September 15, 2025

ನಾಯಕನಹಟ್ಟಿ ಅ7 ಗ್ರಾಮದ ಪ್ರತಿಯೊಬ್ಬರು ದೈವಭಕ್ತಿ ಆರಾಧಿಸಿ ಸಮಾಜಕ್ಕೆ ಒಳಿತು ಬಯಸಿ ಸಮಾಜದಲ್ಲಿ ಸಾಮರಸ್ಯ ಮತ್ತು ಸಹಬಾಳ್ವೆ ಬೆಳೆಯಬೇಕಾದರೆ ಇಂತಹ ಧಾರ್ಮಿಕ ಆಚರಣೆಗಳು ಮತ್ತು ದೈವರಾದನೆಗಳು ಹೆಚ್ಚು ಹೆಚ್ಚು ಕೈಗೊಳ್ಳಬೇಕು ಎಂದು ನಿವೃತ್ತ ತಾಸಿಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.

ಸೋಮವಾರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಬೋಸೆದೇವರಹಟ್ಟಿ ಗ್ರಾಮದಲ್ಲಿ ಶ್ರೀಕೊಲ್ಲಾರೇಶ್ವರಿ ವಿಗ್ರಹ ಮೂರ್ತಿ ಪ್ರತಿಷ್ಠಾಪನ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಬುಡಕಟ್ಟು ಸಂಸ್ಕೃತಿ, ಶ್ರೀಮಂತವಾದ ಈ ಗ್ರಾಮದಲ್ಲಿ ಪೂರ್ವಿಕರ ಕಾಲದಿಂದಲೂ ಶ್ರೀ ಕೊಲ್ಲಾರೇಶ್ವರಿ ದೇವಿಯ ಆರಾಧನೆ ಮಾಡುತ್ತಾ ಬಂದಿದ್ದು ಇಂದು ಶುಭ ಸೋಮವಾರ ನವರಾತ್ರಿಯ ಸಂದರ್ಭದಲ್ಲಿ ಶ್ರೀ ಕೋಲ್ಲಾರೇಶ್ವರಿ ದೇವಿಗೆ ಜೀರ್ಣೋದ್ಧಾರ ಮತ್ತು ಲೋಕಾರ್ಪಣೆ ಮಾಡಿರುವುದು ತುಂಬಾ ಸಂತೋಷದ ವಿಷಯ ಗ್ರಾಮದ ಮತ್ತು ಸುತ್ತಮುತ್ತ ಗ್ರಾಮಸ್ಥರಿಗೆ ಶ್ರೀದೇವಿ ಆರೋಗ್ಯ ಯಶಸ್ಸು ಸಕಲ ಐಶ್ವರ್ಯ ಕೊಟ್ಟು ಕಾಪಾಡಲಿ ಈ ನಾಡಿಗೆ ಉತ್ತಮ ಮಳೆ ಬೆಳೆ ಸಮೃದ್ಧಿಯಾಗಿ ಆಗಲಿ ಯುವ ಪೀಳಿಗೆ ಮನಸ್ಸಿಗೆ ಶಾಂತಿ ಕೊಡುವ ಮನಸ್ಸಿಗೆ ಏಕಾಗ್ರತೆಗೊಳಿಸುವಂತಹ ಶಕ್ತಿ ಏನಾದರೂ ಇದ್ದರೆ ದೇವಸ್ಥಾನಕ್ಕೆ ಭಕ್ತಿ ಒಂದೇ ಔಷಧಿ ಪ್ರತಿಯೊಬ್ಬರೂ ಶ್ರೀದೇವಿಯನ್ನ ಪೂಜಿಸಿ ಆರಾಧಿಸಿ ಎಂದು ಶುಭ ಹಾರೈಸಿದರು.

