January 29, 2026
FB_IMG_1733490247392.jpg

ಚಿತ್ರದುರ್ಗ ಡಿ.06:
ಶುಕ್ರವಾರ ಚಿತ್ರದುರ್ಗ ತಾಲ್ಲೂಕು ಇಸಮುದ್ರ ಗೊಲ್ಲರಹಟ್ಟಿಯಲ್ಲಿ ಅಂತರಾಷ್ಟ್ರೀಯ ಮಹಿಳೆಯರ ವಿರುದ್ಧ ದೌರ್ಜನ್ಯ ತಡೆ ದಿನ ಹಾಗೂ ಮಾನವ ಹಕ್ಕುಗಳು ದಿನಾಚರಣೆ ನಿಮಿತ್ತ 16 ದಿನಗಳ ವಿಶೇಷ ಜಾಗೃತಿ ಅಭಿಯಾನದ ಅಂಗವಾಗಿ ಮೌಢ್ಯ ಪದ್ಧತಿ ನಿವಾರಣೆ ಅರಿವು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಲಿಂಗತಜ್ಞೆ ಗೀತಾ.ಡಿ ಮಾತನಾಡಿ, ಗೊಲ್ಲರಹಟ್ಟಿಗಳಲ್ಲಿ ನಡೆಯುತ್ತಿರುವ ಹಿಂಸಾಚಾರಗಳು, ಮೌಡ್ಯ ಪದ್ಧತಿಗಳ ಆಚರಣೆಗಳು, ಮಹಿಳೆಯರ ವಿರುದ್ಧದ ಶೋಷಣೆಗಳು, ಮಕ್ಕಳಿಗೆ ಆಗುತ್ತಿರುವ ಶೋಷಣೆಗಳು, ಲಿಂಗಾಧಾರಿತ ಅಸಮಾನತೆ ಸೇರಿದಂತೆ ಈ ಆಚರಣೆಗಳ ವಿರುದ್ಧ ಇರುವ ಕಾಯ್ದೆ ಕಾನೂನುಗಳು, ಮಕ್ಕಳ ಸಹಾಯವಾಣಿ ಮತ್ತು 1098, ಮಹಿಳಾ ಸಹಾಯವಾಣಿ 181 ತುರ್ತುಸೇವೆ 121 ಮಕ್ಕಳ ಹಕ್ಕುಗಳು, ಡಿ.ವಿ ಕಾಯ್ದೆ, ಈ ಮೌಧ್ಯಚರಣೆಗಳಿಂದ ಮಹಿಳೆಯರಿಗೆ ಆಗುತ್ತಿರುವಂತಹ ಸಾಮಾಜಿಕ ಶೈಕ್ಷಣಿಕ ದೈಹಿಕ ಹಾಗೂ ಮಾನಸಿಕ ಹಿಂಸೆಗಳ ಬಗ್ಗೆ ಕೂಲಂಕುಶವಾಗಿ ವಿವರಿಸಿದರು.
ಜಿಲ್ಲಾ ಸಂಯೋಜಕ ಚೇತನ್ ಮಾತನಾಡಿ ಗೊಲ್ಲರಹಟ್ಟಿಗಳಲ್ಲಿ ನಡೆಯುತ್ತಿರುವ ಅಮಾನವೀಯ ಗೊಡ್ಡು ಸಂಪ್ರದಾಯಗಳ ವಿರುದ್ಧ ಧ್ವನಿ ಎತ್ತುವಂತೆ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲಾ ಸಭಿಕರಿಗೆ ತಿಳಿ ಹೇಳಿದರು, ಮಹಿಳೆಯರ ಮತ್ತು ಮಕ್ಕಳ ಮೇಲಿನ ಯಾವುದೇ ದೌರ್ಜನ್ಯಗಳ ನಡೆದರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅವರ ನೆರವಿಗೆ ನಿಲ್ಲುತ್ತದೆ ಎಂದು ಮನವರಿಕೆ ಮಾಡಿದರು.
ಗ್ರಾ.ಪಂ.ಕಾರ್ಯದರ್ಶಿ ಮಲ್ಲೇಶಪ್ಪ ಮಾತನಾಡಿ ಗೊಲ್ಲರಹಟ್ಟಿಯ ಮೌಢ್ಯಗಳು ನಿವಾರಣೆಯಾಗದೇ ಹೋದರೆ ಮುಂದಿನ ಪೀಳಿಗೆಯ ಭವಿಷ್ಯ ನಶಿಸುತ್ತದೆ ಎಂದು ತಿಳಿ ಹೇಳಿದರು,
ಕಾರ್ಯಕ್ರಮದಲ್ಲಿ ಭರಮಸಾಗರ ಯೋಜನೆಯ ಮೇಲ್ವಿಚಾರಕಿ ಪ್ರೇಮ, ಗ್ರಾ.ಪಂ.ಸದಸ್ಯರಾದ ರಾಮಚಂದ್ರಪ್ಪ, ನಾಗಪ್ಪ, ಕ್ಯಾತಪ್ಪ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು ಮತ್ತು ಇಸಮುದ್ರ ಗೊಲ್ಲರಹಟ್ಟಿಯ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading