September 15, 2025
1746627181044.jpg


ಹಿರಿಯೂರು:
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಿಕ್ಷಣ ಸಂಯೋಜಕರಾಗಿ ಕೆಲಸ ನಿರ್ವಹಿಸುತ್ತಿರುವ ಶ್ರೀಯುತ ಸೈಯದ್ ಜಾಫರ್ ರವರು ಖಾಸಗಿ ಶಾಲೆಗಳಿಗೆ ಹಾಗೂ ಸರ್ಕಾರಿ ಶಾಲೆಗಳಿಗೆ ಪರಿಶೀಲನೆ ನೆಪದಲ್ಲಿ ಪದೇ ಪದೇ ಭೇಟಿ ನೀಡುವ ಮೂಲಕ ಶಿಕ್ಷಕರಿಂದ ಹಾಗೂ ಶಿಕ್ಷಣ ಸಂಸ್ಥೆಗಳಿಂದ ಹಣ ಕೀಳುವ ದಂಧೆಗೆ ಇಳಿದಿದ್ದಾರೆ ಎಂಬುದಾಗಿ ಅನೇಕ ಶಿಕ್ಷಕರುಗಳು ನಮ್ಮ “ಹಿರಿಯೂರು ನ್ಯೂಸ್ “ ತಂಡದೊಂದಿಗೆ ತಮ್ಮ ನೋವು ತೋಡಿಕೊಂಡಿದ್ದಾರೆ.
ಶಿಕ್ಷಣ ಇಲಾಖೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಬಿಟ್ಟರೆ ನಾನೇ ನೆಕ್ಸ್ಟ್ ಅಧಿಕಾರಿ. ಶಿಕ್ಷಣ ಇಲಾಖೆ ಕಚೇರಿಯಲ್ಲಿ ಏನೇ ಕೆಲಸವಿದ್ದರೂ ಶಿಕ್ಷಕರುಗಳು ನನ್ನನ್ನೇ ಭೇಟಿ ಮಾಡಿ ತಮ್ಮ ಕೆಲಸ ಮಾಡಿಕೊಳ್ಳಬೇಕು ಎಂಬುದಾಗಿ ತಾಲ್ಲೂಕಿನ ಶಿಕ್ಷಕ- ಶಿಕ್ಷಕಿಯರಿಗೆ ಖಡಕ್ಕಾಗಿ ತಾಕೀತು ಮಾಡುತ್ತಾರೆ ಎನ್ನಲಾಗಿದೆ.
ಅಲ್ಲದೆ, ಸರ್ಕಾರಿ ಶಿಕ್ಷಕರುಗಳ ಕಾಲಮಿತಿ ಹಾಗೂ ವಿಶೇಷ ವೇತನಗಳಿಗೆ, ಬಡ್ತಿ ಕಡತಗಳಿಗೆ ಹಣ ನೀಡಿದರೆ ಮಾತ್ರ ಸಹಿ ಮಾಡುತ್ತಾರೆ ಎಂಬುದಾಗಿ ಶಿಕ್ಷಕರುಗಳು ಆಪಾದಿಸಿದ್ದಾರಲ್ಲದೆ, ಹೆಸರು ಹೇಳಲು ಇಚ್ಚಿಸದ ಶಿಕ್ಷಕರೊಬ್ಬರು ತಮ್ಮ ಅಳಲನ್ನು “ಹಿರಿಯೂರು ನ್ಯೂಸ್” ತಂಡದ ಮುಂದೆ ತೋಡಿಕೊಂಡಿದ್ದಾರೆ.
ಈಗಾಗಲೇ ಇವರ ವಿರುದ್ಧ ಅನೇಕ ಶಿಕ್ಷಕರುಗಳು ಹಾಗೂ ಶಿಕ್ಷಣ ಇಲಾಖೆಯ ಸಿ.ಆರ್ .ಪಿ. ಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು ಇವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳದ ಸ್ಥಿತಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದ್ದಾರೆ ಎಂಬುದಾಗಿ ಶಿಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನೇ ಕಮಿಟ್ ಮೆಂಟ್ ಮೂಲಕ ತನ್ನ ಕೈವಶ ಮಾಡಿಟ್ಟುಕೊಂಡಿರುವ ಸೈಯದ್ ಜಾಫರ್ ರವರು ಶಿಕ್ಷಣ ಇಲಾಖೆ ಹಾಗೂ ಶಿಕ್ಷಣಾಧಿಕಾರಿಗಳಿಗೆ ಅಷ್ಟೇ ಅಲ್ಲ, ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೆಟ್ಟ ಹೆಸರು ತರುವ ಸಂಭವವಿದೆ.
ಈ ಕೂಡಲೇ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿ.ಸುಧಾಕರ್ ರವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಈ ಶಿಕ್ಷಣ ಸಂಯೋಜಕರಾದ ಶ್ರೀಯುತ ಜಾಫರ್ ರವರ ಆಟಗಳಿಗೆ ಕಡಿವಾಣ ಹಾಕಬೇಕು ಎಂಬುದಾಗಿ ತಾಲ್ಲೂಕಿನ ಶಿಕ್ಷಕರುಗಳ ಪರವಾಗಿ “ಹಿರಿಯೂರುನ್ಯೂಸ್” ತಂಡ ಒತ್ತಾಯಿಸುತ್ತದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading