರಾಯಣ ಹೆಲ್ತ್, ಸೂಪರ್ ಸ್ಪೆಷಾಲಱ ಆಸ್ಪತ್ರೆ .
ಮತ್ತುವೈದೇಹಿ ಆಸ್ಪತ್ರೆ
ಇವರ ಸಂಯುಕ್ತ ಆಶ್ರಯದಲ್ಲಿ
ಉಚಿತ ಆರೋಗ್ಯ ಮತ್ತು ತಪಾಸಣಾ ಶಿಬಿರವದಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮೀಣ ಜನರು ಕೆಲಗಳ ಒತ್ತಡ.ಬಡತನ ನಡುವೆ ಕಾಯಿಲೆ ಇದೆ ಎಂದು ಗೊತ್ತಾದರೂ ಹಣದ ಕೊರತೆಯಿಂದ ಸಕಾಲಕ್ಕೆ ತಪಾಸಣೆ ಹಾಗೂ ಚಿಕಿತ್ಸೆ ಪಡೆಯದೆ ಕಾಯಿಲೆ ಹೆಚ್ಚಾದಾಗ ಚಿಕಿತ್ಸೆ ಪಡೆಯದೆ ಸಾವು ನೋವು ಅನುಭವಿಸುವಂತಾಗಿದೆ.ನಿಮ್ಮ ಮನೆ ಬಾಗಿಲಿಗೆ ಉಚಿತ ಆರೋಗ್ಯ ಸೇವೆ ನೀಡಲು ನುರಿತ ತಜ್ಞ ವೈದ್ಯರಿಂದ ಬಿಪಿ
ಸಕ್ಕರೆ.ಕಾಯಿಲೆ ಕಿವಿಮೂಗು ಗಂಟಲು.ಕ್ಯಾನ್ಸರ್. ಹೃದಯ ಸೇರಿದಂತೆ ಹಲವು ಕಾಯಿಲೆಗಳಿಗೆ ಉಚುತ ತಪಾಸಣೆ ಹಾಗೂ ಚಿಕಿತ್ಸೆ ಸೌಲಭ್ಯ ನೀಡಲಿದ್ದು ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಸದುಪಯೋಗ ಪಡಿಸಿಕೊಂಡು ಉತ್ತಮ ಆರೋಗ್ಯವಂತರಾಗುವಂತೆ ತಿಳಿಸಿದರು.
ಡಾ.ರಘುನಂದನ್
ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತಖಾಯಿಲೆಗಳಾಗಿದ್ದು, ಬಡಜನರು ಆರ್ಥಿಕವಾಗಿ ಭರಿಸಲು ಅಸಾಧ್ಯ. ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ ಎಂದು ತಿಳಿಸಿದರು.
ಆರೋಗ್ಯ ಶಿಬಿರದಲ್ಲಿ
ಎಸ್ಎಸ್ ನಾರಾಯಣ ಹೆಲ್ತ್ ಕೇರ್ ಡಾಕ್ಟರ್ ಗುಡ್ಡಪ್ಪ.
ವೈದೇಹಿ ಆಸ್ಪತ್ರೆ, ಡಾ.ಶ್ರೀನಿವಾಸ್
ಉಚಿತ ಆರೋಗ್ಯ ಶಿಬಿದಲ್ಲಿ ಸುಮಾರು 500 ರೋಗಿಗಳನ್ನ ತಪಾಸಣೆ ಮಾಡಲಾಗಿದ್ದು 60 ಜನ ರೋಗಿಗಳು ಎಸ್ಎಸ್ ನಾರಾಯಣ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆ ದಾವಣಗೆರೆ ಇವರಿಗೆ ಶಸ್ತ್ರ ಚಿಕಿತ್ಸೆಗೆ ಸೂಚಿಸಲಾಗಿದೆ
20 ಜನ ರೋಗಿಗಳನ್ನ ವೈದೇಹಿ ಆಸ್ಪತ್ರೆ ಬೆಂಗಳೂರು ಇಲ್ಲಿ ಶಸ್ತ್ರಚಿಕಿತೆಗೆ ಸೂಚಿಸಲಾಗಿದೆ
ಇಂದಿನ ಉಚಿತ ಆರೋಗ್ಯ ಶಿಬಿರದಲ್ಲಿ ನೋಂದಾಯಿಸಿಕೊಂಡವರು ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ ಔಷಧಿ ಹಾಗೂ ಬೆಡ್ ಚಾರ್ಜ್ ಮಾತ್ರ ಕೊಡಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದರು.
ಸದಸ್ಯರಾದ ವೀರಭದ್ರ ನಾಯಕ ದಳಪತಿ ಭೀಮಪ್ಪ ಶಿವಣ್ಣ ಮಾಜಿ ಗ್ರಾಂ ಪಂ ಅಧ್ಯಕ್ಷ ತಿಪ್ಪೇಸ್ವಾಮಿ.
ಪಿಡಿಒ ಕೊರ್ಲಾಯ್ಯ. ಸ್ವಾಮಿ ವಿವೇಕಾನಂದ ಸಂಘದ ಚಲ್ಮೇಶ . .ಮಂಜುನಾಥ್, ಲೋಕನಾಥ್ ಕರಿಯಣ್ಣ ಇತರರಿದ್ದರು.






About The Author
Discover more from JANADHWANI NEWS
Subscribe to get the latest posts sent to your email.