December 14, 2025
IMG-20251206-WA0244.jpg

ಚಿತ್ರದುರ್ಗ ನಗರದ ಪತ್ರಕರ್ತರ ಸಂಘದ ಸಭಾ ಭವನದಲ್ಲಿ ಮಾದಿಗ ಯುವಸೇನೆ, ದಲಿತ ಸಂಘಟನೆಗಳ ಒಕ್ಕೂಟ, ಸ್ಲಂ ಜನಾಂಗಗಳ ಒಕ್ಕೂಟಗಳು ಆಯೋಜಿಸಿದ ಅಂಬೇಡ್ಕರ್ ೬೯ನೇ ಪರಿನಿಬ್ಬಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಎಂ.ವೇದಾಂತ ಏಳಂಜಿ ಅವರು ಆಧುನಿಕ ಭಾರತವನ್ನು ಅಂಬೇಡ್ಕರ್ ಪೂರ್ವ ಮತ್ತು ನಂತರ ಭಾರತದಲ್ಲಿ ಬಾಬಾಸಾಹೇಬರ ಬಗ್ಗೆ ತಿಳಿಯಬೇಕಾದ ಮತ್ತು ನೈತಿಕತೆ ನಡೆಯಬೇಕಾದ ಅಗತ್ಯವಿದೆ. ಸಂವಿಧಾನವು ಪ್ರತಿಯೊಬ್ಬ ಭಾರತೀಯರ ದಿನನಿತ್ಯದ ಬದುಕಿನಲ್ಲಿ ರೇಷನ್ ಕಾರ್ಡ್, ಸಂಜೀವಿನಿ ಕಾರ್ಡ್, ಜಾತಿ ಪ್ರಮಾಣಪತ್ರ, ಆಧಾರ್, ಉಚಿತ ಕಡ್ಡಾಯ ಶಿಕ್ಷಣ, ಉದ್ಯೋಗ, ಅಧಿಕಾರ, ಸ್ವಾತಂತ್ರ್ಯದ ಹಕ್ಕುಗಳನ್ನು ನೀಡುವ ಮೂಲಕ ಪರಿಣಾಮಕಾರಿಯಾಗಿ ಜೀವನ ರೂಪಿಸುತ್ತಿದೆ‌. ಸಂವಿಧಾನ ಪ್ರಜೆಗಳಿಗೆ ಮೊದಲು ನಿಯಮಗಳನ್ನು ರೂಪಿಸಿ ಆನಂತರ ನೀತಿಯನ್ನು ತಿಳಿಸುತ್ತದೆ. ಸಂವಿಧಾನವಾದಿಯಾದವರು ದೇಶದಲ್ಲಿ ಯಾವ ಸ್ಥಾನಕ್ಕಾದರೂ ಏರಬಹುದೆಂದು ಈಗಾಗಲೇ ಸಾಬೀತಾಗಿದೆ. ಸಂವಿಧಾನದ ಮೂಲ ಆಕರ ಜನರೇ ಆಗಿದ್ದರಿಂದ ಸದಾ ಜನರ ಹಿತಾಸಕ್ತಿಯನ್ನು ಕಾಯುತ್ತದೆ
ಬಾಬಾಸಾಹೇಬರು ಬಾಲ್ಯದಿಂದಲೇ ಬುದ್ಧನ ತತ್ವ ಸಂದೇಶಗಳನ್ನು ಅರಿತ ಕಾರಣಕ್ಕೆ ಬುದ್ಧನಂತೆ ಗೌರವಯುತವಾಗಿ ಬಾಳಿ ಬದುಕಿದರು. ಬುದ್ಧನಂತೆ ಜಗತ್ತಿನ ಜನರ ಜ್ಯಾತ್ಯತೀತವಾಗಿ ಕಂಡರು. ಅಂಬೇಡ್ಕರ್ ಅವರು ಭಾರತದ ಜನರ ದುಃಖ ನಿವಾರಣೆ, ಸಮಾನತೆ, ಮೈತ್ರಿ ಕರುಣೆಯಿಂದ ದೇಶ ರೂಪಿಸುವ ಪ್ರಯತ್ನವನ್ನು ಸಂವಿಧಾನದ ಮೂಲಕ ಮಾಡಿದ್ದಾರೆ. ಬುದ್ಧನ ಕ್ರಾಂತಿ, ಬ್ರಾಹ್ಮಣರ ಪ್ರತಿಕ್ರಾಂತಿಗೆ ನಲುಗಿತ್ತು. ಅಂಬೇಡ್ಕರ್ ರ ಕ್ರಾಂತಿ ಸಂವಿಧಾನದ ಮೂಲಕ ಜಾರಿಯಾಗಿ ಭಾರತದ ವಿಶ್ವಕ್ಕೆ ದೊಡ್ಡ ಪ್ರಜಾಪ್ರಭುತ್ವವಾದಿ ದೇಶವಾಗಿ ಮುನ್ನೆಡೆಯುತ್ತಿದೆ.ಒಬ್ಬ ವ್ಯಕ್ತಿ ಕುಟುಂಬವನ್ನು ಪೋಷಣೆ ಮಾಡಲಿಕ್ಕೆ ನಾಲ್ಕೈದು ಪದವಿಗಳನ್ನು ಮಾಡಬಹುದು. ಆದರೆ ಅಂಬೇಡ್ಕರ್ ಕಡುಕಷ್ಟದಲ್ಲೂ ೩೨ ವಿವಿಧ ವಿಷಯಗಳಲ್ಲಿ ಪದವಿ ಪಡೆದರು. ಇಷ್ಟೊಂದು ಪದವಿಗಳು ಕೇಲವ ಜನರ ವಿಮೋಚನೆಗಾಗಿ ಓದಿದರು. ಅಸ್ಪೃಶ್ಯತೆಯ ಚಾರಿತ್ರಿಕ ಮೌಢ್ಯಗಳಿಂದ ಬಿಡಿಸಲು ಓದಿ. ಅಸ್ಪೃಶ್ಯರಿಗಾಗಿ ಹೊಸದಾದ ಚರಿತ್ರೆಯನ್ನು ಬರೆದರು. ಮನುವಾದಿ ಸ್ಥಾಪಿಸಿರುವ ಚಾರ್ತುವರ್ಣ ಪದ್ಧತಿಯ ಕಪಿಮುಷ್ಠಿಗೆ ಒಳಗಾದ ಶೂದ್ರರು ಜಾತಿಕೂಪದಿಂದ ಬರಬೇಕು. ಚಾರ್ತುವರ್ಣವನ್ನು ವಿನಾಶ ಮಾಡುವುದು ಶೂದ್ರ ಜಾತಿಗಳ ಕೈಲಿದೆ ಎಂದು ಹೇಳಿದ್ದಾರೆ. ಭಾರತದ ಹಣಕಾಸಿನ ವ್ಯವಹಾರವನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ತಪ್ಪಿಸಿ ಆರ್.ಬಿ.ಐ.ಸ್ಥಾಪಿಸಿದರು.ರಿಸರ್ವ್ ಬ್ಯಾಂಕ್ ಅನ್ನು ಚುನಾಯಿತ ಜನರ ಕೈಗೆ ಒಪ್ಪಿಸದೇ ಸಂಸ್ಥೆಯಾಗಿ ಸ್ಥಾಪಿಸಿದ್ದರಿಂದ ಭಾರತ ಆರ್ಥಿಕತೆ ಸದೃಢವಾಗಿದ್ದು. ಖಾಸಾಗೀಕರಣದಿಂದ ತಪ್ಪಿಕೊಂಡಿದೆ. ಇಲ್ಲವಾದರೆ ಅದರ ಪ್ರತಿಫಲವನ್ನು ಶೂದ್ರ ದಲಿತ ಜಾತಿಗಳೇ ಅನುಭವಿಸಬೇಕಿತ್ತು.ಮಾದಿಗ ಸೇನೆ ರಾಜ್ಯಾಧ್ಯಕ್ಷರಾದ ಬಿ.ರಾಜಪ್ಪ ಮಾತನಾಡಿ ಬಾಬಾಸಾಹೇಬರ ಹಾದಿಯನ್ನು ಪ್ರತಿಯೊಬ್ಬರು ಅನುಸರಿಸಿ ಸಂವಿಧಾನವನ್ನು ಧರ್ಮವಾಗಿಸಿಕೊಳ್ಳಬೇಕಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹನುಮಂತಪ್ಪ ದುರ್ಗ ಅವರು ಖಾಸಗೀಕರಣವನ್ನು ವಿರೋಧಿಸಿ ರಾಷ್ಟ್ರೀಕರಣಗೊಳಿಸುವ ಬಾಬಾಸಾಹೇಬರು ಆಧುನಿಕ ಭಾರತದ ನಿರ್ಮಾತೃ ಆದರು ಎಂದರು. ಕಾರ್ಯಕ್ರಮದಲ್ಲಿ ದಲಿತ ಹಿರಿಯ ಮುಖಂಡರಾದ ದುರುಗೇಶಪ್ಪ,ಟಿ.ರಾಮು, ಮಂಜಣ್ಣ, ವಕೀಲರಾದ ಹನುಮಂತಪ್ಪ. ಕಣಿವೆ ಮಾರಮ್ಮ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಪತ್ರಕರ್ತ ಜಡೆಕುಂಟೆ ಮಂಜುನಾಥ, ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿನಾಯಕ, ನಾಗರಾಜ್ ಪಾಲೇವ್ವನಹಳ್ಳಿ ಮುಂತಾದವರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading