ಚಳ್ಳಕೆರೆ :ಪೌಷ್ಟಿಕ ಆಹಾರ ಸೇವನೆಯಿಂದ ದೇಹ ದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ದೈಹಿಕ ಸಾಮರ್ಥ್ಯ ವೃದ್ಧಿಸುತ್ತದೆ ಹಾಗೂ ಆರೋಗ್ಯಕರ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದು ಸಾಣೀಕೆರೆ ಆಡಳಿತ ವೈದ್ಯಧಿಕಾರಿ ಡಾ.ನಾಗರಾಜ್ ತಿಳಿಸಿದರು.





ತಾಲ್ಲೂಕಿನ ಸಾಣೀಕೆರೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನೆಡೆದ ಸಾಣೀಕೆರೆ ವಲಯದ ಪೌಷ್ಠಿಕ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವ್ಯಕ್ತಿಗೂ ದಿನ ನಿತ್ಯದ ಆಹಾರದಲ್ಲಿ ಪೌಷ್ಟಿಕಾಂಶವುಳ್ಳ ಆಹಾರ ಸೇವನೆ ಅಗತ್ಯ ಇದರಿಂದ ಸದೃಡವಾದ ಆರೋಗ್ಯ ಮತ್ತು ಪೌಷ್ಟಿಕ ಮಟ್ಟವನ್ನು ಕಾಪಾಡಲು ಸಾದ್ಯ. ಮುಖ್ಯವಾಗಿ 06 ವರ್ಷದೊಳಗಿನ ಮಕ್ಕಳು, ಗರ್ಭಿಣಿ ಬಾಣಂತಿಯರು, ಕಿಶೋರಿಯರಿಗೆ ಪೌಷ್ಟಿಕಾಂಶವುಳ್ಳ ಸಮತೋಲನ ಆಹಾರ ಅತ್ಯಗತ್ಯ ಸ್ಥಳೀಯವಾಗಿ ದೊರೆಯುವ ಏಕದಳ, ದ್ವಿದಳ ದಾನ್ಯಗಳು, ಮೊಳಕೆ ಭರಿಸಿದ ಕಾಳು, ಸೊಪ್ಪು, ತರಕಾರಿ, ಹಾಗೂ ಬೆಣ್ಣೆ, ತುಪ್ಪ, ಹಣ್ಣುಗಳ ನಿಯಮಿತ ಸೇವನೆಯಿಂದ ಉತ್ತಮ ಪೌಷ್ಟಿಕ ಮಟ್ಟವನ್ನು ಕಾಪಾಡಿಕೊಳ್ಳಬಹುದು. ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆವತಿಯಿಂದ ಗಭಿರ್ಣಿಯರು, ಬಾಣಂತಿಯರು ಹಾಗೂ 1 ರಿಂದ 2 ವರ್ಷದೊಳಗಿನ ಮಕ್ಕಳಲ್ಲಿಅಪೌಷ್ಟಿಕತೆ ಉಂಟಾಗಬಾರದು ಎಂದು ಪೋಷಣ್ ಅಭಿಯಾನ ಯೋಜನೆಯಡಿ ಅಕ್ಕಿ, ಬೇಳೆ, ಹೆಸರುಕಾಳು ಮುಂತಾದ ಆಹಾರವನ್ನು ನೀಡುತ್ತಿದ್ದು ಸರಿಯಾದ ಸಮಯಕ್ಕೆ ಆಹಾರ ಸೇವಿಸಿ ಪೌಷ್ಟಿಕತೆಗೆ ಹೆಚ್ಚಿನ ಆದ್ಯತೆ ನೀಡಿ ಎಂದರು.
ಜಿಲ್ಲಾ ಆರೋಗ್ಯ ಪೌಷ್ಟಿಕ ಮೇಲ್ವಿಚಾರಕರಾದ ಸಣ್ಣ ರಂಗಮ್ಮ ಮಾತಾನಾಡಿ ನಮ್ಮಲ್ಲಿಯೇ ಸ್ಥಳೀಯವಾಗಿ ದೊರೆಯುವ ಸೊಪ್ಪು ತರಕಾರಿಗಳು, ಆಹಾರಪದಾರ್ಥಗಳನ್ನು ನಿಯಮಿತವಾಗಿ ಉಪಯೋಗಿಸುವುದರಿಂದ ಉತ್ತಮ ಆರೋಗ್ಯ,ಪೌಷ್ಟಿಕತೆಯನ್ನು ಹೊಂದಬಹುದಾಗಿದ್ದು ಆಸ್ಪತ್ರೆಯಿಂದ ದೂರವಿರಬಹುದು ಎಂದು ತಿಳಿಸಿದರು. ಹಾಗೂ ಸುಚಿತ್ವಕ್ಕೆ ಹೆಚ್ಚಿನ ಆಧ್ಯತೆ ನೀಡುವುದರಿಂದ ಖಾಯಿಲೆಗಳಿಂದ ದೂರವಿರಬಹುದು ಹಾಗೂ ಹಣದ ಉಳಿತಾಯವನ್ನು ಮಾಡಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾಣೀಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಅಂಗನವಾಡಿ ಸಿಬ್ಬಂದಿಗಳು ಮಕ್ಕಳು ಸಾರ್ವಜನಿಕರು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.