ಇನ್ನೂ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಮಾತನಾಡಿದ ಅವರು ಪೂರ್ವಿಕರ ಕಾಲದಿಂದಲೂ ಬೋಸೆದೇವರಹಟ್ಟಿ ಗ್ರಾಮದಲ್ಲಿ ಶ್ರೀ ಕೊಲ್ಲಾರೇಶ್ವರಿ ದೇವಿ ಗ್ರಾಮದಲ್ಲಿ ನೆಲೆಸಿದ್ದಾಳೆ ಕಳೆದ ಮೂರು ದಿನಗಳ ಕಾಲ ಶ್ರೀ ದೇವಿಯ ವಿಗ್ರಹ ಪ್ರತಿಷ್ಠಾಪನೆ ಮತ್ತು ಲೋಕಾರ್ಪಣೆ ಯನ್ನು ಅದ್ದೂರಿಯಾಗಿ ವಿಜೃಂಭಣೆಯಿಂದ ಗ್ರಾಮಸ್ಥರು ಆಚರಿಸಿದ್ದಾರೆ.
ಗ್ರಾಮದಲ್ಲಿ ಹಿರಿಯರ ಮಾರ್ಗದರ್ಶನದಂತೆ ಯುವ ಪೀಳಿಗೆ ಭಕ್ತಿ ಭಾವಕ್ಕೆ ಮತ್ತು ದೇವಿಯ ಆರಾಧನೆಗೆ ಶ್ರಮಿಸಬೇಕು ಶ್ರೀ ಕೊಲ್ಲಾರೆ ಈಶ್ವರಿ ದೇವಿ ಆಶೀರ್ವಾದದಿಂದ ಗ್ರಾಮದಲ್ಲಿ ಶಾಂತಿ ನೆಮ್ಮದಿ ನೆಲೆಸಿ ದೇವಿ ಆಶೀರ್ವಾದ ಪ್ರತಿಯೊಬ್ಬರ ಮೇಲೆ ಇರಲಿ ಗ್ರಾಮದಲ್ಲಿ ಯಾವುದೇ ಕಷ್ಟ ಬಾರದಂತೆ ಕಾಪಾಡಲಿ ಗ್ರಾಮದಲ್ಲಿ ಪ್ರತಿಯೊಬ್ಬರು ಇಂತಹ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಮುಂದಾಗಬೇಕು ಎಂದರು.

ಇದೇ ವೇಳೆ ಪಟ್ಟಣ ಪಂಚಾಯತಿ ಸದಸ್ಯ ಜೆ.ಆರ್. ರವಿಕುಮಾರ್ ಮಾತನಾಡಿದರು ಬೋಸೆದೇವರಹಟ್ಟಿ ಗ್ರಾಮಸ್ಥರು ಶ್ರೀ ಕೊಲ್ಲಾರೇಶ್ವರಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಲೋಕಾರ್ಪಣೆ ನವರಾತ್ರಿ ಸಂದರ್ಭದಲ್ಲಿ ಮಾಡಿರುವುದು ತುಂಬಾ ಶುಭದಿನ ದೇವಿ ಸದಾಕಾಲ ಗ್ರಾಮಕ್ಕೆ ಶಾಂತಿ ನೆಮ್ಮದಿ ನೀಡಲಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಪಿ.ಓಬಯ್ಯ ದಾಸ್, ಗ್ರಾಮಸ್ಥರಾದ ಬಿ ಎಂ ಪ್ರಕಾಶ್, ಎನ್ ಬಿ ಓಬಯ್ಯ, ಶಿಕ್ಷಕ ಎನ್ ಬಿ ಬೋರಯ್ಯ, ಎನ್ ಬಿ.ತಿಪ್ಪೇಸ್ವಾಮಿ, ನಿವೃತ್ತ ಸೈನಿಕ ಬೋಸೆರಂಗಪ್ಪ, ಮಂಜುನಾಥ್, ಬಸವರಾಜ್, ಸೇರಿದಂತೆ ಸಮಸ್ತ ಬೋಸೆದೇವರಹಟ್ಟಿ ಗ್ರಾಮಸ್ಥರು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading