January 30, 2026
1741355908776.jpg


ಚಿತ್ರದುರ್ಗಮಾ.07:
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು ಮತ್ತು ಇಲಾಖೆಯವರು ಒಟ್ಟಾಗಿ ಪಂಚಾಯಿತಿ ಮಟ್ಟದಲ್ಲಿ ಜಲ ಜೀವನ್ ಮಿಷನ್ ಅನುಷ್ಠಾನ ಮತ್ತು ಕಾರ್ಯಚರಣೆ, ನಿರ್ವಹಣೆ ಜವಾಬ್ದಾಯುತವಾಗಿ ಮಾಡಬೇಕು ಎಂದು ಗ್ರಾಮೀಣ ಕುಡಿಯುಬ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಬಸನಗೌಡ ಪಾಟೀಲ್ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಈಚೆಗೆ ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಜಲ ಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಗಳನ್ನು ಉತ್ತಮ ಅನುಷ್ಠಾನಕ್ಕಾಗಿ ವಾಶ್ ಕಾರ್ಯಕ್ರಮಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕುಗಳ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಗಳಿಗೆ ಸಾಮಥ್ರ್ಯ ಅಭಿವೃದ್ಧಿಗೊಳಿಸುವ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಮಾಡಿ ಅದರ ನಡಾವಳಿಯನ್ನು ಜಿಲ್ಲಾ ಪಂಚಾಯಿತಿ ಕಛೇರಿಗೆ ಸಲ್ಲಿಸಬೇಕು. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ 24*7 ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಜಿ.ಪಂ ಮುಖ್ಯ ಯೋಜನಾಧಿಕಾರಿ ಸಿ ಎನ್ ಗಾಯಿತ್ರಿ ಮಾತನಾಡಿ, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳ ಪುನರ್ ರಚನೆ ಮತ್ತು ಖಾತೆಗಳನ್ನು ತೆರೆಯುವುದು ಮತ್ತು ತಾಂತ್ರಿಕ ಕೌಶಲ್ಯಗಳನ್ನು ಉಪಯೋಗಿಸಿಕೊಂಡು ಐಇಸಿ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಗ್ರಾಮೀಣ ಸಮುದಾಯದಲ್ಲಿ ವ್ಯಾಪಕವಾದ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.
ಪ್ರತಿ ಮನೆ-ಮನೆಗೂ ನಳ ಸಂಪರ್ಕದ ಮೂಲಕ ಶುದ್ದ ಕುಡಿಯುವ ನೀರು ಪೂರೈಕೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಈ ನಿಟ್ಟಿನಲ್ಲಿ ಎಲ್ಲಾ ಕಡೆಯಲ್ಲೂ ಒವರ್ ಹೆಡ್ ಟ್ಯಾಂಕ್‍ಗಳ ಗಳ ನಿರ್ಮಾಣ ಸೇರಿದಂತೆ ಜಲ ಜೀವನ್ ಮಿಷನ್ ನಿಂದ ಅಗತ್ಯ ಸಿದ್ದತೆ ಕೈಗೊಳ್ಳಲಾಗಿದ್ದು, ಪೂರ್ಣಗೊಂಡ ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಬೇಕು ಬಳಿಕ ನಿರ್ವಹಣೆ ಮಾಡಲು ಅಗತ್ಯ ಕೈಗೊಳ್ಳಬೇಕೆಂದು ತಿಳಿಸಿದರು.
ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ಜೋಸೆಫ್ ಜಿ.ಎಂ ರೆಬೆಲ್ಲೋ ಅವರು ವಿಡಬ್ಲ್ಯೂಎಸ್‍ಸಿ ಸಮಿತಿ, ಜಲ ಮೂಲಗಳ ಸಂರಕ್ಷಣೆ, ಘನ ದ್ರವ ತ್ಯಾಜ್ಯಗಳ ನಿರ್ವಹಣೆ, ಕಾರ್ಯಚರಣೆ, ಶೌಚಾಲಯದ ಮಹತ್ವ, ನೀರಿನ ಮಹತ್ವ, ಶುಚಿತ್ವ ಬೂದು ನೀರು ನಿರ್ವಹಣೆ ಮಳೆ ನೀರು ಕೊಯ್ಲು ಜಲ ಸಂಪನ್ಮೂಲ ಮತ್ತು ಜಲ ಕ್ಷಾಮ ನೀರಿನ ಶುದ್ಧತೆ ಮತ್ತು ನೀರಿನ ಮಲಿನತೆ ನೀರಿನ ದುರ್ಬಳಕೆ ಮತ್ತು ಸದ್ಬಳಕೆ ಬಾವಿ ಕೆರೆ ನದಿ ಮತ್ತು ಕೊಳವೆ ಬಾವಿ ನೀರಿನ ವ್ಯತ್ಯಾಸ. ಜಲ ಸಂರಕ್ಷಣಾ ವಿಧಾನಗಳು ಮತ್ತು ಪ್ರಾಮುಖ್ಯತೆ. ಬೂದು ನೀರು ಮತ್ತು ಕಪ್ಪು ನೀರು ಸಮಸ್ಯೆ ಮತ್ತು ಪರಿಹಾರ ನೀರಿನ ಸುಸ್ಥಿರತೆ ಕಾಪಾಡುವಲ್ಲಿ ಸಮುದಾಯ ಸಹಬಾಗಿತ್ವ ಮಳೆ ನೀರು ಕೊಯ್ಲು ವೈಜ್ಞಾನಿಕ ರಚನೆ ಮತ್ತು ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ತರಬೇತಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕುಗಳ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ದಯಾನಂದಸ್ವಾಮಿ, ಲಿಂಗರಾಜು, ಕಿರಿಯ ಅಭಿಯಂತರರಾದ ಕಾರ್ತಿಕ್, ಭಾರತಿ, ತಿಪ್ಪೇಸ್ವಾಮಿ, ಎಎಒ ಜಿಲ್ಲಾ ವ್ಯವಸ್ಥಾಪಕರಾದ ಮುಂಜುನಾರ್ ನಾಡರ್, ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯ ಜಿಲ್ಲಾ ಸಮಾಲೋಚಕರಾದ ಬಿ.ಸಿ. ನಾಗರಾಜ್, ವಿನಯ್ ಕುಮಾರ್, ಶಶಿಧರ್ ಮತ್ತು ಪ್ರಮೀಳ, ಲೆಕ್ಕ ಸಹಾಯಕರಾದ ಶೃತಿ. ಬಿ.ಜೆ ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಸಮಾಲೋಚಕ, ಕಿರಣ್ ಪಾಟೇಲ್, ಚಂದ್ರಕಾಂತ್, ಯಲ್ಲಪ್ಪ, ಗೀತಾಲಕ್ಷೀ ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading