ಚಿತ್ರದುರ್ಗ ಡಿ.06:
ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ ಗಂಡು ಹೆಣ್ಣು ಎಂಬ ತಾರತಮ್ಯದ ವಿರುದ್ಧ ಧ್ವನಿ ಎತ್ತಬೇಕು ಎಂದು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನ ಘಟಕ ಸಂಯೋಜಕಿ ಲೂಸಿಯಾ ಹೇಳಿದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನ ಘಟಕ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ ಹಿರಿಯೂರು ತಾಲೂಕಿನ ಆದಿವಾಲ ಗ್ರಾಮದ ಸಮುದಾಯ ಭವನದಲ್ಲಿ, ಗುರುವಾರ ಹಮ್ಮಿಕೊಳ್ಳಲಾದ ಲಿಂಗತ್ವ ಆಧಾರಿತ ದೌರ್ಜನ್ಯ ತಡೆ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಣ್ಣು ಕಡಿಮೆ ಗಂಡು ಹೆಚ್ಚು ಎಂಬ ಭಾವನೆ ಕುಟುಂಬದಿAದಲೇ ಪ್ರಾರಂಭವಾಗುತ್ತದೆ. ಆದ್ದರಿಂದ ಕುಟುಂಬದಲ್ಲಿನ ತಾರತಮ್ಯವನ್ನು ಮೊದಲು ತಡೆಯಬೇಕು. ಮಹಿಳೆಯರ ಮೇಲೆ ಎಲ್ಲಡೆಯೂ ದೌರ್ಜನ್ಯಗಳು ಆಗುತ್ತಿರುವುದು ಕಂಡುಬರುತ್ತಿದೆ. ಇದನ್ನು ತಡೆಯಲು ಹೆಣ್ಣು ಮಕ್ಕಳು ಶಕ್ತರಾಗಬೇಕು. ವಿದ್ಯೆ, ಉದ್ಯೋಗದಲ್ಲಿ ಪ್ರಗತಿ ಹೊಂದಬೇಕು. ಆರ್ಥಿಕ ಸ್ವಾಲಂಭಿತನ, ಕಾನೂನುಗಳ ಅರಿವು ಇದ್ದಾಗ ಇಂತಹ ದೌರ್ಜನ್ಯಗಳನ್ನು ತಡೆದು, ಅವುಗಳ ವಿರುದ್ಧ ಧ್ವನಿ ಎತ್ತಿ ಗೆಲ್ಲಬಹುದಾಗಿದೆ ಎಂದು ಲೂಸಿಯಾ ಅಭಿಪ್ರಾಯಪಟ್ಟರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್ ಮಾತನಾಡಿ, ಮಗು ತಾಯಿಯ ಗರ್ಭದಲ್ಲಿರುವಾಗಲೇ ಸ್ಕಾö್ಯನಿಂಗ್ ಮೂಲಕ ಲಿಂಗ ಪತ್ತೆ ಮಾಡಿ, ಹೆಣ್ಣು ಎಂದು ತಿಳಿದು ಬಂದರೆ ಗರ್ಭಪಾತ ಮಾಡಿಸುವ ಅನಿಷ್ಠ ಪದ್ದತಿ ಸಮಾಜದಲ್ಲಿದೆ. ಪೋಷಕರು ಪ್ರೌಢಶಾಲೆಯ ಹಂತದ ಹೆಣ್ಣು ಮಕ್ಕಳಿಗೆ ಬೇಗ ಮದುವೆ ಮಾಡುತ್ತಾರೆ. ಇದರಿಂದ ಹೆಣ್ಣು ಮಕ್ಕಳ ಮೇಲೆ ದೈಹಿಕ ಮಾನಸಿಕ ದುಷ್ಟಪರಿಣಾಮ ಉಂಟಾಗುತ್ತದೆ. ಆದ್ದರಿಂದ ಹೆಣ್ಣು ಭ್ರೂಣ ಹತ್ಯೆ ಹಾಗೂ ಬಾಲ್ಯ ವಿವಾಹ ಪಿಡುಗಾಗಿ ಪರಿಣಮಿಸಿದೆ. ಇವುಗಳು ಕಾನೂನು ರೀತಿಯಾಗಿ ಘೋರ ಅಪರಾಧಗಳಾಗಿವೆ. ಪೋಷಕರು 18 ವರ್ಷ ಪೂರ್ಣಗೊಳ್ಳುವವರೆಗೂ ಯಾವ ಹೆಣ್ಣು ಮಕ್ಕಳಿಗೂ ಮದುವೆ ಎಂಬ ಸರಪಳಿಯಲ್ಲಿ ಬಂಧಿಸಬಾರದು. ಎಲ್ಲಾ ಮಕ್ಕಳಿಗೆ ಸಮಾನ ವಿದ್ಯಾಭ್ಯಾಸ ನೀಡಿದರೆ ಮಾತ್ರ ಉತ್ತಮ ಹಾಗೂ ದೌರ್ಜನ್ಯ ಮುಕ್ತ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಸಂಕಷ್ಟದಲ್ಲಿರುವ ಹೆಣ್ಣುಮಕ್ಕಳ ರಕ್ಷಣೆಗಾಗಿ ಮಹಿಳೆ ಮತ್ತು ಮಕ್ಕಳಿಗೆ ಇಲಾಖೆ ಶ್ರಮಿಸುತ್ತಿದೆ. ಸಾಂತ್ವನ, ಸಖಿ ಒನ್ ಸ್ಟಾಫ್ ಸೆಂಟರ್‌ನಲ್ಲಿ ನೊಂದ ಮಹಿಳೆಯರಿಗೆ ಒಂದೇ ಸೂರಿನಡಿ ಅನೇಕ ನೆರವು ಒದಗಿಸಲಾಗುತ್ತಿದೆ. ನೊಂದವರು ಮಕ್ಕಳ ಸಹಾಯ ವಾಣಿ ಸಂಖ್ಯೆ 1098, ಮಹಿಳಾ ಸಹಾಯವಾಣಿ ಸಂಖ್ಯೆ 181, ಪೊಲೀಸ್ ಸಹಾಯವಾಣಿ ಸಂಖ್ಯೆ 112 ಕರೆ ಮಾಡುವಂತೆ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಪವಿತ್ರ.ಎನ್ ಮಾತನಾಡಿ, ಜಿಲ್ಲೆಯಾದ್ಯಂತ ನವೆಂಬರ್-25 ರಿಂದ ಡಿಸೆಂಬರ್-23 ವರೆಗೆ ಲಿಂಗತ್ವ ಆಧಾರಿತ ದೌರ್ಜನ್ಯ ತಡೆ ಅಭಿಯಾನ ನಡೆಸಲಾಗುತ್ತಿದೆ. ಎಲ್ಲರೂ ಹೆಣ್ಣು ಮಕ್ಕಳ ಹಕ್ಕುಗಳ ಉಲಂಘನೆಯಾಗದAತೆ ತಡೆಯಲು ಪ್ರತಿಜ್ಞೆ ಮಾಡಬೇಕು ಎಂದರು.
ಗ್ರಾಮೀಣಾಭಿವೃದ್ಧಿ ಮಂತ್ರಾಲಯ ನವದೆಹಲಿಯಿಂದ ಆಗಮಿಸಿದ ಸುಪರ್ಣ ಮಾತನಾಡಿ, ದೌರ್ಜನ್ಯ ವಿರುದ್ದ ಎಲ್ಲ ವರ್ಗದ ಮಹಿಳೆಯರು ಕಾನೂನಿನ ನೆರವು ಪಡೆಯಬೇಕು ಎಂದು ತಿಳಿಸಿದರು. ನಂತರ ಆದಿವಾಲ-3ನೇ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು. ಪಟ್ರೆಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಲಿಂಗತ್ವ ಆಧಾರಿತ ರಂಗೋಲಿಗಳನ್ನು ವೀಕ್ಷಿಸಿ ನಂತರ, ಹಿರಿಯೂರಿನ ಸಿಡಿಪಿಓ ಕಛೇರಿಗೆ ಭೇಟಿ ನೀಡಿ ಮೇಲ್ವಿಚಾರಕಾರೊಂದಿಗೆ ಸಭೆ ನಡೆಸಿದರು. ಮಹಿಳಾ ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಿ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯದ ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳು ಒಕ್ಕೂಟದ ಅಧ್ಯಕ್ಷರು ಮತ್ತು ಸದಸ್ಯರು ಅಂಗನವಾಡಿಯ ಮೇಲ್ವಿಚಾರಕಿಯರು ಹಾಗೂ ಕಾರ್ಯಕರ್ತೆಯರು ಸ್ಥಳೀಯ ಸಂಘ ಸಂಸ್ಥೆಗಳ ಮಹಿಳೆಯರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.