ಚಿತ್ರದುರ್ಗ ಏಪ್ರಿಲ್.07:
ಹೊಳಲ್ಕೆರೆ ತಾಲೂಕಿನ ಗಣಿಭಾದಿತ ಪ್ರದೇಶದ ಹಳ್ಳಿಗಳ 5 ಕಿ.ಮೀ. ವ್ಯಾಪ್ತಿಗೆ ಸೇರುವ ಅರ್ಹ ವಸತಿ ಹಾಗೂ ನಿವೇಶನ ರಹಿತರನ್ನು ಆಯ್ಕೆ ಮಾಡಿ, ಪಟ್ಟಿ ಸಲ್ಲಿಸಲು ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ತಾಲ್ಲೂಕಿನ ಆಡನೂರು, ಬಿ.ದುರ್ಗ, ಚಿಕ್ಕಜಾಜೂರು, ಚಿತ್ರಹಳ್ಳಿ, ಗುಂಜಿಗನೂರು, ಹೆಚ್.ಡಿ.ಪುರ, ಮುತ್ತಿಗದೂರು, ಶಿವಗಂಗಾ, ಟಿ.ನುಲೇನೂರು, ತಾಳ್ಯ, ಟೇಕಲವಟ್ಟಿ, ಉಪ್ಪರಿಗೆನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಏಪ್ರಿಲ್ 11 ರಿಂದ 29 ವರೆಗೆ ಗ್ರಾಮ ಸಭೆಗಳನ್ನು ಆಯೋಜಿಸಲಾಗಿದೆ. ಸದರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿನ ಅರ್ಹ ಫಲಾನುಭವಿಗಳು ಸಂಬಂಧ ಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ ವಿಚಾರಿಸಿ, ಗ್ರಾಮ ಸಭೆ ನಡೆಯುವ ದಿನಾಂಕದಂದು ಸಭೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳುವಂತೆ ಹೊಳಲ್ಕೆರೆ ತಾ.ಪಂ.ಇಓ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.