March 17, 2026
1757219315293.jpg


ಹಿರಿಯೂರು:
ನಗರದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕಿನ 64 ಹಾಲು ಉತ್ಪಾದಕ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಭೆಯನ್ನು ಹಮ್ಮಿಕೊಳ್ಲಲಾಗಿತ್ತು
ಈ ಸಭೆಯಲ್ಲಿ ಸಹಕಾರಿ ಸಂಘಗಳಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಕೃಷಿ ಇಲಾಖೆ, ಪಶುಸಂಗೋಪನ ಇಲಾಖೆಯಿಂದ ದೊರೆಯುವ ಸರ್ಕಾರದ ಯೋಜನೆ ಮತ್ತು ಸೌಲಭ್ಯಗಳ ಬಗ್ಗೆ ಕ.ರಾ.ಪ.ಸ.ಸ.ನಿ.ಜಿಲ್ಲಾ ನಿರ್ದೇಶಕರಾದ ಕಂದಿಕೆರೆ ಕೆ.ಜಗದೀಶ್ ಅವರು ಮಾತನಾಡಿದರು.
ಎನ್. ಚೆಲುವರಾಯಸ್ವಾಮಿರವರು ಕೃಷಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ರಾಷ್ಟ್ರೀಯ ಸುಸ್ಥಿರ ಅಭಿಯಾನ ಯೋಜನೆಯಲ್ಲಿ ಹಿರಿಯೂರು ತಾಲ್ಲೂಕಿನ 1000 ರೈತರಿಗೆ 2.50 ಕೋಟಿ ಸಹಾಯಧನವನ್ನು ಮಂಜೂರು ಮಾಡಲಾಗಿದೆ. ಇದರ ಸದುಪಯೋಗ ಪಡಿಸಿಕೊಂಡು ಅರ್ಹ ಮತ್ತು ಆಸಕ್ತ ರೈತರಿಗೆ ನೈಜ ಫಲಾನುಭವಿಗಳಿಗೆ ತಲುಪಿಸಬೇಕು ಎಂಬುದಾಗಿ ಅವರು ಮನವಿ ಮಾಡಿದರು.
ಎಲ್ಲಾ ಸಹಕಾರಿ ಸಂಘಗಳ ಪದಾಧಿಕಾರಿಗಳು ಶ್ರಮಿಸಬೇಕು ಮತ್ತು ಆಸಕ್ತ ಸಹಕಾರಿಗಳು ಛಾಪಕಾಗದ ವಿತರಣೆ, ಆಹಾರ ಸಂಸ್ಕರಣಾ ಕೇಂದ್ರಗಳಿಗೆ ಗೊಬ್ಬರ ಬೀಜ ಕೇಂದ್ರಗಳನ್ನು ತೆರೆಯಲು ಅನುಮತಿ ಪಡೆದು ಸಹಾಯಧನ ಪಡೆಯಲು ಮತ್ತು ಸಹಕಾರಿ ರೈತರಿಗೆ ಹಾವು ಕಡಿತ ಆತ್ಮಹತ್ಯೆ, ಆಕಸ್ಮಿಕ ಮರಣಗಳಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ತಿಳಿಸಲಾಯಿತು.
ತಾಲ್ಲೂಕಿನ ಸಹಕಾರಿಗಳ ಒಕ್ಕೂಟ ರಚನೆ ಬಗ್ಗೆ ಹಾಗೂ ಸೌಲಭ್ಯವನ್ನು ಪಡೆದುಕೊಳ್ಳಲು ಮತ್ತು ವ್ಯಾಪ್ತಿಯ ಎಲ್ಲಾ ರೈತರಿಗೆ ತಿಳಿಸಲಾಯಿತು.ಈ ಸಭೆಯಲ್ಲಿ ಉಪನಿರ್ದೇಶಕರುಗಳಾದ ಕುಮಾರ್, ತಿಪ್ಪೇಸ್ವಾಮಿ, ಪಶುಸಂಗೋಪನಾ ಇಲಾಖೆ ವೈದ್ಯಾಧಿಕಾರಿಗಳಾದ ನಾಗರಾಜ, ಕೃಷಿ ಅಧಿಕಾರಿ ಕಿರಣ್, ಕೃಷ್ಣಕುಮಾರ್ ವಿಸ್ತರಣಾಧಿಕಾರಿ ಶಿಮುಲ್ ಒಕ್ಕೂಟ ಸಭೆಯಲ್ಲಿ ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading