
ಚಳ್ಳಕೆರೆ:ಛಾಯಾಚಿತ್ರಗಳು ಪ್ರತಿಯೊಂದು ಕ್ಷೇತ್ರಕ್ಕೂ ಅವಶ್ಯಕವಾಗಿವೆ, ಆದರೆ ಛಾಯಾ ಚಿತ್ರಗ್ರಾಹಕನ ಆರ್ಥಿಕ ಸ್ಥಿತಿ ಮಾತ್ರ ಬದಲಾಗಿಲ್ಲ ಎಂದು ಶಾಸಕ ಟಿ ರಘುಮೂರ್ತಿ ಹೇಳಿದರು.
ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ 185ನೇ ವಿಶ್ವ ಛಾಯಗ್ರಹಣ ದಿನಾಚರಣೆ ಮತ್ತು ಛಾಯಾಗ್ರಹಕರ ಕುಟುಂಬ ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅನಾದಿ ಕಾಲದಿಂದಲೂ ಛಾಯಾಚಿತ್ರಗಳಿಗೆ ಗೌರವವಿದೆ, ತೈಲ ಚಿತ್ರಗಳಿಂದ ಹಿಡಿದು ಇಂದಿನ ಡಿಜಿಟಲ್ ಚಿತ್ರಗಳವರೆಗಿನ ಅವಧಿಯಲ್ಲಿ ಸಾಕಷ್ಟು ತಂತ್ರಜ್ಞಾನಗಳಿಂದ ಬದಲಾವಣೆಯಾಗಿದೆ. ಸಾವಿರಾರು ರೂಪಾಯಿ ಮೌಲ್ಯದ ಕ್ಯಾಮೆರಾಗಳನ್ನು ಹೊಂದಿದ ಛಾಯಾಗ್ರಾಹಕರು ಒಂದು ದಿನದ ದುಡಿಮೆ ಸಂಪಾದಿಸಲು ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ ಸಂದರ್ಭದಲ್ಲಿ ಛಾಯಾಚಿತ್ರಗ್ರಾಹಕರು ಅನುಭವಿಸಿದ ಕಷ್ಟಗಳನ್ನು ಕಂಡು ಸರ್ಕಾರ ಈಗಾಗಲೇ ಛಾಯಾಚಿತ್ರ ಗ್ರಾಹಕರನ್ನು ಅಸಂಘಟಿತ ಕಾರ್ಮಿಕರೆಂದು ಗುರುತಿಸಿದ್ದು ಕಾರ್ಮಿಕರಿಗೆ ಸಿಗುವ ಎಲ್ಲಾ ಸೌಲಭ್ಯಗಳು ಛಾಯಾಚಿತ್ರ ಗ್ರಾಹಕರಿಗೂ ದೊರೆಯಲಿದೆ ತಾಲೂಕಿನಲ್ಲಿ ಛಾಯಾಚಿತ್ರಗ್ರಾಹಕರ ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು.




ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಛಾಯಾಚಿತ್ರ ಗ್ರಾಹಕರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಛಾಯಾಚಿತ್ರಗ್ರಾಹಕರ ತಾಲೂಕು ಅಧ್ಯಕ್ಷ ನೇತಾಜಿ ಆರ್ ಪ್ರಸನ್ನ ಮಾತನಾಡಿ ಛಾಯಾಚಿತ್ರಗ್ರಾಹಕರು ಇತ್ತೀಚಿನ ದಿನಗಳಲ್ಲಿ ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದು ಕಾಲಕ್ಕೆ ತಕ್ಕಂತೆ ಯುವ ಛಾಯಾಚಿತ್ರ ಗ್ರಾಹಕರು ಆಧುನಿಕ ಕೌಶಲ್ಯಗಳನ್ನು ಕಲಿತುಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು ಎಂದರು.ಇದೇ ವೇಳೆ ತಾಲೂಕಿನಲ್ಲಿ ಛಾಯ ಭವನ ನಿರ್ಮಿಸಲು ನಿವೇಶನ ಕಲ್ಪಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷರಾದ ನಾಗೇಶ್ ರಾಜ್ಯ ಸಂಘದ ಕಾರ್ಯದರ್ಶಿಗಳಾದ ಶ್ರೀ ಮುರಳಿ ರಾಜ್ಯ ಸಂಘದ ನಿರ್ದೇಶಕರಾದ ಉಮಾಶಂಕರ್ ಮತ್ತು ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ಸೈಯದ್ ರಹಮತ್ ಉಲ್ಲಾ ಮತ್ತು ಪ್ರಧಾನ ಕಾರ್ಯದರ್ಶಿ ಹಿರಿಯೂರ್ ನಾಗಣ್ಣಜಿಲ್ಲಾ ಖಜಂಚಿ ಕುಮಾರ್ ಮತ್ತು ತರೀಕೆರೆ ತಾಲೂಕು ಅಧ್ಯಕ್ಷರಾದ ಭವಾನಿ ಶಂಕರ್ಚಳ್ಳಕೆರೆ ತಾಲ್ಲೂಕು ಛಾಯಾಚಿತ್ರ ಗ್ರಾಹಕರ ಸಂಘದ ಉಪಾಧ್ಯಕ್ಷರಾದ ಪೀ. ವೈ .ಜಯಕುಮಾರ್ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ್ ಟಿ ಆರ್ ಖಜಾಂಚಿಗಳಾದ
ಅಜಯ್ (ಅಪ್ಪಿ)ಸಂಘಟನಾ ಕಾರ್ಯದರ್ಶಿಯಾದ ಪಿ.ಎಸ್.ಆರ್. ಪಟೇಲ್
ಸಂಘದ ನಿರ್ದೇಶಕರುಗಳಾದ
ನಾಯಕನಹಟ್ಟಿ ಮೃತ್ಯುಂಜಯ ಕೆ. ಶ್ರೀನಿವಾಸ್ಲು
ರಘು. ಅಶೋಕ್ ಭಾನು ವೀರೇಶ್ ಭಾನು. ಫ್ಲೆಕ್ಸ್ ನರಸಿಂಹ. ತಳಕ್ ವೀರೇಶ್ ತಿಪ್ಪೇಸ್ವಾಮಿ. ತಿಪ್ಪೇಶ್. ಶ್ರೀ ವೆಂಕಟೇಶ್. ಕೊಟ್ರೇಶ್. ನಾಗರಾಜ್ ಗೌಡ. ಚೌದ್ರಿ .ಶಶಿ ಶಿವು. ಧರ್ಮಸ್ಥಳದ ಯೋಜನಾಧಿಕಾರಿಗಳಾದ ಶ್ರೀಮತಿ ಶಶಿಕಲಾ
ಸಂಘದ ಪದಾಧಿಕಾರಿಗಳು ಮತ್ತು ಛಾಯಾಗ್ರಾಹಕರ ಕುಟುಂಬ ವರ್ಗದವರು ಹಾಜರಿದ್ದರು
ಈ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದ ಪ್ರಯುಕ್ತ ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾದ ಛಾಯಾಗ್ರಾಹಕರ ಕುಟುಂಬ ವರ್ಗದವರಿಗೆ ಮತ್ತು ಮಕ್ಕಳಿಗೆ ಬಹುಮಾನ ವಿತರಣೆ ಮತ್ತು ಛಾಯಾಗ್ರಾಹಕರ ಮಕ್ಕಳು ಉನ್ನತ ವ್ಯಾಸಂಗದಲ್ಲಿರುವವರಿಗೆ ಪ್ರತಿಭಾ ಪುರಸ್ಕಾರ ಗೌರವ ಸಮರ್ಪಣೆ ಮತ್ತು ಛಾಯಾಗ್ರಾಹಕರಾಗಿ ಸಮಾಜ ಸೇವೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.

About The Author
Discover more from JANADHWANI NEWS
Subscribe to get the latest posts sent to your email.