December 14, 2025
IMG-20251206-WA02481.jpg

ಚಳ್ಳಕೆರೆ ಡಿ.7 ಗಂಗಾ ಕಲ್ಯಾಣ’ ಯೋಜನೆಯಡಿ ಕೊಳವೆ ಬಾವಿ ಕೊರೆಸಿ ಸುಮಾರು ಆರು ತಿಂಗಳು ಕಳೆದರೂ ರೈತನಿಗೆ ವಿದ್ಯುತ್ ಸಂಪರ್ಕ ನೀಡದೆ ಬಿಲ್ ಪಡೆದಿರುವುದು ಬೆಳಕಿಗೆ ಬಂದಿದೆ.

ಹೌದು ಇದು ಚಳ್ಳಕೆರೆ
ತಾಲ್ಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ವರವಿನೋರಹಟ್ಟಿ ರಿ.ಸ.ನಂ: 484/1 ಮಾಲೀಕನಿಗೆ ವಿದ್ಯುತ್ ಪರಿವರ್ತಕದ ಕೆಲಸ ಪೂರ್ಣಗೊಳ್ಳದಿದ್ದರು.. ವಿದ್ಯುತೀಕರಣ ಪೂರ್ಣಗೊಂಡಿದೆ…ಎಂದು ಬಿಲ್ ಪಡೆದಿರು ಸಂದೇಶ ಮೊಬೈಲ್ ಗೆ ಬಂದ ನಂತರ ರೈತನಿಗೆ ಗೊತ್ತಾಗಿದೆ.
ಹಿಂದುಳಿದು ಸಣ್ಣ ರೈತರಿಗೆ ಸರಕಾರ ಗಂಗಾ ಕಲ್ಯಾಣ ಯೋಜನೆ ಜಾರಿಗೆ ತಂದಿದ್ದು ಉಚಿತವಾಗಿ ಕೊಳವೆ ಬಾವಿ ಕೊರೆದು ಪಂಪ್ ಮೋಟರ್ . ವಿದ್ಯುತ್ ಪರಿವರ್ತಕ ನೀಡಿ ವಿದ್ಯುತ್ ಸಂಪರ್ಕ ನೀಡ ಬೇಕು ಅದಕ್ಕಾಗಿ ಬೆಸ್ಕಾಂ ಇಲಾಖೆ ರೈತರ ಜಮೀನಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರೀಯಾ ಯೋಜನೆ ರೂಪಿಸಿ ವಿದ್ಯುತ್ ಕಂಬಗಳನ್ನು ಹಾಕಿ ಲೈನ್ ಎಳೆದು ವಿದ್ಯುತ್ ಸಂಪರ್ಕ ನೀಡಲು ರೈತರ ಜನೀ‌ನಿಗೆ ನೆಟ್ಟಿದ್ದ ವಿದ್ಯುತ್ ಕಂಬಗಳನ್ನು ಜುಲೈ 30 ರಂದು ವಿದ್ಯುತ್ ಕಂಬಗಳನ್ನು ಯಾರೋ ಕಿಡಿಗೇಡಿಗಳು ಮುರಿದು ಹಾಕಿದ್ದು ಸುಮಾರು 5 ತಿಂಗಳು ಕಳೆದರೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ವಿದ್ಯುತ್ ಕಂಬಗಳ ಮುರಿದವರ ವಿರುದ್ದ ದೂರು ನೀಡಿಲ್ಲ ಎಸ್ಟಿ ಸಮುದಾಯದ ರೈತನಿಗೆ ವಿದ್ಯುತ್ ಸಂಪರ್ಕ ನೀಡದೆ ಅಲೆದಾಡಿಸುತ್ತಿದ್ದಾರೆ.
ಏನೇ ಧ್ವೇಶ ಅಸೂಯೆ ಇರಲಿ ಆದರೆ ಜಮೀನಿನ‌ಬದುವಿನಲ್ಲಿ ನೆಟ್ಟಿದ್ದ ವಿದ್ಯುತ್ ಕಂಬದ ಮೇಲೆ ತೋರಿಸಿ ಬುಡಕ್ಕೆ ಮುರಿದು ಹಾಕಿರುವ ಘಟನೆ ಸುಮಾರು ಐದು ತಿಂಗಳು ಕಳೆದರೂ ಗುತ್ತಿಗೆದಾರರಾಗಲಿ ಬೆಸ್ಕಾಂ ಅಧಿಕಾರಿಗಳಲಾಗಲಿ ಯಾವುದೇ ಕ್ರಮಕೈಗೊಳ್ಳದೆ ರೈತನಿಗೆ ವಿದ್ಯುತ್ ಸಂಪರ್ಕ ನೀಡದೆ ಇರುವುದು ಅನುಮಾನಕ್ಕೆ ಎಡೆ ಮಾಡಿದೆ.
ಬಂದಿದೆ.

