ಚಿತ್ರದುರ್ಗಜ.06:
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಾಧನೆ ಯೋಜನೆಯನ್ನು ಡಿ.ಬಿ.ಟಿ ನೇರ ನಗದು ವರ್ಗಾವಣೆ ತಂತ್ರಾಂಶದಡಿ ಸೇವಾಸಿಂಧು ಆನ್‍ಲೈನ್ ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಜನವರಿ 31 ಅರ್ಜಿ ಸಲ್ಲಿಸಲು ಕೊನೆಯ ದಿನ.
ಸಾಧನೆ ಯೋಜನೆಗೆ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ನೇರವಾಗಿಯೂ ಸಹ ತಮ್ಮ ಲಾಗಿನ್ ಬಳಸಿ ಸೇವಾಸಿಂಧು ಪೋರ್ಟಲ್‍ನಡಿ https://sevasindhuservices.karnataka.gov.in ಆನ್‍ಲೈನ್ ಮೂಲಕ ವಿಕಲಚೇತನರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಿದ ಸ್ವೀಕೃತಿಯೊಂದಿಗೆ ಎಲ್ಲಾ ಪೂರಕ ದಾಖಲಾತಿಗಳ ಹಾರ್ಡ್ ಪ್ರತಿಯನ್ನು ಆಯಾ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂ.ಆರ್.ಡಬ್ಲ್ಯೂ)ಗಳಿಗೆ ಸಲ್ಲಿಸುವುದು.
ಮಾಹಿತಿಗಾಗಿ ಎಂ.ಆರ್.ಡಬ್ಲೂಗಳ ದೂರವಾಣಿ ಸಂಖ್ಯೆ ಚಿತ್ರದುರ್ಗ- 9880821934, ಚಳ್ಳಕೆರೆ- 9611266930, ಹಿರಿಯೂರು- 9902888901, 9902898901 ಹೊಳಲ್ಕೆರೆ- 9740030227, ಹೊಸದುರ್ಗ- 9741829990, ಮೊಳಕಾಲ್ಮೂರು- 9742725576 ಗೆ ಸಂಪರ್ಕಿಸಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಬಾಲಭವನ ಆವರಣ, ಸ್ಟೇಡಿಯಂ ಹತ್ತಿರ, ಬುದ್ದನಗರ, ಚಿತ್ರದುರ್ಗ, ದೂ: 08194-235284ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ತಿಳಿಸಿದ್ದಾರೆ.
===========
About The Author
Discover more from JANADHWANI NEWS
Subscribe to get the latest posts sent to your email.