March 18, 2026
d6-tm3A.jpeg

ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘ ರಂಗಭೂಮಿಗೆ ಸಲ್ಲಿಸಿದ ಜೀವಮಾನದ ಕೊಡುಗೆಯನ್ನು ಮನ್ನಿಸಿ ಪ್ರತಿವರ್ಷ ಕೊಡಮಾಡುವ ಪ್ರತಿಷ್ಠಿತ `ಶ್ರೀ ಶಿವಕುಮಾರ ಪ್ರಶಸ್ತಿ’ಗೆ ಈ ಬಾರಿ ಬೆಂಗಳೂರಿನ ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿ. ರಂಗಭೂಮಿಯ ತಾಜಾ ಪ್ರತಿಭೆ, ಹಿರಿಯ ಕಲಾವಿದೆ ಉಮಾಶ್ರೀ ಅವರನ್ನು ಆಯ್ಕೆ ಮಾಡಿದ್ದು ಪ್ರಶಸ್ತಿಯು ೫೦ ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದ್ದು, ಪ್ರಶಸ್ತಿಯನ್ನು ಇದೇ ನವೆಂಬರ್ ೭ ರಂದು ಶುಕ್ರವಾರ ಸಂಜೆ ಸಾಣೇಹಳ್ಳಿಯಲ್ಲಿ ನಡೆಯುವ ರಾಷ್ಟಿçÃಯ ನಾಟಕೋತ್ಸವ’ದ ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.

ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ಸಾಧನೆಯಿಂದ ವ್ಯಕ್ತಿ ಸ್ಥಾನ-ಮಾನಗಳಿಗಿಂತ ದೊಡ್ಡವರಾಗಬೇಕು. ಆಗ ಅವರನ್ನು ಗೌರವಿಸುವ ಮೆಚ್ಚುವ, ಪ್ರಶಸ್ತಿ ಪದವಿ ನೀಡುವ ದಂಡೇ ಇರುತ್ತದೆ. ಆದರೆ ಉಮಾಶ್ರೀ ಅವರ ಸಾಧನೆಯ ಹಿಂದೆ ಎಂತಹ ಪರಿಶ್ರಮ ಇತ್ತು. ಎಷ್ಟು ಕಷ್ಟ ನಿಷ್ಟುರ ಅನುಭವಿಸಿದರು. ಹೇಗೆ ಜನರ ಉಪೇಕ್ಷೆಗೆ ಒಳಗಾಗಿದ್ದರು ಎಂದು ಅನೇಕರಿಗೆ ಗೊತ್ತಿರುವುದಿಲ್ಲ. ಶ್ರೀಮತಿ ಉಮಾಶ್ರೀ ಅವರು ಇಂದು ರಂಗಭೂಮಿ, ಚಲನಚಿತ್ರ, ರಾಜಕೀಯ ಕ್ಷೇತ್ರದಲ್ಲಿ ಪ್ರಖ್ಯಾತರು ಎನ್ನುವುದು ಮಾತ್ರ ಗೊತ್ತು. ಹಾಗಾಗಿ ಅವರನ್ನು ಮಾತನಾಡಿಸಲು, ಭಾವಚಿತ್ರ ತೆಗೆಸಿಕೊಳ್ಳಲು ಹಾತೊರೆಯುವವರು ಸಾಕಷ್ಟು ಜನರಿದ್ದಾರೆ ಇದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು (ಸಾಕವ್ವ) ಶ್ರೀಮತಿ ಉಮಾಶ್ರೀಯವರ ಬಗ್ಗೆ ಹೇಳಿದ ಮನದಾಳದ ಮಾತುಗಳು.
ಉಮಾಶ್ರೀಯವರು ಇದ್ದಕ್ಕಿದ್ದಂತೆ ಈ ಹಂತಕ್ಕೆ ಬಂದವರಲ್ಲ. ರಂಗಭೂಮಿಗೆ ಬರುವ ಮುನ್ನ ಹೊಟ್ಟೆ ಪಾಡಿಗಾಗಿ ಏನೇನೋ ಉದ್ಯೋಗ ಮಾಡಿದ್ದಾರೆ. ರಂಗಭೂಮಿಗೆ ಬಂದನAತರ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿದ್ದು ಸಿಜಿಕೆ ನಿರ್ದೇಶನದ ‘ಸಾಕವ್ವ’ ನಾಟಕ. ಅಲ್ಲಿಂದ ಮುಂದೆ ಸಾಕವ್ವ ಎಲ್ಲರ ಗಮನ ಸೆಳೆಯುವ ನಟಿಯಾದಳು. ಯಾವ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುವ ಅಭಿಜಾತ ಕಲಾವಿದೆ ಎಂದು ನಿರ್ದೇಶಕರ, ಪ್ರೇಕ್ಷಕರ ಗಮನ ಸೆಳೆದರು. ಅವರ ‘ಸಾಕವ್ವ’ನ ಪಾತ್ರವನ್ನು ಸಾಣೇಹಳ್ಳಿಯಲ್ಲೇ ನೋಡಿ ನಾವು ಸಹ ಅವರ ಬಗ್ಗೆ ವಿಶೇಷ ಪ್ರೀತ್ಯಾದರ ಬೆಳೆಸಿಕೊಂಡವರು. ಅವರಿಗೆ ಸಾಣೇಹಳ್ಳಿಗೆ ಬರುವುದೆಂದರೆ ತವರು ಮನೆಗೆ ಬಂದಷ್ಟೇ ಖುಷಿ. ಹಾಗಾಗಿ ನಮ್ಮನ್ನು ‘ಅಪ್ಪಾಜಿ’ ಎಂದೇ ಕರೆಯುತ್ತಿದ್ದರು. ರಂಗಭೂಮಿಯೇ ಕಾರಣವಾಗಿ ಮುಂದೆ ಅವರನ್ನು ಚಲನಚಿತ್ರ ಮತ್ತು ರಾಜಕೀಯ ಕ್ಷೇತ್ರ ಸ್ವಾಗತಿಸಿ ಏನೆಲ್ಲ ಸ್ಥಾನಮಾನಗಳನ್ನು ತಂದುಕೊಟ್ಟಿದೆ. ಈಗಲೂ ಅವರ ಮೊದಲ ಆದ್ಯತೆ ರಂಗಭೂಮಿ, ಮಂತ್ರಿಗಳಾಗಿದ್ದಾಗಲೂ ನಾಟಕದಲ್ಲಿ ಪಾತ್ರ ನಿರ್ವಹಿಸುತ್ತಿದ್ದುದು. ಇತ್ತೀಚೆಗೆ ‘ಶರ್ಮಿಳೆ’ ಎನ್ನುವ ಏಕವ್ಯಕ್ತಿ ಪ್ರದರ್ಶನದ ಮೂಲಕ ತಮ್ಮ ಪ್ರತಿಭೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿದ್ದಾರೆ. ಅಂಥ ಅಭಿಜಾತ ಕಲಾವಿದೆ ಉಮಾಶ್ರೀ ಅವರು ಶ್ರೀ ಶಿವಕುಮಾರ ಪ್ರಶಸ್ತಿಗೆ ಭಾಜನರಾಗಿರುವುದು ತುಂಬಾ ಸಂತೋಷ ನಮ್ಮ ಪ್ರಶಸ್ತಿಗಿಂತ ಮೊದಲೇ ಹಲವಾರು ಪ್ರಖ್ಯಾತ ಪ್ರಶಸ್ತಿಗಳು ಅವರಿಗೆ ಬಂದಿವೆ. ಇತ್ತೀಚೆಗೆ ಡಾ. ರಾಜಕುಮಾರ ಪ್ರಶಸ್ತಿ ಕೂಡ ಅವರನ್ನು ಅರಸಿಕೊಂಡು ಬಂದಿದೆ. ಅವರಿಂದ ರಂಗಭೂಮಿಗೆ ಇನ್ನೂ ಮಹತ್ವದ ಕಾಣಿಕೆ ಸಲ್ಲುವಂತಾಗಲಿ ಎಂದು ಪಂಡಿತಾರಾಧ್ಯ ಶ್ರೀಗಳು ಈ ಸಂಧರ್ಬದಲ್ಲಿ ಶುಭ ಹಾರೈಸಿದ್ದಾರೆ.
ಇದುವರೆಗೂ ಪ್ರಸನ್ನ(೨೦೦೪), ಸಿಜಿಕೆ(೨೦೦೫), ಪಿ ಜಿ ಗಂಗಾಧರಸ್ವಾಮಿ (೨೦೦೬), ಅಶೋಕ ಬಾದರದಿನ್ನಿ(೨೦೦೭), ಮಾಲತಿಶ್ರೀ (೨೦೦೮), ೨೦೦೯ರಲ್ಲಿ ಅತಿವೃಷ್ಠಿ ಕಾರಣ ನೀಡಿಲ್ಲ. ಸಿ ಬಸವಲಿಂಗಯ್ಯ (೨೦೧೦), ಬಿ ಜಯಶ್ರೀ (೨೦೧೧), ಡಾ. ಕೆ ಮರುಳಸಿದ್ಧಪ್ಪ (೨೦೧೨), ಚಿದಂಬರರಾವ್ ಜಂಬೆ (೨೦೧೨), ಕೋಟಗಾನಹಳ್ಳಿ ರಾಮಯ ( ೨೦೧೪), ಡಾ. ಸುಭದ್ರಮ್ಮ ಮನ್ಸೂರು (೨೦೧೫), ಲಕ್ಷಿö್ಮಚಂದ್ರಶೇಖರ್ (೨೦೧೬), ಶ್ರೀನಿವಾಸ ಜಿ ಕಪ್ಪಣ್ಣ (೨೦೧೭), ಬಸವರಾಜ ಬೆಂಗೇರಿ (೨೦೧೮), ಟಿ ಎಸ್ ನಾಗಾಭರಣ (೨೦೧೯), ೨೦೨೦ ರಲ್ಲಿ ಕರೋನಾ ಕಾರಣದಿಂದ ನೀಡಿಲ್ಲ. ಕೆ ವಿ ನಾಗರಾಜಮೂರ್ತಿ (೨೦೨೧), ಡಾ. ಎಂ ಜಿ ಈಶ್ವರಪ್ಪ (೨೦೨೨), ಶಶಿಧರ ಅಡಪ (೨೦೨೩), ಮಹಾಂತೇಶ್ ಗಜೇಂದ್ರ ಗಡ (೨೦೨೪) ಪ್ರಸ್ತುತ ಸಾಲಿನಲ್ಲಿ ರಂಗ ಭೂಮಿಯ ಹಿರಿಯ ಕಲಾವಿದೆ ಹಾಗೂ ಚಲನ ಚಿತ್ರ ನಟಿ ಶ್ರೀಮತಿ ಉಮಾಶ್ರೀ (೨೦೨೫) ಇವರಿಗೆ ನೀಡುತ್ತಾ ಬರಲಾಗಿದೆ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading