ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ತಾಲೂಕಿನ ಮೇಲೂರು ಗ್ರಾಮದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ಬಳಿ ನೂತನವಾಗಿ ನಿರ್ಮಿಸಿರುವ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವವನ್ನು ಫೆಬ್ರವರಿ 9ರ ಭಾನುವಾರ ಆಯೋಜಿಸಲಾಗಿದೆ ಎಂದು ದೇವಸ್ಥಾನದ ಸಂಸ್ಥಾಪಕರಾದ ಪ್ರಕಾಶ್ ಪುರೋಹಿತ್ ಅವರು ತಿಳಿಸಿದ್ದಾರೆ.



ಭಾನುವಾರ ಬೆಳಿಗ್ಗೆ ಯಂತ್ರನ್ಯಾಸ, ಪೀಠ ನ್ಯಾಸ, ತಾಳಿನ್ಯಾಸ, ಕಳಸಾರೋಹಣ, ಅಷ್ಟ ಬಂಧನ ಪ್ರಾಣ ಪ್ರತಿಷ್ಠಾಪನೆ, ಕಲಾ ಹೋಮ, ಪ್ರಧಾನ ಹೋಮ, ಕಳಸ ಪ್ರತಿಷ್ಠಾಪನೆ, ದರ್ಪಣ ದರ್ಶನ, ಮಹಾ ನೈವೇದ್ಯಗಳು ಸೇರಿದಂತೆ ವಿವಿಧ ಪೂಜಾ ಕಾರ್ಯಗಳನ್ನು ಧಾರ್ಮಿಕ ವಿಧಿ ವಿಧಾನಗಳಂತೆ ನೆರವೇರಿಸಿ ನಂತರ ಮಹಾ ಮಂಗಳಾರತಿಯನ್ನು ಮಾಡಿ ತೀರ್ಥ ಪ್ರಸಾದವನ್ನು ನೀಡಲಾಗುವುದು.
ಬೆಳಿಗ್ಗೆ 11ಗಂಟೆಗೆ ಅನ್ನ ಸಂತರ್ಪಣ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಭಕ್ತಾದಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಸಂಸ್ಥಾಪಕರಾದ ಪ್ರಕಾಶ್ ಪುರೋಹಿತ್ ಹಾಗೂ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಬಸವರಾಜು ಬುದ್ಧಿ ಅವರುಗಳು ಮನವಿ ಮಾಡಿದ್ದಾರೆ.

About The Author
Discover more from JANADHWANI NEWS
Subscribe to get the latest posts sent to your email.