March 16, 2026
IMG-20250107-WA0180.jpg

ನಾಯಕನಹಟ್ಟಿ : ಮಧ್ಯ ಕರ್ನಾಟಕ ಮಾಡಿದಷ್ಷು ನೀಡುಬಿಕ್ಷೆ ವಚನ ನುಡಿದಿರುವ ಪವಾಡ ಪುರುಷ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪುಣ್ಯಕ್ಷೇತ್ರದಲ್ಲಿ ನಡೆದ ಹೋಬಳಿ ಮಟ್ಟದಲ್ಲಿ ನಡೆದ ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿಯ ಕೋಟಿನಾಡು 7* ತಂಡ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗೆಲುವು ಸಾದಿಸುವ ಮೂಲಕ ಹೊರಹುಮ್ಮಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಹೋಬಳಿ ಅಧ್ಯಕ್ಷ ಜಾಗನೂರಹಟ್ಟಿ ಪಿ ಮುತ್ತಯ್ಯ ಹೇಳಿದ್ದಾರೆ.
ಮಂಗಳವಾರ ಪಟ್ಟಣದ ಮದ್‌ ತೆರೇಸಾ ಗ್ರಾಮೀಣ ಸಂಸ್ಥೆ ಕಾರ್ಯಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ವತಿಯಿಂದ ನಾಯಕನಹಟ್ಟಿ ಪಟ್ಟಣದಲ್ಲಿಇತ್ತಿಚ್ಚಿಗೆ ನಡೆದ ಎನ್ ಕೆ ಪಿ ಎಲ್ ಸೀಸನ್-2 20 ವರ್ಷದೊಳಗಿನ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ ದ್ವಿತೀಯಾ ಬಹುಮಾನವನ್ನು ಪಡೆದ ಕೋಟಿನಾಡು 7* ತಂಡದ ಮಾಲೀಕರಾದ ಕರವೇ ಕನ್ನಡ ಸೇನೆ ಕಾರ್ಯದಶಿ ಓಬಯ್ಯನಹಟ್ಟಿ ಶಿವಮೂರ್ತಿ ರವರಿಗೆ ಸನ್ಮಾನಸಿ ಅವರು ಮಾತಾನಾಡಿದ ಅವರು ಪ್ರಪ್ರಥಮವಾಗಿ ಹಳ್ಳಿಯಿಂದ ಬಂದು ರಾಜ್ಯಮಟ್ಟ ಕಬ್ಬಡಿ ಪಂದ್ಯಾವಳಿಯಲ್ಲಿ ದ್ವಿತೀಯಾ ಸ್ಥಾನ ಪಡೆದಿರುವುದು ಸಂತಸ ತಂದಿದೆ ಈ ಒಂದು ತಂಡ ಜಿಲ್ಲಾ ಮತ್ತ ರಾಜ್ಯಮಟ್ಟದಲ್ಲಿ ಗೆಲುವು ಸಾಧಿಸಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡಿದರು.
ದ್ವಿತೀಯ ಬಹುಮಾನ 20,000 ರೂಗಳು ನಗದು ಹಾಗೂ ಪಾರಿತೋಷಕವನ್ನು ಕೋಟಿನಾಡು 7* ತಂಡದ ಮಾಲೀಕರಾದ ಕರವೇ ಕನ್ನಡ ಸೇನೆ ಕಾರ್ಯದರ್ಶಿ ಹಾಗೂ ಮದರ್ ತೆರೇಸಾ ಗ್ರಾಮೀಣ ಸಂಸ್ಥೆ ಕಾರ್ಯದರ್ಶಿ ಓಬಯ್ಯನಹಟ್ಟಿ ಶಿವಮೂರ್ತಿ, ತಂಡದ ನಾಯಕ ರಾಜಭಕ್ಷಿ, ಪ್ರಜ್ವಲ್‌, ಮಂಜು, ಕೋಚ್‌ ಚಂದು ಹಾಗೂ ಆಟಗಾರರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯ ಪಿ.ಓಬಯ್ಯ ದಾಸ್ , ಕರವೇ ಕನ್ನಡ ಸೇನೆ ನಗರ ಅಧ್ಯಕ್ಷ ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಜೋಗಿಹಟ್ಟಿ ಮಂಜಣ್ಣ, ಉಪಾಧ್ಯಕ್ಷ ರಾಘವೇಂದ್ರ, ನಗರ ಘಟಕ ಕಾರ್ಯದರ್ಶಿ ನಾಗರಾಜ್‌ ಮೀಸೆ, ಯುವ ಘಟಕ ಅಧ್ಯಕ್ಷ ನವೀನ್‌ ಮದಕರಿ, ಯುವ ಘಟಕ ಕಾರ್ಯದರ್ಶಿ ಪ್ರಸನ್ನ, ವೀರೇಶ್‌, ದೊಡ್ಡ ಮಲ್ಲಯ್ಯ, ನಾಗರಾಜ, ಪತ್ರಕರ್ತರಾದ ಕೆ.ಟಿ ಓಬಳೇಶ್‌, ಹರೀಶ್‌, ಶಿವಮೂರ್ತಿ ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading