ಚಳ್ಳಕೆರೆ: ‘ಸಾಕ್ಷರ ಭಾರತಕ್ಕೆ ಸಾವಿತ್ರಿಬಾಯಿ ಫುಲೆ ಅವರ ಕೊಡುಗೆ ಬಹಳ ದೊಡ್ಡದು’ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂಆರ್ ಮಂಜುನಾಥ್ ತಿಳಿಸಿದರು.


ತಾಲೂಕಿನ ತಳಕು ಹೋಬಳಿಯ ಕ್ಲಸ್ಟರ್ ಮಟ್ಟದ ತರಾಸು ಶಿಕ್ಷಕರ ವೇದಿಕೆ ವತಿಯಿಂದ ಶಾದಿ ಮಹಲ್ ನಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಪುಲೆ ಜಯಂತಿ ಹಾಗೂ ಶೈಕ್ಷಣಿಕ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾವಿತ್ರಿಬಾಯಿ ಫುಲೆ ಅವರು 150 ವರ್ಷಗಳ ಹಿಂದೆಯೇ ಶಿಕ್ಷಣದ ಮಹತ್ವ ಅರಿತು, ಅದನ್ನು ದಾಸೋಹದ ರೂಪದಲ್ಲಿ ಹಂಚಿದ್ದರಿಂದ ಇಂದು ದೊಡ್ಡ ಸಂಖ್ಯೆಯ ಸಾಕ್ಷರರು ನಮ್ಮ ನಡುವೆ ಇದ್ದಾರೆ. ಅದರಲ್ಲೂ ಮಹಿಳೆಯರು ಅನೇಕ ರಂಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾವಿತ್ರಿಬಾಯಿ ಅವರು ಆ ಕಾಲದಲ್ಲಿ ಶಿಕ್ಷಣ ಕೊಡಲು ಮುಂದಾದಾಗ ಜನ ಕಲ್ಲಿನಿಂದ ಅವರಿಗೆ ಹೊಡೆಯುತ್ತಿದ್ದರು.ಇಂದು ಜನ ಅವರ ತ್ಯಾಗ ನೆನೆದು ಅವರ ಭಾವಚಿತ್ರಕ್ಕೆ ಹೂಮಳೆಗರೆಯುತ್ತಿದ್ದಾರೆ.ಇದು ಶಿಕ್ಷಣಕ್ಕಿರುವ ದೊಡ್ಡ ಶಕ್ತಿ’ಸಾವಿತ್ರಿಬಾಯಿ ಅವರು 17ನೇ ವಯಸ್ಸಿನಲ್ಲಿ ಶಾಲೆ ಆರಂಭಿಸಿದ್ದರು. ಅದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆಗ ಅವರ ಪತಿ ಜ್ಯೋತಿಬಾ ಫುಲೆ ಅವರ ಬೆನ್ನಿಗೆ ನಿಂತು ಬೆಂಬಲಿಸಿದ್ದರು. ಆರಂಭದಲ್ಲಿ ಅವರ ಶಾಲೆಯಲ್ಲಿ ಎಂಟು ಮಕ್ಕಳಷ್ಟೇ ಇದ್ದರು. ನಂತರ ಆ ಸಂಖ್ಯೆ 500ರ ಗಡಿ ದಾಟಿತು. ದೇಶದ ಮೊದಲ ಅನಾಥಾಶ್ರಮ, ವಿಧವಾ ಆಶ್ರಮ, ಕೂಲಿ ಕಾರ್ಮಿಕರ ಮಕ್ಕಳಿಗೆ ರಾತ್ರಿ ಶಾಲೆ ತೆರೆದವರು ಸಾವಿತ್ರಿಬಾಯಿ. ಪ್ಲೇಗ್ ರೋಗ ಬಂದಾಗ ಗಂಜಿ ಕೇಂದ್ರ ತೆರೆದಿದ್ದರು’ ಎಂದು ಸ್ಮರಿಸಿದರು.
ಇಂದಿನ ಹೊಸ ಶಿಕ್ಷಣ ನೀತಿಯಲ್ಲಿರುವ ಅನೇಕ ವಿಚಾರಗಳನ್ನು ಸಾವಿತ್ರಿಬಾಯಿ ಆ ಕಾಲದಲ್ಲೇ ಹೇಳಿದ್ದರು. ಪ್ರಚಾರದ ಕೊರತೆಯಿಂದ ಅವರು ಬೆಳಕಿಗೆ ಬಂದಿಲ್ಲ. ಇತ್ತೀಚಿನ ವರ್ಷಗಳ ಸಂಶೋಧನೆ, ಪುಸ್ತಕದ ಮೂಲಕ ದಾಖಲಿಸುವ ಕೆಲಸ ನಡೆಯುತ್ತಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಟಿ ವೀರೇಶ್ ಅನುದಾನಿತ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ ಸುರೇಶ್ ಪಿ ರಾಜಣ್ಣ ತಿಪ್ಪೇಸ್ವಾಮಿ ಕೃಷ್ಣಮೂರ್ತಿ ಮಾರುತಿ ಭಂಡಾರಿ ಜಾಕೀರ್ ಹುಸೇನ್ ಅಶೋಕ್ ಪ್ರಹ್ಲಾದ್ ಪಿಡಿಒ ಓಬಣ್ಣ ಶಶಿ ರಾಜ್ ಮಾರಣ್ಣ ರಾಧಾಮಣಿ ಸುಜಾತ ಜೈ ಲಕ್ಷ್ಮಿ ಸೌಭಾಗ್ಯಮ್ಮ ತಿಪ್ಪಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.