September 16, 2025
d7-tm2A.jpg


ಹೊಸದುರ್ಗ: ನಗರದ ಗ್ರಾಮ ದೇವತೆ ಮತ್ತು ಶಕ್ತಿ ದೇವತೆಯಾದ ಶ್ರೀ ದುರ್ಗಾಂಬಿಕಾ ದೇವಿಯವರ ರಥೋತ್ಸವವು ಎಪ್ರಿಲ್ 22 ರಂದು ಮಂಗಳವಾರ ಬೆಳಿಗ್ಗೆ 8.30 ಕ್ಕೆ ಜರುಗಲಿದ್ದು ಮರು ದಿನ ಎಪ್ರಿಲ್ 23 ರಂದು ಬುಧವಾರ ಮದ್ಯಾಹ್ನ ೪ ಗಂಟೆಯಿಂದ ಸಿಡಿ ಉತ್ಸವ ಜರುಗಲಿದೆ ಎಂದು ಶ್ರೀ ದುರ್ಗಾಂಬಿಕಾ ದೇವಸ್ಧಾನ ಸಮಿತಿಯ ಅಧ್ಯಕ್ಷ ಅಗ್ರೋ ಹೆಚ್.ಶಿವಣ್ಣ ತಿಳಿಸಿದರು.
ಪಟ್ಟಣದ ಶ್ರೀ ದುರ್ಗಾಂಬಿಕಾ ದೇವಾಲಯದಲ್ಲಿ ಅಧ್ಯಕ್ಷರ ಮತ್ತು ಧರ್ಮದರ್ಶಿಗಳ ಸಮ್ಮುಖದಲ್ಲಿ ನಡೆದ ರಥೋತ್ಸವದ ಪೂರ್ವ ಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ ವರ್ಷದಂತೆ ಸಾಂಪ್ರದಾಯಕ ವಿಧಿ ವಿಧಾನಗಳ ಪ್ರಕಾರ ಈ ವರ್ಷವೂ ಕೂಡ ದೇವಿಯ ರಥೋತ್ಸವ ಮತ್ತು ಸಿಡಿ ಉತ್ಸವ ಜರುಗಲಿದ್ದು ಈ ಹಿನ್ನೆಲೆಯಲ್ಲಿ 2025 ನೇ ಸಾಲಿನ ರಥೋತ್ಸವದ ಪೂರ್ವ ಬಾವಿಯಾಗಿ ವಿದ್ಯುಕ್ತವಾಗಿ ಕಾರ್ಯಕ್ರಮದ ರೂಪ ರೇಷಗಳಿಗೆ ಚಾಲನೆ ಕೊಡಲಾಗಿದ್ದು ಎಪ್ರಿಲ್ 8 ರಂದು ಮಂಗಳವಾರ ಮಧುವಣಗಿತ್ತಿ ಶಾಸ್ತç ನಡೆಯುವುದರ ಮೂಲಕ ದೇವಿಯ ಜಾತ್ರೆಗೆ ಚಾಲನೆ ದೋರಕಲಿದ್ದು ಎಪ್ರಿಲ್ 22 ರಂದು ನಡೆಯಲಿರುವ ರಥೋತ್ಸವವನ್ನ ನೋಡಿ ದೇವಿಯ ದರ್ಶನ ಮಾಡಲು ರಾಜ್ಯದ ವಿವಿಧ ಮೂಲೆಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಲಿದ್ದು ರಥೋತ್ಸವದ ದಿನ ಅನ್ನಸಂತರ್ಪಣೆ ಆಯೋಜಿಸಲಾಗಿದೆ, ಬಸ್ ಮಾಲಿಕರ ಸಂಘದಿಂದ ಉಚಿತ ಮಜ್ಜಿಗೆ ವಿತರಣೆ ಕಾರ್ಯಕ್ರಮ ಇದ್ದು ರಥೋತ್ಸವ ಮತ್ತು ಸಿಡಿ ಉತ್ಸವದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಲಿದ್ದು ಈ ಹಿನ್ನೆಲೆಯಲ್ಲಿ ದೇವಸ್ಧಾನ ಕಮಿಟಿಯಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ವಹಿಸಲಾಗುತ್ತಿದ್ದು ಪೋಲಿಸ್ ಬಂದೂಬಸ್ತ್ ವ್ಯವಸ್ಧೆ ಮಾಡುವಂತೆ ಪೋಲಿಸ್ ಇಲಾಖೆಗೆ ಮನವಿ ಮಾಡಲಾಗುವುದು ಎಂದರು.
ಈ ಸಂಧರ್ಬದಲ್ಲಿ ಮಲ್ಲಿಖಾರ್ಜುನ್, ಹೊಸಹಳ್ಳಿಕೃಷ್ಣಪ್ಪ, ಸತೀಶ್, ಮಂಜುನಾಥ್. ರಮೇಶ್, ಬ್ರಹ್ಮಪಾಲ್,ದೀಪಿಕಾಸತೀಶ್,ಸೇರಿದಂತೆ ಸಮಿತಿಯವರು ಗುಡಿಗೌಡರುಗಳು, ಧರ್ಮದರ್ಶಿಗಳು ಉಪಸ್ಧಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading