ಚಳ್ಳಕೆರೆ ಜ.7
ಅಮೂಲ್ಯವಾದ ಜೀವ ಜಲ ಚರಂಡಿಪಾಲು ..
ಹೌದು ಇದು ಚಳ್ಳಕೆರೆ ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಸಂಗೊಳ್ಳಿರಾಯಣ್ಣ ರಸ್ತೆಯಿಂದ ಪೋಲಿಸ್ ಠಾಣೆ ಹಾಗೂ ತಾಲೂಕು ಕಚೇರಿಗೆಂದು ಪೈಪ್ ಲೈನ್ ಮೂಲಕ ವಾಣಿವಿಲಾಸ ಸಾಗರದ ನೀರು ಒದಗಿಸಲಾಗುತ್ತಿದ್ದು ಕಳೆದ ಸುಮಾರು 3 ತಿಂಗಳಿಂದೆ ತಾಲೂಕು ಕಚೇರಿ ಆವರಣದಕದಲ್ಲಿ ಅಭಿವೃದ್ಧಿ ಕೆಲಸ ಮಾಡುವಾಗ ಜೆಸಿಬಿ ಯಂತ್ರದಿಂದ ಕೆಲಸಮಾಡುವಾಗ ಪೈಪ್ ಕಿತ್ತು ಹೋಗಿದ್ದು ಅದನ್ನು ಮತ್ತೆ ದುರಸ್ಥಿ ಮಾಡದೆ ಇರುವುದರಿಂದ ಸುಮಾರು ಮೂರು ತಿಂಗಳಿಂದ ಸುಮಾರು 50 ಕ್ಕೂ ಹೆಚ್ಚು.ಕಿ.ಮೀದೂರ ವಾಣಿವಿಲಾಸ ಸಾಗರದಿಂದ ಕೋಟಿ ಕೋಟಿ ಅಬುದಾನ ವೆಚ್ಚಮಾಡಿ ನಗರದಕ್ಕೆ ನೀರು ಸರಬರಾಜು ಮಾಡುವ ಮೂಲಕ ಜನರ ದಸಹ ನೀಗಿಸುತ್ತಿದೆ.
ಸುಮಾರು ಎರಡಯ ವರ್ಷಗಳ ಹಿಂದೆ ಬೇಸಿಗೆ ಬಂತೆಂದರೆ ಸಾಕು ಕುಡಿಯುವ ನೀರಿಗಾಗಿ ಪರದಾಟ ಖಾಲಿ ಕೊಡಗಳೊಂದಿಗೆ ಗಲ್ಲಿ ಗಲ್ಲಿಗಳಲ್ಲಿ ರಸ್ತೆ ತಡೆ ನಗರಸಭೆ ಕಚೇರಿಮುಂದೆ ಅಧಿಕಾರಿಗಳ ವಿರುದ್ದ ಹನಿ ನೀರಿಗಾಗಿ ಪ್ರತಿಭಟನೆ ಮಾಡಲಾಗುತ್ತಿತ್ತು.
ನಗರದ ಜನರ ಕುಡಿಯುವ ನೀರಿನ ದಾಹ ನೀಗಿಸಲು ವಾಣಿವಿಲಾಸ ಸಾಗರದ ನೀರು ಬೀದಿ ಬೀದಿ ಮನೆ ಮನೆ .ಶಾಲಾ ಕಾಲೇಜು .ಸರಕಾರಿ ಕಚೇರಿಗಳಿಗೂ ವಾಣಿವಿಲಾಸ ಸಾಗರದ ನೀರಿನ ಸಂಪರ್ಕ ನೀಡಿರುವುದರಿಂದ ನೀರಿನ ಸಮಸ್ಯೆ ನೀಗಿದಂತಾಗಿದೆ.
ಇಂತಹ ಅಮೂಲ್ಯವಾದ ಜೀವ ಜನ ತಾಲೂಕು ಕಚೇರಿ ಮುಂಭಾಗದಲ್ಲಿ ಸುಮಾರು 3 ತಿಂಗಳಿಂದ ಚರಂಡಿ ಪಾಲಾಗುತ್ತಿದ್ದರೂ ದುರಸ್ಥಿ ಭಾಗ್ಯಕಾಣದ ವ್ಯರ್ಥವಾಗುತ್ತಿದೆ.
ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ನೀರಿನ ಪೈಪ್ ಲೈನ್ ದುರಸ್ಥಿ ಪಡಿಸುವರೇ ಕಾದು ನೋಡ ಬೇಕಿದೆ.
.




About The Author
Discover more from JANADHWANI NEWS
Subscribe to get the latest posts sent to your email.