January 29, 2026
IMG-20241206-WA0210.jpg

ವರದಿ: ಕೆ.ಟಿ.ಮೋಹನ್ ಕುಮಾರ್

ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ರಾಂಪುರ, ಮಾದಾಪುರ ಹಾಗೂ ದಡದಹಳ್ಳಿ ಗ್ರಾಮಗಳ ವ್ಯಾಪ್ತಿಗೆ ಸೇರಿದ ಶ್ರೀ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ನವಗ್ರಹ ದೇವಸ್ಥಾನ ಉದ್ಘಾಟನೆಯು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ದೇವಸ್ಥಾನದ ಉದ್ಘಾಟನೆಯ ಹಿನ್ನೆಲೆಯಲ್ಲಿ ದೇವರ ವಿಗ್ರಹಗಳಿಗೆ ಗಂಗಾ ಪೂಜೆ ಹಾಗೂ ಗೋ ಮಾತಾ ಪೂಜೆಯನ್ನು ನೆರವೇರಿಸಿ, ಹೆಣ್ಣು ಮಕ್ಕಳು ಹಾಗೂ ಸುಮಂಗಲಿಯರು ಕಳಸ ಹೊತ್ತು ನಂತರ ಎತ್ತಿನ ಗಾಡಿಯಲ್ಲಿ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಮಂಗಳ ವಾದ್ಯಗಳೊಂದಿಗೆ ರಾಂಪುರ, ಮಾದಾಪುರ ಹಾಗೂ ದಡದಹಳ್ಳಿ ಗ್ರಾಮಗಳಲ್ಲಿ ಮೆರವಣಿಗೆ ನಡೆಸಲಾಯಿತು.

ದೇವಾಲಯದಲ್ಲಿ ಪೀಠ ಪೂಜೆ, ಯಂತ್ರನ್ಯಾಸ, ರತ್ನನ್ಯಾಸ, ಪ್ರಾಣ ಪ್ರತಿಷ್ಠಾಪನೆ, ನವಗ್ರಹಗಳ ಪ್ರಧಾನ ಕಲಸ ಸ್ಥಾಪನೆ, ಅಶ್ವತ ವಿವಾಹ ಪ್ರದಾನ ಹೋಮ, ಕಲಾ ಹೋಮ, ಮಹಾಪೂರ್ಣಾಹುತಿ ನಂತರ ನವಗ್ರಹಗಳಿಗೆ ಫಲ ಪಂಚಾಮೃತ ಅಭಿಷೇಕ, ಕುಂಭಾಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯಗಳನ್ನು ಮಹಾಮಂಗಳಾರತಿಯೊಂದಿಗೆ ನೆರವೇರಿಸಲಾಯಿತು.

ಭಕ್ತಾದಿಗಳು ಹಾಗೂ ಸಾರ್ವಜನಿಕರುಗಳಿಗೆ ಅನ್ನಸಂತರ್ಪಣೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ನಿರ್ಮಾಣಕ್ಕೆ ಹೆಚ್ಚಿನ ರೀತಿಯಲ್ಲಿ ಸಹಾಯವನ್ನು ಮಾಡಿದಂತಹ ದಾನಿಗಳನ್ನು ಸನ್ಮಾನಿಸಲಾಯಿತು.

ದೇವತಾ ಕಾರ್ಯದಲ್ಲಿ ಮಾಜಿ ಸಚಿವರಾದ ಸಾ.ರಾ.ಮಹೇಶ್ ರವರು, ರಾಂಪುರ, ಮಾದಾಪುರ ಹಾಗೂ ದಡದಹಳ್ಳಿ ಗ್ರಾಮಸ್ಥರುಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading