ಚಳ್ಳಕೆರೆ ಮಾ.7.
ಬ್ಯಾಂಕ್ ಗಳಲ್ಲಿ ಹಣ ಬಿಡಿಸಿಕೊಂಡವರು ಎಚ್ಚರಿಕೆಯಿಂದ ನೇರವಾಗಿ ಮನೆಗೆ ತಲುಪುವಂತೆ ಪಿಎಸ್ ಐ ಶಿವರಾಜ್ ಕಿವಿಮಾತು ಹೇಳಿದರು.
ನಗರದಲ್ಲಿ ಹೆಚ್ಚುತ್ತುರುವ ಮನೆ ಕಳ್ಳತನ ಹಾಗೂ ಬೈಕ್ ನಲ್ಲಿಟ್ಟ ಹಣ ಕಳವು ಪ್ರಕರಣಗಳು ನಡೆಯುತ್ತಿದ್ದು ಈ ಕುರಿತು ಪೊಲೀಸರು ನಗರದ ವಿವಿಧ ಬ್ಯಾಂಕ್ ಗಳಿಗೆ ಭೇಟಿ ನೀಡಿ ಗ್ರಾಹಕರಿಗೆ ಹಾಗೂ ಬ್ಯಾಂಕ್ ಅಧಿಕಾರಿಗಳಿಗೆ ಜಾಗೃತಿ ಮೂಡಿಸಿದರು.
ಬ್ಯಾಂಕ್ ಒಳಗೆ ಹಾಗೂ ಹೊರಗೆ ಅಪರಿಚಿತರ ಚಲನವಲನವನ್ನು ಪರಿಶೀಲನೆ ಮಾಡಬೇಕು ಅಪರಿತರ ಚಲನವಲನ ಕಂಡರೆ ತಕ್ಷಣ ಪೋಲಿಸ್ ಠಾಣೆಗೆ ಮಾಹಿತಿ ನೀಡ ಬೇಕು ಗ್ರಾಹಕರು ಹೆಚ್ಚು ಹಣ ಹಾಗೂ ಚಿನ್ನದ ಒಡೆವೆಗಳನ್ನು ಬಿಡಿಸಿಕೊಂಡು ಹೊಇಗುವಾಗ ಎಚ್ಚರಿಕೆಯಿಂದ ಇರಬೇಕು ಜತೆಗೆ ಮತ್ತೊಬ್ಬರನ್ನು ಕರೆದುಕೊಂಡು ಬರಬೇಕು ನಿಮ್ಮನ್ನು ಯಾರಾದರೂ ಅಪರಿಚಕಿತ ವ್ಯಕ್ತಿಗಳು ನಿಮ್ಮ ಸುತ್ತ ಮುತ್ತ ಕಂಡು ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಗ್ರಾಹಕರಿಗೆ ಹಾಗೂ ಬ್ಯಾಂಕ್ ಅಧಿಕಾರಿ ಸಿಬ್ಬಂದಿಗಳಿಗೆ ಜಾಗೃತಿ ಮೂಡಿಸಿದರು.




About The Author
Discover more from JANADHWANI NEWS
Subscribe to get the latest posts sent to your email.