September 16, 2025
IMG-20250407-WA0019.jpg

ಚಳ್ಳಕೆರೆ ಏ.7

ರೈತರಿಗೆ ಬೆಳೆ ಕಟಾವು ಹಾಗೂ ಸುಗ್ಗಿ ಕಾಲ ಬಂತೆಂದರೆ ಸಾಕು ಕಾಳು ಒಣಗಿಸಲು ಹಾಗೂ ಬೇರ್ಪಡಿಸಲು ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಹೌದು ಇದು ಚನ್ನಮ್ಮನಾಗತಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಮತ್ಸಮುದ್ರ ಗ್ರಾಮದ ಸುತ್ತ ಮುತ್ತ ರೈತರು ಸಾಕಷ್ಟು ಮೆಕ್ಕೆ ಜೋಳ.ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದು ತೆನೆಯಿಂದ ಕಾಳು ಬೇರ್ಪಡಿಸಲು ಹಾಗೂ ಒಣಗಿಸಲು ಒಕ್ಕಲು ಕಣವಿಲ್ಲದೆ ರಸ್ತೆ ಹಾಗೂ ಶಾಲಾ ಆವರಣದಲ್ಲಿ ಒಕ್ಕಲು ಕಣ ಮಾಡಿಕೊಂಡು ದವಸಧಾ‌ನ್ಯಗಳನ್ನು ಒಣಗಿಸಿಕೊಳ್ಳುವುದು ಅನಿವಾರ್ಯವಾಗಿದೆ.
ಗ್ರಾಮಪಂಚಾಯಿತಿ ವತಿಯಿಂದ ನರೇಗಾ ಯೋಜನೆಯಡಿ ರೈತರಿಗೆ ಸಾಮೂಹಿಕ ಒಕ್ಕಲು ಕಣ ನಿರ್ಮಿಸಲು ಅವಕಾಶ ವಿದ್ದರೂ ಮಾಡದೆ ಇರುವುದು ಮತ್ಸಮುದ್ರ ಗ್ರಾಮದ ರೈತರು ಬೆಳೆದ ದವಸ ಧಾನ್ಯಗಳನ್ನು ಒಣಗಿಸಲು ಮತ್ಸಮುದ್ರ ಗ್ರಾಮದಿಂದ ಮೂರು ಕಿ.ಮೀ ದೂರದ ಹಾಲಗೊಂಡನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣವನ್ನೇ ಒಕ್ಕಲು ಕಣ ಮಾಡಿಕೊಂಡಿದ್ದಾರೆ. ಮತ್ಸಮುದ್ರ ಗ್ರಾಮದಲ್ಲಿ ರೈತರಿಗೆ ಮೆಕ್ಕೆಜೋಳ ರಾಗಿ ಬತ್ತ ತೊಗರಿ ಉರುಳಿ ಇನ್ನು ಅನೇಕ ರೈತರ ಬೆಳೆದ ದವಸ ಧಾನ್ಯಗಳಿಗೆ ಒಕ್ಕಲು ಕರಣ ಇಲ್ಲದಿರುವುದರಿಂದ ರೈತರು ಬೆಳೆದ ಧಾನ್ಯಗಳಿಗೆ ಒಕ್ಕಲು ಕಣವಿಲ್ಲದಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿರುವುದು ನಿಜ ಸಂಗತಿ ಪಕ್ಕದ ಹಾಲಿಗೆ ಹೋಗಿ ದವಸ ಧಾನ್ಯಗಳು ಒಣಗಿಸಿಕೊಂಡು ಬರುವ ಸಂಗತಿ ಇಲ್ಲಿನ ಪರಿಸ್ಥಿತಿ ನಿರ್ಮಾಣವಾಗಿದೆ.
ಇದು ಕೇವಲ ಮತ್ಸಮುದ್ರ ಗ್ರಾಮದ ಕಥೆಯಲ್ಲಿ ಪ್ರತಿ ಹಳ್ಳಿಯ ಕಥೆಯಿದು ಒಕ್ಕಲು ಕಣವಿಲ್ಲದೆ ರಸ್ತೆ .ದೇವಸ್ಥಾನ ಶಾಲಾ ಆವರಗಳನ್ನು ಒಕ್ಕಲು ಕಣವನ್ನಾಗಿ ಮಾಡಿಕೊಳ್ಳುತ್ತಿರು ದೃಶ್ಯ ಕಂಡು ಬರುತ್ತಿದೆ ಕೂಡಲೆ ಸಂಬಂಧ ಪಟ್ಟ ಅಧಿಕಾರಿಗಳು ನರೇಗಾ ಯೋಜನೆಯಡಿಯಲ್ಲಿ ರೈತರಿಗೆ ಒಕ್ಕಲು ಕಣ ನಿರ್ಮಿಸಿಕೊಡುವರೇ ಕಾದು ನೋಡ ಬೇಕಿದೆ.

ಒಕ್ಕಲು ಕಣವಿಲ್ಲದೆ ಹಾಲಗೊಂಡನಹಳ್ಳಿ ಗ್ರಾಮದ ಸರಕಾರಿ ಶಾಲಾ ಅವಣದಲ್ಲಿ ದವಸ ಧಾನ್ಯಗಳನ್ನು ಒಣಗಿಸುತ್ತಿರುವ ರೈತರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading