
ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ತಾಲೂಕಿನ ಹೊನ್ನೆನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ಎಂದರೆ ಅದು ಪವಾಡದ ದೇವರು ಎಂದೇ ಹೆಸರುವಾಸಿ ಅಂತಹ ಶ್ರೀ ಆಂಜನೇಯ ಸ್ವಾಮಿಯವರ ರಥೋತ್ಸವಕ್ಕೆ ಈಗ ಬರೋಬ್ಬರಿ 100 ವರ್ಷ ತುಂಬಿರುವ ರಥೋತ್ವವವು ಶತಮಾನೋತ್ಸವದ ಸಂಬ್ರಮದಲ್ಲಿದೆ ಹೌದು ಇದೇ ಎಪ್ರಿಲ್ 8ರಂದು ಮಂಗಳವಾರ ಬೆಳಿಗ್ಗೆ 8.30 ಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ಜರುಗಲಿದೆ. ಶತಮಾನೋತ್ಸವದ ರಥೋತ್ಸವಕ್ಕೆ ನಾಡಿದ ಮೂಲೆ ಮೂಲಕೆಗಳಿಂದ ಆಗಮಿಸಲಿರುವ ಭಕ್ತರು ಸಾಕ್ಷಿಯಾಗಲಿದ್ದಾರೆ.
ಶ್ರೀ ಆಂಜನೇಯ ಸ್ವಾಮಿಯವರ ಶತಮಾನದ ರಥೋತ್ಸವದ ಅಂಗವಾಗಿ ಈಗಾಗಲೆ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರಕಿದ್ದು ಎಪ್ರಿಲ್ 7ರಂದು ಸೋಮವಾರ ಬೆಳಿಗ್ಗೆ 9 ಗಂಟೆಗೆ ಸೀತಾರಾಮ ಕಲ್ಯಾಣ,11 ಗಂಟೆಗೆ ಕಳಶ ಸ್ಧಾಪನೆ,ಸಂಜೆ 5 ಗಂಟೆಗೆ ಕಲ್ಯಾಣ ಮಂಟಪೋತ್ಸವ,7 ಗಂಟೆಗೆ ಧೂಳು ಉತ್ಸವ.
ಎಪ್ರಿಲ್ 8ರಂದು ಮಂಗಳವಾರ ಬೆಳಿಗ್ಗೆ 8.30ಕ್ಕೆ ಶ್ರೀ ಅಂಜನೇಯ ಸ್ವಮಿಯವರ ರಥೋತ್ಸವ,ನಂತರ 11.30 ಕ್ಕೆ 101 ಎಡೆ ಧೂಪದ ಸೇವೆ, ಎಪ್ರಿಲ್ 9 ರಂದು ಬುಧವಾರ ಬೆಳಿಗ್ಗೆ 6 ಗಂಟೆಗೆ ಪಾರ್ವಟಿ ಮಧ್ಯಹ್ನ 1 ಗಂಟೆಗೆ ಓಕಳಿ,ದೋಡ್ಡೆಡೆ ಸೇವೆ,101 ಎಡೆ ಸೇವೆ ಮತ್ತು ಪ್ರಸಾದ ವಿನಿಯೋಗ,ಸಂಜೆ ಶಯನೋತ್ಸವ,ಮಹಾಮಂಗಳಾರತಿ,ರಾತ್ರಿ ಅನ್ನಸಂರ್ತಣೆ ಕಾರ್ಯಕ್ರಮಗಳು ಜರುಗಲಿದ್ದು ವಿಶೇಷವಗಿ ಚಂದ್ರಮಂಡಲೋತ್ಸವ,ಅಶ್ವವಾಹನೋತ್ಸವ,ಗಜೋತ್ಸವ,ಕಾಳಿಂಗ ಮರ್ಥನೋತ್ಸವ,ಸರ್ಪ ಮಂಡಲೋತ್ಸವ,ಇಂದ್ರಜಿತೋತ್ಸವ,ಗರುಡೋತ್ಸವ, ಕಲ್ಯಾಣ ಮಂಟಪೋತ್ಸವ ಮತ್ತು ಧೂಳು ಉತ್ಸವ ಕಾರ್ಯಕ್ರಮಗಳು ಜರುಗಲಿವೆ.
ಭಕ್ತ ಸಂರಕ್ಷಕ, ಸಂಕಷ್ಟನಿವಾರಕ: ಯಾರು ಧರ್ಮವನ್ನು ಕಾಪಾಡುತ್ತಾರೋ ಅವರನ್ನು ಧರ್ಮಕಾಪಾಡುತ್ತದೆ ಎಂಬ ಜ್ಞಾನ ಸಂದೇಶದ ಸತ್ಯತೆಯನ್ನು ಅರಿಯಲು ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ಪ್ರಸಿದ್ದ ಶ್ರೀ ಆಂಜನೇಯ ಸ್ವಾಮಿಯವರ ಸನ್ನಿಧಿಯೇ ಸಾಕ್ಷಿಯಾಗಿದೆ, ಶ್ರೀ ಆಂಜನೇಯಸ್ವಾಮಿ ಭಕ್ತ ಸಂರಕ್ಷಕ, ಸಂಕಷ್ಟನಿವಾರಕ ಭಕ್ತ ಸಂಪ್ರದಾಯದ ಬೇಡಿದ ವರ ನೀಡುವ ಕೃಪಾಮೂರ್ತಿ ಎಂಬಂತಹ ಹಲವಾರು ರೀತಿಯಲ್ಲಿ ಭಕ್ತರ ಭಾವನೆಗಳಿಗೆ ಭಾಜನರಾಗಿದ್ದಾರೆ.
ವ್ಯಾಸರಾಯರ ಕಾಲದಲ್ಲಿ ಪ್ರತಿಷ್ಟಾಪನೆಯಾಗಿವೆ:ಹೊನ್ನೆನಹಳ್ಳಿ ಗ್ರಾಮಕ್ಕೆ ಒಂದು ಬಹು ಪುರಾತನ ಕಾಲದಿಂದಲೂ ನೆಲೆಸಿರುವ ಶ್ರೀ ಆಂಜನೇಯ ಸ್ವಾಮಿ ದೇವರು ತುಂಬಾ ಮಹಿಮಾನ್ವಿತ ಮೂರ್ತಿಯಾಗಿದೆ, ಹೊನ್ನೇನಹಳ್ಳಿ,ತಾಳ್ಯ,ಕೆಲ್ಲೋಡು, ಶ್ರೀ ಆಂಜನೇಯಸ್ವಾಮಿ ದೇವರ ಮೂರ್ತಿಗಳು ಏಕಕಾಲದಲ್ಲಿ ವ್ಯಾಸರಾಯರ ಕಾಲದಲ್ಲಿ ಪ್ರತಿಷ್ಟಾಪನೆಯಾಗಿವೆ ಎಂದು ಪ್ರತೀತಿ ಇದೆ. ಹೊನ್ನೇನಹಳ್ಳಿ ಸ್ವಾಮಿಯು ಬಹುದೊಡ್ಡ ಪವಾಡ ಪುರುಷ ಸಂಜೆಯಿAದ ರಾತ್ರಿವರೆಗೆ ಪೂಜಾಕಾರ್ಯಗಳು ಹರಕೆ ಭಕ್ತ ಸಮರ್ಪಣೆ ಯಥಾವತ್ತಾಗಿ ನಿರಂತರ ನಡೆಯುತ್ತಲೇ ಇರುತ್ತವೆ.

About The Author
Discover more from JANADHWANI NEWS
Subscribe to get the latest posts sent to your email.