ವರದಿ:: ಕೆ.ಟಿ. ಓಬಳೇಶ್. ನಲಗೇತನಹಟ್ಟಿ.
ನಾಯಕನಹಟ್ಟಿ:: ಮದ್ಯ ಕರ್ನಾಟಕದ ಪ್ರಸಿದ್ಧ ಐತಿಹಾಸಿಕ ಶ್ರೀ ಗುರು ತಿಪ್ಪೇರುದ್ರಸ್ವಾಮಿ ವಾರ್ಷಿಕ ದೊಡ್ಡ ಕಾರ್ತಿಕೋತ್ಸವ ಶುಕ್ರವಾರ ಸಡಗರದಿಂದ ನಡೆಯಿತು.
ಶುಕ್ರವಾರ ಬೆಳಗ್ಗೆಯಿಂದಲೇ ಬಣ್ಣ ಬಣ್ಣದ ಬಾವುಟಗಳಿಂದ ರಥವನ್ನು ಸಿಂಗಾರ ಮಾಡಲಾಗಿತ್ತು.
ಮಧ್ಯಾಹ್ನ 3ಕ್ಕೆ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಸಕಲ ಪೂಜಾ ವಿಧಿ ವಿಧಾನಗಳಿಂದ ಪ್ರತಿಷ್ಠಾಪಿಸಿ ರಥಕ್ಕೆ ಚಾಲನೆ ನೀಡಲಾಯಿತು.










ಭಕ್ತರು ಸಂಭ್ರಮದಿಂದ ರಥವನ್ನು ಹೇಳಿದರು ಭರತ ಸಾಗುವ ದಾರಿ ಯುದ್ಧಕ್ಕೂ ಮಹಿಳೆಯರು ಮಕ್ಕಳು ಬಾಳೆಹಣ್ಣು ಕಾಳುಮೆಣಸು ಬೆಲ್ಲದ ಚೂರನ್ನು ರಥಕ್ಕೆ ಹಾಕಿ ಹರಕೆ ಪೂರೈಸಿದರು ಪಂಜು. ಕರಡಿ ಮಜಲು, ಡೊಳ್ಳು ವಾದ್ಯ ಹಾಗೂ ನಂದಿಕೋಲು ಕುಣಿತ ಆಕರ್ಷಿಸಿತ್ತು.
ಇದೇ ಸಂದರ್ಭದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್. ಗಂಗಾಧರಪ್ಪ, ಹಾಗೂ ಗ್ರಾಮದ ದೈವಸ್ಥರು ಗ್ರಾಮಸ್ಥರು ಸಮಸ್ತ ಹೋಬಳಿಯ ವಿವಿಧ ಹಳ್ಳಿಗಳ ಭಕ್ತಾದಿಗಳು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.