ಅಂಬೇಡ್ಕರ್ ಅವರು ದೇಶ ಕಂಡ ಶತಮಾನದ ವ್ಯಕ್ತಿ. ಮಹಾನ್ ಮಾನತಾ ವಾದಿ,ಇಂಥ ಮಹಾ ಪುರುಷರ ಚಿಂತನೆಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಪರಸ್ಪರ ಪ್ರೀತಿ, ಹೊಂದಾಣಿಕೆಯ ಬಾಳ್ವೆ ಮಾಡುವ ಮೂಲಕ ಸಮಾಜ ದಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಯನ್ನು ತರುವ ನಿಟ್ಟಿನಲ್ಲಿ ಅವರ ತತ್ವ ಸಿದ್ದಾಂತಗಳು ಹೆಚ್ಚು ಅನುಸರಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.











ನಗರದ ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಪಂಚಾಯತಿ ನಗರಸಭೆ ಸಮಾಜ ಕಲ್ಯಾಣ ಇಲಾಖೆ ತಾಲೂಕು ದಲಿತ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ 68ನೇ ಅಂಬೇಡ್ಕರ್ ಪರಿನಿಬ್ಬಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ದೇಶ ವಿಶ್ವವೇ ಮೆಚ್ಚುವಂತೆ ಆಧುನಿಕ ಯುಗದಲ್ಲಿ ಮುಂದುವರೆದ ರಾಷ್ಟ್ರಗಳಲ್ಲಿ ಒಂದಾಗಿದ್ದರೂ ಡಾ. ಬಿಆರ್ ಅಂಬೇಡ್ಕರ್ ಶ್ರಮಪಟ್ಟು ರಚಿಸಿದ ಸಂವಿಧಾನದ ಆಶಯಗಳು ದೇಶದಲ್ಲಿ ಇನ್ನೂ ಜಾರಿಯಾಗದೆ ಅಸ್ಕೃಶ್ಯತೆ ಜಾರಿಯಲ್ಲಿರುವುದು ಬೇಸರದ ಸಂಗತಿಯಾಗಿದೆ .
ಡಾ. ಬಿ ಆರ್ ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನವನ್ನು ಇಡೀ ವಿಶ್ವವೇ ಮೆಚ್ಚಿ ಅವರ ಮರಣದ ದಿನದಂದು ವಿಶ್ವದ 193 ರಾಷ್ಟ್ರಗಳು ತಮ್ಮ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಇಳಿಸಿ ಗೌರವ ಸೂಚಿಸಿದ್ದವು ಇಂತಹ ಮಹಾನ್ ನಾಯಕ ರಚಿಸಿದ ಸಂವಿಧಾನದ ಆಶಯಗಳಿಗೆ ತಕ್ಕಂತೆ ಇಂದಿಗೂ ಸಹ ದೇಶದ ಶಾಸಕಾಂಗ ಕಾರ್ಯಾಗ ನ್ಯಾಯಾಂಗ ಪತ್ರಿಕಾ ರಂಗ ನಡೆದುಕೊಳ್ಳುತ್ತಿಲ್ಲ ಸಮಾಜದಲ್ಲಿ ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆಯನ್ನು ಹೋಗಲಾಡಿಸಬೇಕು ಎಂಬ ಅಂಬೇಡ್ಕರ್ ಅವರ ಆಶಯ ಇಂದಿಗೂ ಕೈಗೂಡಿಲ್ಲ ದೇಶದಲ್ಲಿ ಕಾನೂನುಗಳು ಬಲವಾಗಿದ್ದರು ಹಿಂದುಳಿದ ಸಮುದಾಯಗಳಿಗೆ ಸಿಗಬೇಕಾದ ನ್ಯಾಯ ಸಿಗುತ್ತಿಲ್ಲ ಇಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲಾ ವರ್ಗಕ್ಕೂ ನ್ಯಾಯ ಒದಗಿಸುವ ಮೂಲಕ ಬುದ್ಧ ಬಸವ ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗಿದ್ದಾರೆ ದೇಶದಲ್ಲಿ ಅಸ್ಪೃಶ್ಯತೆ ತೊಲಗಿದಾಗ ಮಾತ್ರ ಅಂಬೇಡ್ಕರ್ ಅವರ ಆತ್ಮಕ್ಕೆ ಶಾಂತಿ ದೊರೆಯಲು ಸಾಧ್ಯ ಎಂದರು.
