August 9, 2025
IMG-20250807-WA0230.jpg

ನಾಯಕನಹಟ್ಟಿ : ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಿಂದ ಪರಿಶಿಷ್ಟ ಪಂಗಡದ ಮ್ಯಾಸನಾಯಕ ಸಮಾಜದ ಹೆಣ್ಣು ಮಗಳ ತೇಜವುದೇ ಖಂಡನೀಯ ಎಂದು ಬಿಜೆಪಿ ಮುಖಂಡ ಓಬಯ್ಯ ಬಿ ಆಕ್ರೋಶ ವ್ಯಕ್ತಪಡಿಸಿದರು.

ಮುಂದುವರೆದು ಮಾತನಾಡಿದ ಅವರು ಮೊಳಕಾಲ್ಮೂರು ತಾಲ್ಲೂಕಿನ ಆಸ್ಪತ್ರೆಗೆ ಸಂಬಂಧಿಸಿದ ವಿಚಾರವಾಗಿ ಬುಡಕಟ್ಟು ಸಮಾಜದ ಹೆಮ್ಮೆಯ ಮಹಿಳೆ ಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ತಮ್ಮ ಅಭಿವ್ಯಕ್ತಿತ್ವ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಒಬ್ಬ ನಿಷ್ಠಾವಂತ ಪರಿಶಿಷ್ಟ ಪಂಗಡದ ಕಾಂಗ್ರೆಸ್ ಕಾರ್ಯಕರ್ತೆಗೆ ಕಾಂಗ್ರೆಸ್ ಪಕ್ಷದಲ್ಲಿ ಇಷ್ಟು ಕೇವಲವಾಗಿ ಮಾತನಾಡುತ್ತಾರೆ ಎಂದರೆ ಹೆಣ್ಣು ಮಕ್ಕಳಿಗೆ ಕಾಂಗ್ರೆಸ್ ಪಕ್ಷ ಯಾವ ಮಟ್ಟದಲ್ಲಿ ನಡೆಸಿಕೊಳ್ಳುತ್ತಿದೆ. ಮಹಿಳಾ ಸಮಾಜದ ಮಹಿಳೆಯರಿಗೆ ಗೌರವ ಕೊಡದಿರುವ ಪಕ್ಷ ಅನ್ನೋದು ಯಾವುದಾದರೂ ಇದ್ದರೆ ಅದು ಕಾಂಗ್ರೆಸ್. ಪರಿಶಿಷ್ಟ ಪಂಗಡದ ಮಹಿಳಾ ನಾಯಕಿಯ ಧ್ವನಿಯನ್ನು ಕುಂದಿಸುವಂತಹ ಕೆಲಸ ಅವರದೇ ಪಕ್ಷದ ಮುಖಂಡರುಗಳು ಮಾಡುತ್ತಿರುವುದು ತೀರ ನೋವಿನ ಸಂಗತಿ. ಪರಿಶಿಷ್ಟ ಪಂಗಡದ ಮಹಿಳೆಯನ್ನು ಕಾಂಗ್ರೆಸ್ ಮುಖಂಡರು ಟಾರ್ಗೆಟ್ ಮಾಡುತ್ತಾರೆ ಎಂದರೆ ಧ್ವನಿ ಇರುವಂತಹವರನ್ನು, ಧ್ವನಿ ಸದ್ಡಡಗಿಸುವಂತಹ ಕೆಲಸ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿದೆ. ಕಾಂಗ್ರೆಸ್ ನಲ್ಲಿ ಸಮಾನತೆ ಇಲ್ಲ ಎಂದು ನಾಯಕಿಟ್ಟಿ ಹೋಬಳಿಯ ಬಿಜೆಪಿ ಮುಖಂಡ ಓಬಯ್ಯ ಬಿ ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಕಿಡಿಕಾರಿದರು.

ಮೊಳಕಾಲ್ಮೂರು ತಾಲ್ಲೂಕು ಆಸ್ಪತ್ರೆಗೆ ಸಮರ್ಪಕ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸದೇ ನಿರ್ಲಕ್ಷ ಕೋರಿರುವ ಶಾಸಕರ ಕಾರ್ಯವೈಖರಿ ನಿಮಗೆ ತೃಪ್ತಿ ತಂದಿದೆಯೇ? ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಯರಿಗೆ ದೂರದ ಚಿತ್ರದುರ್ಗ, ಬಳ್ಳಾರಿಗೆ ತೆರಳುವ ಪರಿಸ್ಥಿತಿ ಮಾಡಿರುವುದು ನಿಮ್ಮ ಶಾಸಕರಿಗೆ ಎಮ್ಮೆ ತರುವ ವಿಚಾರವೇ? ನಿಮ್ಮ ಶಾಸಕರ ಆತ್ಮ ಕಾರ್ಯವೈಖರಿ ನಿಮಗೆ ತೃಪ್ತಿ ನೀಡಿದೆಯೇ ? ನಿಮ್ಮ ಆತ್ಮಸಾಕ್ಷಿಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ ಎಂದು ಪ್ರಶ್ನೆ ಮಾಡಿದರು.

ಬುಡಕಟ್ಟು ಸಮಾಜದ ಮಹಿಳೆಯನ್ನು ಈ ರಾಷ್ಟ್ರದ ರಾಷ್ಟ್ರಪತಿ ಮಾಡಿದ ಹೆಗ್ಗಳಿಕೆ ಬಿಜೆಪಿ ಪಕ್ಷಕ್ಕೆ ಸಲ್ಲುತ್ತದೆ. ಬುಡಕಟ್ಟು ಸಮಾಜದ ಮಹಿಳೆ ಜಯಲಕ್ಷ್ಮಿ ಅವರ ಹೇಳಿಕೆಯನ್ನು ಸಹಿಸದ ವಲಸಿಗ ಕಾಂಗ್ರೆಸಿಗರು ಈ ಹೆಣ್ಣು ಮಗಳ ತೇಜವುದೇ ಮಾಡುತ್ತಿರುವುದು ಖಂಡನಾರ್ಹ, ಬುಡಕಟ್ಟು ಮಹಿಳೆಯ ಹೇಳಿಕೆಯನ್ನು ಸಹಿಸದ ಕಾಂಗ್ರೆಸ್ ಪಕ್ಷಕ್ಕೆ ದಿಕ್ಕಾರ. ಮೊದಲಿನಿಂದಲೂ ಕೂಡ ಮಹಿಳೆಯರಿಗೆ ಗೌರವ, ಸಮಾನತೆ ಅನ್ನುವ ಭಾವನೆ ಕಾಂಗ್ರೆಸ್ ನವರಿಗೆ ಇಲ್ಲ. ನೆಪ ಮಾತ್ರಕ್ಕೆ ನಾವು ಮಹಿಳೆಯರ ಪರ ಮಹಿಳಾ ಸಮಾಜದ ಪರ ಎನ್ನುತ್ತಾರೆ. ಮಹಿಳೆಯರಿಗೆ ಪ್ರಾತಿನಿಧ್ಯ ಎನ್ನುವುದೇ ಪಕ್ಷದಲ್ಲಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading