ಚಿಗಳಿಕಟ್ಟೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಗಳಿಕಟ್ಟೆಯಲ್ಲಿ FLN (Foundational Literacy & Numeracy) ಕಲಿಕಾ ಹಬ್ಬವನ್ನು ತಹಸೀಲ್ದಾರ್ ಶ್ರೀ ಸಿದ್ದೇಶ್ ಅವರು ಕಲಿಕಾ ಚಿಟ್ಟೆ ಅನಾವರಣ ಮಾಡುವ ಮೂಲಕ ಉದ್ಘಾಟಿಸಿದರು.


ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು FLN ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಗಳಿಸಲು ಶಿಕ್ಷಕರ ಜೊತೆಗೆ ಪೋಷಕರ ಸಹಕಾರವೂ ಅಗತ್ಯವಿದೆ ಎಂದು ತಿಳಿಸಿದರು.
ತಾಲೂಕು ಕಾರ್ಯನಿರ್ವಹಣಾಧಿಕಾರಿ ಡಾ. ಪ್ರಮೋದ್ ಅವರು ಮಾತನಾಡಿ, ಮಕ್ಕಳಲ್ಲಿ ಮೊಬೈಲ್ ಬಳಕೆಯ ಗೀಳು ಹೆಚ್ಚಾಗುತ್ತಿದ್ದು, ಅದನ್ನು ವಿದ್ಯಾಭ್ಯಾಸದ ಒಳಿತಿಗಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜೊತೆಗೆ “ಪ್ರಶ್ನೆಯೇ ಪ್ರಜ್ಞೆಯಾಗಲಿ” ಎಂದು ಹೇಳಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ FLN ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ಚಿಗಳಿಕಟ್ಟೆ ಗ್ರಾಮದವರಾದ C.R. ಧನಂಜಯ ಅವರು ತಮ್ಮ CLR ಟ್ರಸ್ಟ್ ವತಿಯಿಂದ ಯಲ್ಲದಕೆರೆ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳ 520 ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್‌ಗಳನ್ನು ವಿತರಿಸಿದರು. ಅವರು ಮಾತನಾಡಿ, ಅಕ್ಷರಜ್ಞಾನ ಮತ್ತು ಗಣಿತಜ್ಞಾನದ ಮಹತ್ವ ಹಾಗೂ ಇವೆರಡರ ನಡುವಿನ ವ್ಯತ್ಯಾಸವನ್ನು ವಿವರಿಸಿದರು.
ಇದಕ್ಕೂ ಮೊದಲು ಪ್ರಾಸ್ತಾವಿಕ ನುಡಿಗಳನ್ನಾಡಿದ ಡಯಟ್ ಉಪನ್ಯಾಸಕರಾದ ಶ್ರೀ ರೇವಣ್ಣ ಅವರು, ವಿದ್ಯಾರ್ಥಿಗಳು FLN ಸಾಮರ್ಥ್ಯಗಳನ್ನು ಗಳಿಸಿದರೆ ಅವರ ಮುಂದಿನ ಶೈಕ್ಷಣಿಕ ಬದುಕಿನಲ್ಲಿ ಯಶಸ್ಸು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸ್ಟಡಿ ಚೇರ್‌ಗಳನ್ನು ಕೊಡುಗೆ ನೀಡಿದ ಹಿರಿಯೂರಿನ ಶ್ರೀ ಅಭಿಷೇಕ್ ಸೂರಿ ಹಾಗೂ ಶ್ರೀಮತಿ ಪಲ್ಲವಿ, ಪ್ರಿಂಟರ್ ಕೊಡುಗೆ ನೀಡಿದ ಶ್ರೀಮತಿ ಅಂಬಾದೇವಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಡಯಟ್ ಉಪನ್ಯಾಸಕರಾದ ಶ್ರೀ ಬಿ.ಆರ್. ಪ್ರಸಾದ್, ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿ ಆರ್.ಟಿ.ಎಸ್. ಶ್ರೀನಿವಾಸ್, ರಾಯಚೂರು ಹಾಗೂ ಯಾದಗಿರಿ ಲ್ಯಾಂಡ್ ಆರ್ಮಿ ಎಕ್ಸಿಕ್ಯೂಟಿವ್ ಎಂಜಿನಿಯರ್ C.R. ಧನಂಜಯ್, ಹಿರಿಯೂರು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಶ್ರೀ C.H. ಕಾಂತರಾಜ್, ವೈದ್ಯರಾದ ಶ್ರೀಮತಿ ಪದ್ಮಾ ಶಿವರಾಜ್ (ಮಧುಗಿರಿ), ಓಂಕಾರಪ್ಪ, ಲಕ್ಷ್ಮಣಪ್ಪ, ತಾಲೂಕು ಬಡ್ತಿ ಮುಖ್ಯಗುರುಗಳ ಸಂಘದ ಅಧ್ಯಕ್ಷ ಎಂ. ರಾಜಣ್ಣ, ಯಲ್ಲದಕೆರೆ CRP ದೇವೇಂದ್ರಪ್ಪ ಹೆಚ್, ಮಹಾಸ್ವಾಮಿ, SDMC ಅಧ್ಯಕ್ಷ ಶಾಮಣ್ಣ, ಉಪಾಧ್ಯಕ್ಷೆ ಸುಪ್ರಿಯಾ ನಾಗರಾಜ್ ಸೇರಿದಂತೆ ಶಾಲೆಯ ಮುಖ್ಯಗುರು ಟಿ. ಅಶೋಕ್, ಶಿಕ್ಷಕರಾದ ಮುರುಳಿ, ತಿಪ್ಪೇಸ್ವಾಮಿ, ಹನುಮಂತಪ್ಪ, ಹರೀಶ್, ಗೀತಮ್ಮ, ಜಯಮಾಲಾ ಹಾಗೂ ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು ಮತ್ತು ಯಲ್ಲದಕೆರೆ ಕ್ಲಸ್ಟರ್ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.