ಜುಲೈ 30 ರಂದು ವಿದ್ಯುತ್ ಕಂಬಗನ್ನು ನೆಲಕ್ಕುರಿಳಿಸಿರುವುದು

ನನ್ನಿವಾಳ ಗ್ರಾಮಪಂಚಾಯಿತಿಯ ವರವಿನೋರಹಟ್ಟಿ ಗ್ರಾಮದ ಸಮೀಪ ರಿ.ಸ.ನಂ 484/1 ರ ರೈತನಿಗೆ ಸಣ್ಣ ನೀರಾವರಿ ಇಲಾಖೆಯಿಂದ ಶಾಸಕ ಟಿ.ರಘುಮೂರ್ತಿಯವರು ಕೊಳವೆಬಾವಿ ಸಮೃದ್ಧಿ ಯೋಜನೆಯಡಿ ಕೊರೆದಿರುವ ಕೊಳವೆ ಬಾವಿಗೆ ವಿದ್ಯುತ್ ಪರಿವರ್ತಕ ಅಳವಡಿಸಲು ವಿದ್ಯುತ್ ಮಾರ್ಗ ಕಲ್ಪಿಸುವ ವೈಯರ್ ಸಮೇತ ಇದ್ದ ವಿದ್ಯುತ್ ಕಂಬವನ್ನು ಹೊಡೆದು ನೆಲಕ್ಕೆ ಬೀಳಿಸಿದ್ದಾರೆ.

ರೈತನಿಗೆ ವಿದ್ಯುತ್ ಸಂಪರ್ಕ ನೀಡದೆ ವಿದ್ಯುತ್ ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ರೈತನ ಮೊಬೈಲ್ ಗೆ ಸಂದೇಶ ಕಳಿಸಿರುವುದು.

ಕಲ್ಯಾಣ ಕೊಳವೆ ಬಾವಿ ಕೊರೆದ ನಂತರ ವಿದ್ಯುತ್ ಸಂಪರ್ಕ ಕಲ್ಪಿಸಲು ಬೆಸ್ಕಾಂ ಇಲಾಖೆ ವಿದ್ಯುತ್ ಕಂಬ .ಪರಿವರ್ತಕ ಅಳವಡಿಸಲು ಕ್ರೀಯಾ ಯೋಜನೆ ರೂಪಿಸಿ ನಂತರ ವಿದ್ಯುತ್ ಕಂಬಗಳನ್ನು ಅಳವಡಿಸಿ ಪರಿವರ್ತಕ ಹಾಗೂ ಲೈನ್ ಎಳೆಯುವವರೆಗೂ ಸುಮ್ಮನಿದ್ದು ವಿದ್ಯುತ್ ಲೈನ್ ಎಳೆದ ನಂತರ ಏಕಾಏಕಿ ವಿದ್ಯುತ್ ಕಂಬವನ್ನು ಮುರಿದು ಹಾಕಿದ್ದು ಸಂಬಂಧಪಟ್ಟ ಅಧಿಕಾರಿಗಳು ವಿದ್ಯುತ್ ಕಂಬವನ್ನು ಮುರಿದವರ ಬಗ್ಗೆ ದೂರು ನೀಡದೆ ವಿದ್ಯುತ್ ಸಂಪರ್ಕವೂ ನೀಡದೆ ರೈತನಿಗೆ‌ ಅಲೆದಾಡಿಸುತ್ತಿದ್ದಾರೆ.
ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ವಿವಿಧ ಅಭಿವೃದ್ಧಿ ನಿಗಮಗಳ ಅಡಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊರದೆ ಕೊಳವೆ ಬಾವಿಗಳಿಗೆ ನೆಪ ಹೇಳದೆ ವಿದ್ಯುತ್ ಸಂಪರ್ಕ ನೀಡಲು ವಿಳಂಬ ಮಾಡಿವಂತಿಲ್ಲ ಎಂದು ಜಿಲ್ಲಾಧಿಕಾರಿಗಳೂ ಸಹ ಅಧಿಕಾರಿಗಳ ಸಭೆಯಲ್ಲಿ ಹೇಳಿದ್ದರೂ ಸಹ ಮುಖ್ಯಂಮತ್ರಿಗಳ ಹಾಗೂ ಜಿಲ್ಲಾಧಿಕಾರಿಗಳ ಆದೇಶಕ್ಕೂ ಕಿಮ್ಮತ್ತು ನೀಡದ ಬೆಸ್ಕಾಂ ಅಧಿಕಾರಿಗಳು ಹಾಗೂ ಗುತ್ತಿಗೆ ದಾರರು ರೈತರ ಜತೆ ಚಲ್ಲಾಟವಾಡುತ್ತಿದ್ದಾರೆಈಗಲಾದರೂ ಸಂಬಂದಪಟ್ಟ ಅಧಿಕಾರಿಗಳು ರೈತನಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವರೇ ಕಾದು ನೋಡ ಬೇಕಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading