ಚಳ್ಳಕೆರೆ …ಅಪಘಾತಗಳನ್ನು ತಡೆಗಟ್ಟಲು ಮತ್ತು ಜೀವಗಳನ್ನು ರಕ್ಷಿಸಲು ರಸ್ತೆ ಸುರಕ್ಷತಾ ಕ್ರಮಗಳು ನಿರ್ಣಾಯಕವಾಗಿವೆ ಎಂದು ಪ್ರಾಂಶುಪಾಲೆ ಪದ್ಮಾವತಿ ಹೇಳಿದರು…





ನಗರದ ವರ್ಧಮಾನ್ ಪಬ್ಲಿಕ್ ಶಾಲೆ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷಿತ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಾಗೃತಿ ಜಾಥಕ್ಕೆ ಚಾಲನೆ ನೀಡಿ,ನಂತರ ಬಸವೇಶ್ವರ ವೃತ್ತದವರೆಗೂ ಮುಖ್ಯರಸ್ತೆಯಲ್ಲಿ ಜಾ ಥಾ ನಡೆಸಿ ಬಸವೇಶ್ವ ವೃತ್ತದಲ್ಲಿ ಸಾರ್ವಜನಿಕರನ್ನು ಕುರಿತು ಮಾತನಾಡಿ, ಕಾರು ಚಾಲನೆ ಮಾಡುವ ಚಾಲಕರು ಯಾವಾಗಲೂ ಸೀಟ್‌ಬೆಲ್ಟ್ ಅನ್ನು ಧರಿಸಿದರೆ ಒಳ್ಳೆಯದು. ಇದು ಅಪಘಾತದಲ್ಲಿ ಗಾಯದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಕ್ರಮಬದ್ಧವಾದ ಹರಿವನ್ನು ನಿರ್ವಹಿಸಲು ಮತ್ತು ಘರ್ಷಣೆಯ ಸಾಧ್ಯತೆಗಳನ್ನು ಕಡಿಮೆ ಮಾಡಲು ವೇಗ ಮಿತಿಗಳು ಮತ್ತು ಟ್ರಾಫಿಕ್ ಸಿಗ್ನಲ್‌ಗಳನ್ನು ಅನುಸರಿಸಿ. ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವುದನ್ನು ತಪ್ಪಿಸಿ; .ವಾಹನಗಳಲ್ಲಿ ಬ್ರೇಕ್‌ಗಳು, ಟೈರ್‌ಗಳು ಮತ್ತು ದೀಪಗಳನ್ನು ನಿಯಮಿತವಾಗಿ ಪರಿಶೀಲಿಸುವ ಮೂಲಕ ನಿಮ್ಮ ವಾಹನವು ಉತ್ತಮ ಸ್ಥಿತಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ.
ಬೈಕ್ ಸವಾರರು ಬೈಕ್ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೇಟ್ ಧರಿಸಬೇಕು ಇದರಿಂದ ಅಪಘಾತವಾದಾಗ ತಲೆಗೆ ಪೆಟ್ಟು ಬೀಳುವುದು ತಪ್ಪಿ ಅಪ್ಪಿ ಜೀವ ಉಳಿಯುತ್ತದೆ. ಶಾಲಾ ಕಾಲೇಜು ಇರುವಂತಹ ಸ್ಥಳಗಳಲ್ಲಿ ಸುರಕ್ಷಿತವಾಗಿ ನಿಧಾನವಾಗಿ ವಾಹನಗಳನ್ನು ಚಾಲನೆ ಮಾಡಿಕೊಂಡು ಹೋಗಬೇಕು. ಪ್ರಯಿಯೊಬ್ಬರು ಪರಿಸರ ಸ್ನೇಹಿ ಸೈಕಲ್ ಗಳನ್ನ ಬಳಸುವ ಮೂಲಕ ಪರಿಸರ ಉಳಿವಿಗಾಗಿ ಪಣತೊಡಬೇಕು. ಇಂತಹ ಜಾಗೃತಿ ಜಾಥಗಳ ನಡೆಸುವ ಮೂಲಕ ಪ್ರತಿಯೊಬ್ಬರಲ್ಲೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮಾಡಬೇಕು ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಪೂರ್ಣಿಮಾ ಮಾತನಾಡಿ. ಪೋಲಿಸ್ ಇಲಾಖೆಯಿಂದ ಸಾಕಷ್ಟು ರಸ್ತೆ ಸುರಕ್ಷತಾ ಕಾರ್ಯಕ್ರಮಗಳನ್ನು ಮಾಡಿದ್ದರು ಗೊತ್ತಿದ್ದೋ ಗೊತ್ತಿಲ್ಲದೆ, ಸಾಕಷ್ಟು ಅಪಘಾತಗಳಾಗುತ್ತಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅಪಘಾತದಲ್ಲಿ ಸಾಯುವರ ಸಂಖ್ಯೆ ಹೆಚ್ಚುತ್ತಿದೆ. ಅಪಾಯ ಇರುವಂತಹ ಸ್ಥಳಗಳಲ್ಲಿ ನಾಮಫಲಕಗಳಿದ್ದರೂ ಯಾರು ಪಾಲಿಸುವುದಿಲ್ಲ. ಸಮಯ ಪ್ರಜ್ಞೆ ಹಾಗೂ ಜಾಗೃತಿ ಹಾಗೂ ಜೀವನದ ಮೇಲೆ ಭಯ ಇವೆರಡೂ ಇದ್ದರೆ ಅಪಘಾತಗಳನ್ನ ತಡೆಗಟ್ಟಬಹುದು ಎಂದರು. ಈ ಜಾಗೃತಿ ಜಾಥಾ ಕಾರ್ಯಕ್ರಮ ದಲ್ಲಿ ಕ್ಷಕಿಯಾರಾದ ಅಶ್ವಿನಿ ,ನೇತ್ರಾವತಿ ,ವನಿತಾ, ಅನುಪ, ನಝಯಾ, ಶಿಲ್ಪ ಶಿವಕುಮಾರ್ ಇದ್ದರು ಹಾಗೂ ವಿದ್ಯಾರ್ಥಿಗಳು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.