ಹಿರಿಯೂರು:
ನಗರದ ವೇದಾವತಿ ಬಡಾವಣೆಯ ಉಪ್ಪಾರ ಸಮುದಾಯ ಭವನದಲ್ಲಿ ತಾಲೂಕು ಉಪ್ಪಾರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾಲೂಕು ಉಪ್ಪಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಪದ್ಮನಾಭ, ಉಪಾಧ್ಯಕ್ಷರಾಗಿ ಪರಮೇನಹಳ್ಳಿ ಎಂ.ಮಹಾಲಿಂಗಪ್ಪ, ಮಸ್ಕಲ್ ಎಂ.ಪಿ.ತಿಪ್ಪೇಸ್ವಾಮಿರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲೂಕು ಉಪ್ಪಾರ ಸಂಘದ ನೂತನ ಕಾರ್ಯದರ್ಶಿಯಾಗಿ ಖಂಡೇನಹಳ್ಳಿ ಪಾಳ್ಯದ ಕೆ.ಆರ್.ತಿಪ್ಪೇಸ್ವಾಮಿ, ಸಹಕಾರ್ಯದರ್ಶಿಯಾಗಿ ಶಿವಪ್ರಸಾದ್, ಸಂಘಟನಾ ಕಾರ್ಯದರ್ಶಿಯಾಗಿ ಬಬ್ಬೂರು ಏಕಾಂತಪ್ಪ, ಖಜಾಂಚಿಯಾಗಿ ಸಿ.ಪರಮೇಶ್ವರ್, ಕಾರ್ಯಾಧ್ಯಕ್ಷರಾಗಿ ನಾಗೇಂದ್ರಪ್ಪ ಆಯ್ಕೆಯಾದರು. ನಿರ್ದೇಶಕರುಗಳಾಗಿ ಮಲ್ಲೇಣು ವೈ.ನಾಗರಾಜ್, ಆಲೂರು ಕನಕದಾಸ, ಕೆ.ಮಸ್ಕಲ್ ಮಧು, ಬೇತೂರುಗುರುಲಿಂಗಪ್ಪ, ಶಿವಗಂಗಾ ಜಯಲಿಂಗಪ್ಪ, ಕಲ್ಲಟ್ಟಿ ನಾಗರಾಜ್, ರಂಗಾಪುರ ಶೇಜಪ್ಪ ಇವರುಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಶೇಖರಪ್ಪ, ಬಸವರಾಜಪ್ಪ, ವಿ.ಎಲ್ ಗೌಡ. ಕರಿಯಪ್ಪ, ಭೀಮಣ್ಣ, ಗುರುರಾಜ್, ಪ್ರಕಾಶ್, ಶಿವಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.