
ಚಿತ್ರದುರ್ಗ ಏಪ್ರಿಲ್.07:
ಕೇಂದ್ರ ಪುರಸ್ಕøತ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ 1001 ಜಿ+2 ಗುಂಪು ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲು, 2019ರಲ್ಲಿ ನಿವೇಶನ ಹಾಗೂ ವಸತಿ ರಹಿತರಿಂದ ಅರ್ಜಿ ಆಹ್ವಾನಿಸಲಾಗಿತ್ತು. ನಗರಸಭೆಗೆ ಸ್ವೀಕೃತಗೊಂಡ ಅರ್ಜಿಗಳ ಪೈಕಿ 1,598 ನಿವೇಶನ ವಸತಿ ರಹಿತ ಅರ್ಹ ಫಲಾನುಭವಿಗಳನ್ನು ಗುರುತಿಸಿಗಿದ್ದು, ಮೊದಲನೆಯ ಹಂತದಲ್ಲಿ 718 ಫಲಾನುಭವಿಗಳು ಮನೆಯ ಘಟಕ ವೆಚ್ಚದ ಶೇ% 10 ರಷ್ಟು ಅಂದರೆ ರೂ.63,000 ಗಳನ್ನು ಜಿಲ್ಲಾಧಿಕಾರಿ ಹಾಗೂ ಪೌರಾಯುಕ್ತರ ಜಂಟಿ ಎಸ್ಕ್ರೂ ಖಾತೆಗೆ ಪಾವತಿ ಮಾಡಿದ್ದಾರೆ. ಮೊದಲು ಪಾವತಿಸಿದವರಿಗೆ ಮೊದಲ ಆದ್ಯತೆ ಮೇರೆಗೆ ಈ 718 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಇವರು ಚಿತ್ರದುರ್ಗ ನಗರ ಅಥವಾ ರಾಜ್ಯದ ಯಾವುದೇ ಭಾಗದಲ್ಲಿ ನಿವೇಶನ ಅಥವಾ ಮನೆ ಹೊಂದಿರುವುದು ಕಂಡು ಬಂದಲ್ಲಿ, ಸಾರ್ವಜನಿಕರು ಏ.25ರ ಒಳಗೆ, ನಗರ ಸಭೆಯ ಆಶ್ರಯ ಹಾಗೂ ವಸತಿ ಶಾಖೆಯ ವಿಷಯ ನಿರ್ವಾಹಕರುಗಳಾದ ಕೆಂಚಪ್ಪ.ಎನ್ ಮತ್ತು ಭೀಷ್ಮ ಇವರಿಗೆ ಖುದ್ದು ಹಾಜರಾಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದು ಪೌರಾಯುಕ್ತೆ ಎ.ರೇಣುಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.