ತಾಪಂ ಇಓ ಶಶಿಧರ್ ಮಾತನಾಡಿ ಅಂಬೇಡ್ಕರ್ ಸಂವಿಧಾನದಲ್ಲಿ ಪ್ರತಿಯೊಂದು ಶೋಷಿತ ವರ್ಗಕ್ಕೂ ನ್ಯಾಯವನ್ನು ಒದಗಿಸಿದ್ದಾರೆ.ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಂಡು ಎಲ್ಲರೂ ಶಿಕ್ಷಣದಲ್ಲಿ ಹಾಗೂ ಉದ್ಯೋಗ ರಂಗದಲ್ಲಿ ಉನ್ನತ ಸ್ಥಾನವನ್ನು ಪಡೆದು ಅಂಬೇಡ್ಕರ್ ಅವರ ಆಶಯಗಳನ್ನು ಸಾಕಾರಗೊಳಿಸಬೇಕೆಂದು ತಿಳಿಸಿದರು.
ಸಿಡಿಪಿಒ ಸಿ ಹರಿಪ್ರಸಾದ್ ಮಾತನಾಡಿ ಅಂಬೇಡ್ಕರ್ ತಮ್ಮ ಜ್ಞಾನವನ್ನು ಬಳಸಿಕೊಂಡು ಹಣ ಮಾಡಲು ಹೋಗಲಿಲ್ಲ ಬಡವರ ಬಗ್ಗೆ ಚಿಂತನೆ ಮಾಡಿ ಸಮಾನತೆ ತರಬೇಕು ಎಂದು ಚಿಂತಿಸಿದರು ಸ್ವಾತಂತ್ರ್ಯ ಬಂದ ಇಷ್ಟು ವರ್ಷಗಳಾದರೂ ದೀನ ದಲಿತರ ಉದ್ದಾರವಾಗಿಲ್ಲ ಎಲ್ಲಾ ದಲಿತರು ಸಂಘಟನೆಯಾಗುವ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಬೇಕು. ಅಂಬೇಡ್ಕರ್ ರವರ ಸ್ವಾಭಿಮಾನದ ತತ್ವವನ್ನು ನಾವೆಲ್ಲರೂ ಪಾಲಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಚೈತುನ್ ಬಿ ನಗರಸಭೆ ಸದಸ್ಯರಾದ ಕವಿತಾ. ಸುಮಾ. ರಮೇಶ್ ಗೌಡ .ಎಂ ಜೆ ರಾಘವೇಂದ್ರ. ಮಲ್ಲಿಕಾರ್ಜುನ ಎಂ ಇಂದ್ರೇಶ್ .ಚಳ್ಳಕೆರಪ್ಪ ಆರ್ ವೀರಭದ್ರ ನಗರಸಭೆ ಪೌರಾಯುಕ್ತ ಜಗ್ಗಾರೆಡ್ಡಿ ಗದ್ದಿಗೆ ತಿಪ್ಪೇಸ್ವಾಮಿ. ರಂಗಸ್ವಾಮಿ .ದೇವರಾಜ್ ಶ್ರೀನಿವಾಸ್ .ಬೂತಲಿಂಗಪ್ಪ. ಮಂಜುನಾಥ್. ಕೆ ಎಸ್ ಸುರೇಶ್. ಶಿವರಾಜ್. ದೇವಲ ನಾಯಕ್ .ಭೂತಪ್ಪ ಮೈತ್ರಿ ದ್ಯಾಮಣ್ಣ ಉಮೇಶ್ ಚಂದ್ರ ಬ್ಯಾನರ್ಜಿ. ದಲಿತ ಸಂಘಟನೆಯ ಮುಖಂಡರು ಇತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.