ಚಳ್ಳಕೆರೆ: ತಾಲ್ಲೂಕಿನ ನನ್ನಿವಾಳ ಗ್ರಾಂ. ಪಂ. ವ್ಯಾಪ್ತಿಯ ಬಂಡೇಹಟ್ಟಿ ಮತ್ತು ಪೂಜಾರಿ ಪಾಲಯ್ಯನಹಟ್ಟಿ ಗ್ರಾಮದ ರೈತರ ಜಮೀನುಗಳಿಗೆ 3ಪೇಸ್ ವಿದ್ಯುತ್ ಸಂಪರ್ಕ ಕಲ್ಪಿಸುವ ಕಂಬ ಸಂಪೂರ್ಣ ಬಾಗಿದ್ದು, ಇದನ್ನು ಸರಿಪಡಿಸಬೇಕು ಎಂದು ಇಲ್ಲಿನ ರೈತರು ಒತ್ತಾಯಿಸಿದ್ದಾರೆ.



ರೈತರು ಜಮೀನುಗಳಿಗೆ ಹೊತ್ತಿಲ್ಲದ ಹೊತ್ತಲ್ಲಿ ಬೆಳೆಗಳಿಗೆ ನೀರು ಹಾಯಿಸಲು ಬರುತ್ತಾರೆ. ಭಯ ಭೀತಿಯಿಂದಲೆ ಅಕ್ಕಪ್ಕದ ಜಮೀನುಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧಿಸಿದ ಲೈನ್ ಮ್ಯಾನ್ ಗಳಿಗೆ ಮಾಹಿತಿ ನೀಡಲು ಕರೆ ಮಾಡಿದರೂ, ಕರೆ ಕೂಡ ಸ್ವೀಕರಿಸುತ್ತಿಲ್ಲ. ಈ ವೇಳೆ ಯಾವುದೇ ಅನಾಹುತ ಸಂಭವಿಸಿದರೆ ಯಾರು ಜವಬ್ದಾರಿ ಎಂದು ರೈತ ಪಾಪಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ದುರ್ಘಟನೆಗಳು ಜರುಗುವ ಮುನ್ನವೇ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸರಿಪಡಿಸಿ ಮುಂದೆ ಆಗುವ ಅನಾಹುತವನ್ನು ತಪ್ಪಿಸಿ, ರೈತರ ಜೀವ ಉಳಿಸಿ ಎಂದು ಇಲ್ಲಿನ ರೈತರಾದ ಪಾಪಯ್ಯ, ಚಿನ್ನಯ್ಯ, ಬೋರಯ್ಯ, ಓಬಯ್ಯ ಮುಂತಾದವರು ಒತ್ತಾಯಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.