
ಚಿತ್ರದುರ್ಗ: ಮಹಾರಾಷ್ಟ್ರ ರಾಜ್ಯದ ಶಿರಡಿಯಲ್ಲಿ ನಡೆದ ಸಿಬಿಎಸ್ ಸಿ ಶಾಲೆಗಳ ಸೌತ್ ಜೋನ್ ಜೂಡೊ ಚಾಂಪಿಯನ್ ಶಿಪ್ ನಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿ ಗ್ರಾಮದ ಸಂಧ್ಯಾಸಿದ್ದೇಶ್ ಕುಮಾರ್ ದಂಪತಿಗಳ ಸುಪುತ್ರ
ಎಂ.ಎಸ್.ಕಿಶನ್ ಮಾದಲ್ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕವನ್ನು ತಮ್ಮ ಮುಡಿಗೇರಿಸಿಕೊಳ್ಳುವ ಮೂಲಕ ರಾಷ್ಟ್ರೀಯ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾರೆ.



ದಾವಣಗೆರೆಯ ತೋಳುಹುಣುಸೆಯಲ್ಲಿರುವ PSSEMR ವಸತಿ ಶಾಲೆಯಲ್ಲಿ ಓದುತ್ತಿರುವ ಕಿಶನ್ ಮಾದಲ್ ಅವರು,19 ವರ್ಷದ ವಯೊಮಾನದ ವಿಭಾಗದಲ್ಲಿ ಸಿಬಿಎಸ್ ಸಿ ಶಾಲೆಗಳ ಸೌತ್ ಜೋನ್ ಜೂಡೊ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ರಾಜ್ಯತಂಡದಿಂದ ಪ್ರತಿನಿಧಿಸಿದ್ದರು.ಸತತ ಮೂರು ದಿನಗಳ ಕಾಲ ಶಿರಡಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಕೇರಳ ಸೇರಿದಂತೆ ಇತರೆ ರಾಜ್ಯದ ಸ್ಪರ್ಧಿಗಳೊಂದಿಗೆ ಸೆಣಸಾಡಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಕಿಶನ್ ಅವರು ಮುಂಬರುವ ಸೆಪ್ಟೆಂಬರ್ ಗೆ ರಾಜಸ್ಥಾನದಲ್ಲಿನಡೆಯುವ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವ
ಅವಕಾಶ ಪಡೆದಿದ್ದು,ಇವರಿಗೆ, ತರಬೇತುದಾರರಾದ ಕೆಪಿ ಜೋಸ್ ಅವರ ತರಭೇತಿ, ಕುಟುಂಬಸ್ಥರ ಪ್ರೋತ್ಸಾಹ ಮತ್ತು ಪಿಎಸ್ ಎಸ್ ಇಎಂ ಆರ್ ಶಾಲೆಯ ಡೀನ್ ಮಂಜುನಾಥ್ ಆರ್ ಅವರ ಪ್ರೇರಣೆಯೊಂದಿಗೆ ಆಡಳಿತ ಮಂಡಳಿಯ ಸಹಕಾರದಿಂದ ಈ ಸಾಧನೆಗೈಯ್ಯಲು ಸಾಧ್ಯವಾಯಿತೆಂದು ತಿಳಿಸಿರುವ ಕ್ರೀಡಾಪಟು ಕಿಶನ್ ಅವರ ಸಾಧನೆಗೆ ಪ್ರೋತ್ಸಾಹಿಸಿದ ಸರ್ವರಿಗೂ ದನ್ಯವಾದ ಸಲ್ಲಿಸಿದ್ದಾರೆ.
ಹಾಗೆಯೇ ಬೆಳೆಯುವ ಸಿರಿ ಮೊಳಕೆಯಲ್ಲಿಎಂಬಂತೆ ಛಲದಿಂದ ಜೂಡೊ ಅಭ್ಯಾಸ ಮಾಡಿರುವ ಕಿಶನ್ ಮಾದಲ್ ಅವರು ದಾವಣಗೆರೆಯ ಜೂಡೊ ತರಭೇತುದಾರರಾದ ಕೆಪಿ ಜೋಸ್ ಅವರ ಗರಡಿಯಲ್ಲಿ ಪಳಗಿದ್ದಾರೆ.ಅವರ ಸಾಧನೆಗೆ ಚಿತ್ರದುರ್ಗ ಮತ್ತು ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಸಿಬಿಎಸ್ ಸಿ ಶಾಲೆಗಳ ವಿದ್ಯಾರ್ಥಿಗಳು ಹಾಗುಅವರ ಕುಟುಂಬವರ್ಗ,ಸ್ನೇಹಿತರು, ಮತ್ತು ಜೂಡೊ ಅಭಿಮಾನಿಗಳಿಂದ ಕಿಶನ್ ಮಾದಲ್ ಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ..
About The Author
Discover more from JANADHWANI NEWS
Subscribe to get the latest posts sent to your email.