
ವರದಿ : ಕೆ ಟಿ ಓಬಳೇಶ್ ನೆಲಗೇತನಹಟ್ಟಿ
ನಾಯಕನಹಟ್ಟಿ: ಪವಿತ್ರ ಬಕ್ರೀದ್ ಹಬ್ಬದ ಆಚರಣೆ ಹಿನ್ನಲೆಯಲ್ಲ ಪಟ್ಟಣದ ಮುಸ್ಲೀಂ ಭಾಂದವರು ತೊರೆಕೋಲಮನಹಳ್ಳಿ ರಸ್ತೆಯ ಈದ್ಗಾ ಮೈದಾನದಲ್ಲಿ ಶ್ರದ್ಧಾಭಕ್ತಿಯಿಂದ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಭಾಂದವರು ಶನಿವಾರ ಪ್ರಾರ್ಥನೆ ಸಲ್ಲಿಸುವ ಮೂಲಕ ಅದ್ಧೂರಿಯಾಗಿ ಆಚರಿಸಿದರು, ಬಳಿಕ ಒಬ್ಬರಿಗೂಬ್ಬರು ಅಪ್ಪಿಕೊಂಡು ಬಕ್ರೀದ್ ಶುಬಾಷಯ ವಿನಿಮಯ ಮಾಡಿಕೊಂಡರು.
ಇದೇ ವೇಳೆ ಪಟ್ಟಣ ಪಂಚಾಯತಿ ಸದಸ್ಯ ಹಾಗೂ ಜಾಮೀಯಾ ಮಸೀದಿ ಅಧ್ಯಕ್ಷ ಸೈಯದ್ ಅನ್ವರ್ ಭಾಗಿಯಾಗಿ ಪ್ರಾರ್ಥನೆ ಸಲ್ಲಿಸಿ ಮುಖಂಡರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡು ಮಾತನಾಡಿದ ಅವರು ಪ್ರವಾಧಿ ಹಜಾರತ್ ಇಬ್ರಾಹಿಂ ಅವರ ತ್ಯಾಗ ಬಲಿದಾನ ಅಚಲ ದೈವ ಭಕ್ತಿ ಹಾಗೂ ಅವರ ಪುತ್ರ ಹಜಾರತ್ ಇಸ್ಮಾಯಿಲ್ ದೈವ ಭಕ್ತಿಯ ಸಂಕೇತವೇ ಬಕ್ರೀದ್ ಹಬ್ಬ ಆವರಣೆಯಾಗಿದೆ ನಾಯಕನಹಟ್ಟಿ ಹೋಬಳಿಯಲ್ಲಿ ಉತ್ತಮ ಮಳೆ ಬೆಳೆಯಾಗಲೆಂದು ಭಗವಂತನಲ್ಲಿ ಪಾರ್ಥಿಸೋಣ ಎಂದರು.
ಇದೇ ಸಂಧರ್ಭದಲ್ಲಿ ಜಾಮೀಯಾ ಮಸೀದಿ ಗುರುಗಳಾದ ಮೌಲಾನ ಮಹಮ್ಮದ್ ಮುಸೇಬ್, ಮುಪ್ತಿ ಮೊಹಮ್ಮದ್ ಸಾಹೇಬ್, ಕಾರ್ಯದರ್ಶಿ ಅಬೂಬಕರ್ ಸಿದ್ದಿಕ್, ಉಪಾಧ್ಯಕ್ಷ ಮಹಮ್ಮದ್ ರಫೀಕ್ ಸಾಬ್ ,ಹಾಗೂ ಸಮಸ್ತ ಮುಸ್ಲೀಂ ಭಾಂದವರು ಇದ್ದರು,





About The Author
Discover more from JANADHWANI NEWS
Subscribe to get the latest posts sent to your email.