ಜಳ್ಳಕೆರೆ ಜ.7
ಊರಲ್ಲಿ ಊರು ಮಾರಿ ಜಾತ್ರೆಗೆ ಹೋದ ಶಿಕ್ಷಕನ ಮನೆಯ ಬೀಗ ಮುರಿದು ಕಳುವು ಮಾಡಿದ ಪ್ರಕರಣ ನಗರದ ವಿಠಲ್ ನಗರದಲ್ಲಿ ಬೆಳಕಿಗೆ ಬಂದಿದೆ.
ಹೌದು ಇದು ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯ ಸೆಟಲ್ ಕೋರ್ಟ್ ಹಿಂಭಾಗದಲ್ಲಿ ಹನುಮಂತಪ್ಪ ಎಂಬ ಶಿಕ್ಷಕ ಟಿ.ಎನ್ ಕೋಟೆ ಗ್ರಾಮದಲ್ಲಿ ನಡೆಯುವ ಹಬ್ಬಕ್ಕೆಂದು ಕುಟುಂಬ ಸಮೇತ ಊರಿಗೆ ಹೋಗಿದ್ದಾರೆ.
ಮಂಗಳವಾರ ಬೆಳಗ್ಗೆ 8 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ
ಮುಂದಿನ ಬಾಗಿಲಿನ ಇಂಟರ್ ಲಾಕ್ ಹೊಡೆದಿರುವುದು ಕಂಡು ಬಂತು, ನಾನು ಗಾಬರಿಯಾಗಿ ಮನೆಯ ಒಳಗೆ ಹೋಗಿ ನೋಡಲಾಗಿ ಬೆಡ್ ರೂಂನಲ್ಲಿ,
ಬಟ್ಟೆಗಳು, ಕಾಗದ ಪ್ರತಗಳು ಚಲಾಪಿಯಾಗಿ ಬಿದ್ದಿದ್ದು, ರೂಂನಲಿದ್ದ ಕಬ್ಬಿಣದ ಗಾದ್ರೇಜ್ ಬೀರು ಓಪನ್ ಆಗಿದ್ದು, ಬೀರಿನಲ್ಲಿದ್ದ 4 ಸಾವಿರ ಹಣ. 4 ಗ್ರಾಂ ತೂಕದ ಬಂಗಾರದ ಉಂಗುರ, 3 ಗ್ರಾಂ ತೂಕದ ಬಂಗಾರದ ಕಿವಿಯ ಓಲೆ ಇರಲಿಲ್ಲ. ಜ 6 ತಡರಾತ್ರಿ ಯಾರೋ ಕಳ್ಳರು ನಮ್ಮ ಮನೆಯ ಮುಂದಿನ ಬಾಗಿಲಿನ ಇಂಟರ್ ಲಾಕ್ ನ್ನು ಮುರಿದು ಮನೆಯೊಳಗಡೆ ಹೋಗಿ ಮನೆಯಲ್ಲಿನ
ರೂಂನಲ್ಲಿದ್ದ ಬೀರು ವಿನ ಲಾಕ್ ಮುರಿದು ಸುಮಾರು 35 ಸಾವಿರ – ರೂ ಮೌಲ್ಯದ ಬಂಗಾರದ ವಡವೆಗಳನ್ನು ಹಾಗು 4 ಸಾವಿರ
ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ಸ್ಥಳಕ್ಕೆ ಚಳ್ಳಕೆರೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ಬಂದು ಪರಿಶೀಲನೆ ನಡೆಸಿದ್ದಾರೆ.



ಕಳ್ಳತ ಪ್ರಕರಣದಿಂದ ನಗರದ ಜನತೆಯನ್ನು ಬೆಚ್ಚಿಬೀಳಿಸುವಂತೆ ಮಾಡಿದ್ದು ರಾತ್ರಿ ಪಾಳೆಯನ್ನು ಹೆಚ್ಚಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.