ಚಳ್ಳಕೆರೆ ಏ.6
ಟ್ರ್ಯಾಕ್ಟರ್, ಎತ್ತಿನ ಗಾಡಿ.ಲಾರಿ ಸೇರಿ ವಿವಿಧ ವಾಹನಗಳಿಗೆ
ರೇಡಿಯಂ ಪ್ರತಿಫಲಕಗಳನ್ನು ಅಂಟಿಸುವುದು ಅಗತ್ಯ ಎಂದು ಪಿಎಸ್ ಐ ಧರೆಪ್ಪ ಸಲಹೆ ನೀಡಿದರು.
ಚಳ್ಳಕೆರೆ ನಗರದಲ್ಲಿ ಟ್ರಾಕ್ಟರ್ ಹಾಗೂ ಟ್ರಾಲಿಗಳಿಗೆ ಪೋಲಿಸ್ ಇಲಾಖೆಯಿಂದ ರೇಡಿಯಂ ಸ್ಟಿಕರ್ ಅಳವಡಿಸಲು ಚಾಲನೆ ನೀಡುವ ಮೂಲಕ
ವಾಹನ ಚಾಲಕರಿಗೆ ರಸ್ತೆ ಸುರಕ್ಷತಾ
ನಿಯಮಗಳ ಜಾಗೃತಿ ಮೂಡಿಸಿ ಮಾತನಾಡಿದರು.
ಪ್ರತಿಯೊಬ್ಬರ ಜೀವವೂ ಅತ್ಯಮೂಲ್ಯವಾದದ್ದು. ವಾಹನಗಳ
ವೇಗವು ಮಿತಿಯಲ್ಲಿರಬೇಕು. ರಾತ್ರಿ ವೇಳೆ ವಾಹನಗಳಿಗೆ ರೇಡಿಯಂ
ಪ್ರತಿಫಲಕ ಅಂಟಿಸುವುದರಿಂದ ಹಿಂಬಂದಿ, ಮುಂಬದಿಯ
ವಾಹನ ಸವಾರರಿಗೆ ನಿಮ್ಮ ವಾಹನದ ಗಾತ್ರ ಗುರುತಿಸಲು
ಸಾಧ್ಯವಾಗುತ್ತದೆ ಎಂದರು.
ಯಾರೂ ಕುಡಿದು ವಾಹನ ಚಲಾಯಿಸಬಾರದು ವೇಗನಿಯಂತ್ರಣ ವಿರಬೇಕು. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ
ದಂಡವಿಧಿಸಲಾಗುವುದು. ಅಲ್ಲದೇ ಕಡ್ಡಾಯವಾಗಿ ವಾಹನಗಳಿಗೆ ವಿಮೆ
ಮಾಡಿಸಬೇಕು.ಚಾಲಕರು ಚಾಲನೆ ಪರವಾನಿಗೆ ಕಡ್ಡಾಯ ಎಂದು ತಿಳಿಸಿದರು.












About The Author
Discover more from JANADHWANI NEWS
Subscribe to get the latest posts sent to your email.